Advertisement
2017ರ ಮಾರ್ಚ್ ಬಜೆಟ್‌ನಲ್ಲಿ ಬ್ರಹ್ಮಾವರ ಸೇರಿದಂತೆ 49 ಹೊಸ ತಾಲೂಕುಗಳ ಘೋಷಣೆ ಮಾಡಲಾಗಿತ್ತು. ಅನಂತರತಾ| ಕೇಂದ್ರಕ್ಕೆ ಅಗತ್ಯವಿರುವ ಒಂದೊಂದೆ ಬೇಡಿಕೆಗಳು ಕಾರ್ಯಗತವಾಗುತ್ತಿದೆ. ಹೀಗಾಗಿ ಮುಂದಿನ ಹಂತದಲ್ಲಿ ತಾ| ಕೋರ್ಟ್‌ನ ಬೇಡಿಕೆಯನ್ನು ಸರಕಾರ ಈಡೇರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ತಾಲೂಕು ಕೋರ್ಟ್ ರಚನೆಯ ಹೋರಾಟ ಚುರುಕುಗೊಳಿಸುವ ನಿಟ್ಟಿನಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ನಾಗರಾಜ್ ಮಾಲ್ತಾರು ಹಾಗೂ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ನಿರಂಜನ್ ಹೆಗ್ಡೆ, ಕಾರ್ಕಳದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಈಗಾಗಲೇ ವಕೀಲರು ಸಭೆ ನಡೆಸಿದ್ದು, ಬ್ರಹ್ಮಾವರ ವಕೀಲರ ಸಮಿತಿ ಎನ್ನುವ ಸಂಸ್ಥೆಯನ್ನು ಕಾಡೂರು ಪ್ರವೀಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ರಚಿಸಿದ್ದಾರೆ. ಈ ಸಮಿತಿಯ ನೇತೃತ್ವದಲ್ಲಿ ಮುಂದಿನ ಹೋರಾಟಗಳು ನಡೆಯಲಿದೆ. 52 ಗ್ರಾಮಗಳ ವ್ಯಾಪ್ತಿ
ಬ್ರಹ್ಮಾವರ ತಾ| ಕೇಂದ್ರವು ಬ್ರಹ್ಮಾವರ ಹಾಗೂ ಕೋಟ ಹೋಬಳಿಗಳನ್ನು ಒಳಗೊಂಡಿದೆ. ಬ್ರಹ್ಮಾವರ ಹೋಬಳಿಯ ನಾಲ್ಕೂರು, ನಂಚಾರು, ಕುದಿ, ಕೆಂಜೂರು, ಪೆಜಮಂಗೂರು, ಹೊಸೂರು, ಹಲುವಳ್ಳಿ, ಹಾವಂಜೆ, ಚೇರ್ಕಾಡಿ, ಉಪ್ಪೂರು, ಹೇರೂರು, ಆರೂರು, ನೀಲಾವರ, ಚಾಂತಾರು, ಮಟಪಾಡಿ, ಹಂದಾಡಿ, ಕುಮ್ರಗೋಡು, ವಾರಂಬಳ್ಳಿ, ಹಾರಾಡಿ, ಬೆ„ಕಾಡಿ ಗ್ರಾಮಗಳು ಹಾಗೂ ಕೋಟ ಹೋಬಳಿಯ ಮಣೂರು, ಕೋಟತಟ್ಟು, ಗಿಳಿಯಾರು, ಪಾಂಡೇಶ್ವರ, ಮೂಡಹಡು, ಕೋಡಿ, ಐರೋಡಿ, , ವಡ್ಡರ್ಸೆ, ಅಚ್ಲಾಡಿ, ಬನ್ನಾಡಿ, ಕಾವಡಿ, ಶಿರಿಯಾರ, ಕಾಡೂರು, ನಡೂರು, ಹೇರಾಡಿ, ಯಡ್ತಾಡಿ, ವಂಡಾರು, ಆವರ್ಸೆ, ಕಕ್ಕುಂಜೆ, ಹಿಲಿಯಾಣ, ಹೆಗ್ಗುಂಜೆ, ಶಿರೂರು, ಬಿಲ್ಲಾಡಿ, ಹನೆಹಳ್ಳಿ, ಕಚ್ಚಾರು, ಹೊಸಾಳ ಹಾಗೂ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಕಾರ್ಕಡ, ಗುಂಡ್ಮಿ, ಚಿತ್ರಪಾಡಿ, ಪಾರಂಪಳ್ಳಿ ಗ್ರಾಮಗಳು ಬ್ರಹ್ಮಾವರ ತಾ| ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲಿದೆ.
