ಬ್ರಹ್ಮಾವರ: ಕಠಿನ ಪರಿಶ್ರಮ, ಪ್ರಾಮಾಣಿಕತೆಯಿಂದ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಮುನ್ನಡೆದರೆ ಸಂಸ್ಥೆಯು ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎನ್ನುವುದನ್ನು ಬಿ. ಶ್ರೀನಿವಾಸ ಶೆಟ್ಟಿಗಾರ್ ಅವರು ಶೆಟ್ಟಿಗಾರ್ ಇಂಡಸ್ಟ್ರೀಸ್ ಮೂಲಕ ನಿರೂಪಿಸಿದ್ದಾರೆ ಎಂದು ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.
ಬಿ.ಸಿ. ರೋಡ್‌ನ ಹೇರೂರಿನಲ್ಲಿ ರವಿವಾರ ಬಾರಕೂರು ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ್‌ನ ನೂತನ ಶಾಖೆ ಶೆಟ್ಟಿಗಾರ್ ಎಂಟರ್‌ಪ್ರೈಸಸ್ ಉದ್ಘಾಟಿಸಿ ಅವರು ಮಾತನಾಡಿ, ಸ್ವಂತ ಪರಿಶ್ರಮದಿಂದ ಸ್ವಾವಲಂಭಿ ಬದುಕು ಸಾಧ್ಯ. ಸಾಮಾಜಿಕ, ಧಾರ್ಮಿಕ, ಔದ್ಯಮಿಕವಾಗಿ ಸಾಬೀತುಪಡಿಸಿದ್ದಾರೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ, ಉದ್ಯಮಿ ಶಾಂತಾರಾಮ ಶೆಟ್ಟಿ ಬಾರಕೂರು, ಸಣ್ಣ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಹರೀಶ್ ಕುಂದರ್, ಬ್ರಹ್ಮಾವರ ನ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಶೆಟ್ಟಿ, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಆರ್. ಶೆಟ್ಟಿ, ಬ್ರಹ್ಮಾವರ ವ್ಯ.ಸೇ.ಸ. ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೆನರಾ ಬ್ಯಾಂಕ್ ಎಜಿಎಂ ರಾಮ ನಾಯ್ಕ, ಬಾರಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಡಾ| ಜಯರಾಮ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸಿಮೆಂಟ್ ಉತ್ಪನ್ನಗಳ ಹೆಸರಾಂತ ತಯಾರಿಕಾ ಕೇಂದ್ರವಾದ ಶೆಟ್ಟಿಗಾರ್ ಇಂಡಸ್ಟ್ರೀಸ್‌ನ ಶಾಖೆಗಳು ಈಗಾಗಲೇ ತೆಕ್ಕಟ್ಟೆಯ ಕನ್ನುಕೆರೆ ಹಾಗೂ ಬಾರಕೂರಿನ ಹೇರಾಡಿಯಲ್ಲಿ, ಇದೀಗ ಬ್ರಹ್ಮಾವರದಲ್ಲಿ ಪ್ರಾರಂಭಗೊಂಡಿದೆ. ಗ್ರಾಹಕರ ಸಹಕಾರ,ನೌಕರರ ಬದ್ಧತೆಯಿಂದ ಸಂಸ್ಥೆ ಮುನ್ನಡೆ ಯುತ್ತಿದೆ ಎಂದು ಮಾಲಕ ಬಿ. ಶ್ರೀನಿವಾಸ ಶೆಟ್ಟಿಗಾರ್ ಪ್ರಸ್ತಾವನೆಯಲ್ಲಿ ಹೇಳಿದರು. ದಾಮೋದರ ಶರ್ಮಾ ನಿರೂಪಿಸಿ, ಬಿ. ಸುಧಾಕರ ರಾವ್ ವಂದಿಸಿದರು.
ವೈವಿಧ್ಯಮಯ ಉತ್ಪನ್ನಗಳು
ಸಂಸ್ಥೆಯಲ್ಲಿ ಸಿಮೆಂಟ್ ಉತ್ಪನ್ನಗಳಾದ ದಾರಂದ, ಕಿಟಕಿ, ತುಳಸಿ ಕಟ್ಟೆ, ಡಾಗ್ ಹೌಸ್, ಪಂಪ್ ಹೌಸ್, ಎಲ್ಲ ತರದ ಪಿಲ್ಲರ್, ಗ್ರಿಲ್ಸ್ ಹಾಗೂ ಗಾರ್ಡನ್ ಅಂದ ಹೆಚ್ಚಿಸುವ ವಿವಿಧ ರೀತಿಯ ಸಿಮೆಂಟ್ ಬೆಂಚ್, ದನ, ಜಿಂಕೆ, ಮೊಲ, ಕೊಕ್ಕರೆ, ಹೂವಿನ ಚಟ್ಟಿ ಮುಂತಾದ ಉತ್ಪನ್ನಗಳು ದೊರೆಯುತ್ತವೆ. ಜತೆಗೆ ಪೈಬರ್ ಪಾಟ್, ಪ್ರಾಣಿ ಪಕ್ಷಿ, ಶಿಲೆ ಕಲ್ಲಿನ ಬೆಂಚು, ಮಣ್ಣಿನ ಮೂರ್ತಿ ಹಾಗೂ ಮರದ ದಾರಂದ, ಕಿಟಕಿ, ಅಲ್ಯುಮಿನಿಯಂ ಶೆಟರ್ ಸಹಿತ ವೈವಿಧ್ಯಮಯ ವಸ್ತುಗಳು ಲಭ್ಯವಿವೆ.