Advertisement

ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜು ತಂಡಕ್ಕೆ ಬಿ.ಸಿ. ಆಳ್ವ ಮೆಮೋರಿಯಲ್ ಕ್ರಿಕೆಟ್ ಟ್ರೋಫಿ

10:54 AM Jan 20, 2023 | Team Udayavani |

ಬ್ರಹ್ಮಾವರ: ಎಸ್.ಎಂ.ಎಸ್ ಕಾಲೇಜು ಮೈದಾನದಲ್ಲಿ ಬಿ.ಸಿ. ಆಳ್ವ ಮೆಮೋರಿಯಲ್ ರೋಲಿಂಗ್ ಟ್ರೋಫಿಗಾಗಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ  ಅಂತರ್ ಕಾಲೇಜು ಮಟ್ಟದ ಅಂತರ್ ವಲಯ ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್.ಎಂ.ಎಸ್ ಪದವಿ ಕಾಲೇಜು ಬ್ರಹ್ಮಾವರ , ಎಂ ಪಿ ಎಂ ಪ್ರಥಮ ದರ್ಜೆ ಕಾಲೇಜು ಕಾರ್ಕಳ ತಂಡವನ್ನು 38 ರನ್ನುಗಳ ಅಂತರದಿಂದ ಮಣಿಸಿ 11 ವರ್ಷಗಳ ನಂತರ ಬಿ.ಸಿ ಆಳ್ವ ಮೆಮೋರಿಯಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

Advertisement

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಎಂಪಿಎಂ ಪ್ರಥಮ ದರ್ಜೆ ಕಾಲೇಜು ಕಾರ್ಕಳ ತಂಡವು ಅತಿಥೇಯ ಎಸ್ಎಂಎಸ್ ತಂಡವನ್ನು 131 ರನ್ನುಗಳಿಗೆ ನಿಯಂತ್ರಿಸಲು ಸಫಲವಾಯಿತಾದರೂ, ಎಸ್.ಎಂ.ಎಸ್ ಕಾಲೇಜಿನ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 93 ರನ್ನುಗಳಿಗೆ ಆಲೌಟಾಯಿತು.

ಎಂಪಿಎಂ ಕಾಲೇಜು ಪರ ಧೀರಜ್ ನಾಲ್ಕು ವಿಕೆಟ್ ಪಡೆದರೆ, ಎಸ್ಎಂಎಸ್ ಕಾಲೇಜಿನ ನಿತೀಶ್ ಶೆಟ್ಟಿ ಮೂರು ವಿಕೆಟ್ ಪಡೆದರು. ಇತ್ತಂಡಗಳು ಸೆಮಿ ಫೈನಲ್ ನಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರ್ ಮಂಗಳೂರು ಹಾಗೂ ಎಸ್ ಡಿ ಎಮ್ ಕಾಲೇಜು, ಮಂಗಳೂರು ತಂಡಗಳನ್ನುಸೋಲಿಸಿ ಫೈನಲ್ ಗೆ ಪ್ರವೇಶಿಸಿದ್ದವು.   ಇದರ ಜೊತೆಗೆ ಎಸ್ಎಂಎಸ್ ಕಾಲೇಜು ಬ್ರಹ್ಮಾವರ ತಂಡವು ಸತತ ಎರಡು ವರ್ಷ ಶಿರ್ವ ಲೆಸ್ಲಿ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಪಂದ್ಯಾ ಕೂಟದ ಸಮಾರೋಪ ಸಮಾರಂಭದಲ್ಲಿ ಓ.ಎಸ್ ಸಿ ಎಜ್ಯುಕೇಷನಲ್ ಸೊಸೈಟಿಯ ಅಧ್ಯಕ್ಷರಾದ ರೆ.ಫಾ.ಎಮ್. ಸಿ ಮಥಾಯ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಓ.ಎಸ್ ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿ ಸಿರಿಲ್ ಪಿ ಡಿ’ಸೋಜ, ಕೋಶಾಧಿಕಾರಿ ಸ್ಯಾಂಸನ್ ಡಿ’ಸೋಜ, ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಮಿಟಿ ಸದಸ್ಯೆ ಲವಿನಾ ಲೂವಿಸ್, ಎಸ್ ಎಮ್ ಎಸ್ ಸಿ ಬಿ ಎಸ್ ಇ ಶಾಲೆಯ ಮಾಜಿ ಕೋಶಧಿಕಾರಿ ಅಲ್ವಿನ್, ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಉಡುಪ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ್ ಭಟ್ ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಏರನ್ ರೋಚ್ ಉಪಸ್ಥಿತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next