Advertisement

ಬ್ರಹ್ಮಾವರ: ತೆಂಗಿನ ಮರದ ಸ್ನೇಹಿತರು ತರಬೇತಿ ಕಾರ್ಯಕ್ರಮ

01:57 AM Jan 23, 2020 | Team Udayavani |

ಬ್ರಹ್ಮಾವರ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೆಂಗಿನ ಮರದ ಸ್ನೇಹಿತರು ಹಾಗೂ ಸಾವಯವ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ| ಕೆಂಪೇಗೌಡ ಅವರು ಉದ್ಘಾಟಿಸಿ, ಮಾತನಾಡಿ, ತಿಂಗಳಿಗೊಮ್ಮೆ ಆದರೂ ರೈತರ ಸಭೆ ಕರೆದು ಅವರ ಸಮಸ್ಯೆಯನ್ನು ಪರಿಹರಿಸಿ ಅವರನ್ನು ಹುರಿದುಂಬಿಸಿದರೆ ಸಾವಯವ ಸಂತೆಯನ್ನು ಮುಂದುವರಿಸ ಬಹುದು. ಇದಕ್ಕೆ ಇಲಾಖೆಯಿಂದ ಬೇಕಾದ ಎಲ್ಲಾ ತಾಂತ್ರಿಕ ಸಹಾಯವನ್ನು ಮಾಡುತ್ತೇವೆ ಎಂದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ಮತ್ತು ಸಹ ಸಂಶೋಧನಾ ನಿರ್ದೇಶಕ ಡಾ| ಎಸ್‌.ಯು. ಪಾಟೀಲ್‌ ಅವರು ಅಧ್ಯಕ್ಷತೆ ವಹಿಸಿ, ಸಾವಯವ ಉತ್ಪನ್ನ ಮಾಡುವುದರಲ್ಲಿ ನಮ್ಮ ದೇಶವೇ ಮುಂಚೂಣಿಯಲ್ಲಿದೆ ಆದರೆ ಸಾವಯವ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಿಸಲು ಸುಧಾರಿತ ಬೇಸಾಯ ಕ್ರಮ, ತಂತ್ರಜ್ಞಾನದ ಅವಶ್ಯಕತೆ ಇದೆ ಎಂದರು.

ಸಾವಯವ ಒಕ್ಕೂಟದ ನಿರ್ದೇಶಕ ದೇವದಾಸ್‌ ಹೆಬ್ಟಾರ್‌ ಅವರು ಮಾತನಾಡಿ, ಉಡುಪಿ ಮತ್ತು ದ.ಕ. ಜಿಲ್ಲೆಯ ತೆಂಗಿನಕಾಯಿಗೆ ಬೇಡಿಕೆ ಜಾಸ್ತಿ ಇದೆ. ಸಾವಯವ ಉತ್ಪನ್ನಗಳಿಗೂ ಬೇಡಿಕೆಯ ಕೊರತೆಯಿಲ್ಲ ಆದರೆ ಅದನ್ನು ಮಾರುಕಟ್ಟೆಗೆ ತರುವಲ್ಲಿ ಸ್ವಲ್ಪ ಮಾಹಿತಿ ಪಡೆದುಕೊಂಡರೆ ಸಾವಯವ ಕೃಷಿಯಲ್ಲಿ ಯಶಸ್ಸು ಕಾಣಬಹುದು ಎಂದರು.

ಕೆ.ವಿ.ಕೆ.ಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ| ಬಿ. ಧನಂಜಯ, ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅ ಧೀಕ್ಷಕ ಡಾ| ಶಂಕರ್‌ ಎಂ. ಮಾಹಿತಿ ನೀಡಿದರು. ವಿಜ್ಞಾನಿಗಳಾದ ಚೈತನ್ಯ ಎಚ್‌.ಎಸ್‌ ಸ್ವಾಗತಿಸಿ, ಡಾ| ಎನ್‌. ಇ. ನವೀನ್‌ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸಚಿನ್‌ ಯು.ಎಸ್‌. ವಂದಿಸಿದರು.

Advertisement

ತೆಂಗಿನ ಕಾಯಿಯಿಂದ
ಹಲವು ಮೌಲ್ಯ ವರ್ಧಕ ಉತ್ಪನ್ನ
ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಲಕ್ಷ್ಮಣ್‌ ಅವರು ಮಾತನಾಡಿ, ತೆಂಗಿನ ಕಾಯಿಯಿಂದ ಸುಮಾರು 150ರಿಂದ 200 ಮೌಲ್ಯವರ್ಧನ ಉತ್ಪನ್ನಗಳನ್ನು ತಯಾರಿಸಬಹುದು ಹಾಗೂ ಮುಂದಿನ 21 ದಿನದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದರ ಪೂರ್ತಿ ಲಾಭವನ್ನು ಪಡೆದುಕೊಳ್ಳುವಂತೆ ರೈತರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next