Related Articles
Advertisement
ಎಲ್ಲಿ ನಿರ್ಮಾಣವಾಗುತ್ತದೆ?ಬ್ರಹ್ಮಾವರ ಪ್ರವಾಸಿ ಮಂದಿರದ ಸಮೀಪ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧದ ಪಕ್ಕದಲ್ಲೇ 6 ಎಕ್ರೆ ಜಾಗವನ್ನು ನ್ಯಾಯಾಲಯ ಸಂಕೀರ್ಣ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಮೀಸಲಿರಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಸಂಚಾರಿ ಪೀಠದ ಬೇಡಿಕೆ
ಪೂರ್ಣ ಪ್ರಮಾಣದ ನ್ಯಾಯಾಲಯ ಸ್ಥಾಪನೆಗೆ ಅನುಮತಿ ದೊರೆತು, ಕಟ್ಟಡ ನಿರ್ಮಾಣಗೊಂಡು ನ್ಯಾಯಾಲಯ ಕಾರ್ಯಾರಂಭಗೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ ಮೊದಲಿಗೆ ಸಂಚಾರಿ ಪೀಠವನ್ನು ಆರಂಭಿಸಿ, ಬಾಡಿಗೆ ಕಟ್ಟಡದಲ್ಲಿ ಇದರ ಕಾರ್ಯನಿರ್ವಹಣೆ ಆರಂಭಿಸಬೇಕು ಎನ್ನುವ ಬೇಡಿಕೆ ಇದೆ. ಸರಕಾರಕ್ಕೆ ಒತ್ತಡ
ಈ ಬಗ್ಗೆ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಈಡೇರುವ ಭರವಸೆ ಇದೆ. ಪೂರ್ಣಪ್ರಮಾಣದ ನ್ಯಾಯಾಲಯ ಮಂಜೂರು ವಿಳಂಬವಾದಲ್ಲಿ ಸಂಚಾರಿ ಪೀಠವನ್ನು ಶೀಘ್ರ ಆರಂಭಿಸುವಂತೆ ಒತ್ತಡ ಹೇರಲಾಗುವುದು
-ರಘುಪತಿ ಭಟ್,
ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ ಪೂರಕ ತಯಾರಿ
ಬೇರೊಂದು ಉದ್ದೇಶಕ್ಕೆ ಮೀಸಲಿರಿಸಿದ 6 ಎಕ್ರೆ ಜಾಗವನ್ನು ವಾಪಾಸು ಪಡೆದು ನ್ಯಾಯಾಲಯ ಸಂಕೀರ್ಣ, ವಸತಿಗೃಹ ನಿರ್ಮಾಣಕ್ಕೆ ಮೀಸಲಿಡಲಾಗುತ್ತಿದೆ ಹಾಗೂ ಕಂದಾಯ ಇಲಾಖೆಯಿಂದ ಕೋರ್ಟ್ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುತ್ತದೆ.
-ರಾಜಶೇಖರ್‌ಮೂರ್ತಿ, ಬ್ರಹ್ಮಾವರ ತಹಶೀಲ್ದಾರರು -ರಾಜೇಶ್ ಗಾಣಿಗ ಅಚ್ಲಾಡಿ