Advertisement

ಬ್ರಹ್ಮಾವರ ಬಂಡೀಮಠ: ಶಿಲಾಶಾಸನ ಪತ್ತೆ

07:50 AM Apr 16, 2018 | Team Udayavani |

ಬ್ರಹ್ಮಾವರ:  ಹನೆಹಳ್ಳಿ ಗ್ರಾಮದ ಬಂಡೀಮಠದ ಶಂಕರನಾರಾಯಣ ಭಟ್‌ ಅವರ ಗದ್ದೆಗೆ ಹೋಗುವ ದಾರಿ ಮಧ್ಯೆ ಸುಮಾರು 4 ಅಡಿ ಎತ್ತರ, ಎರಡೂವರೆ ಅಡಿ ಅಗಲದ ಶಿಲಾಶಾಸನ ಪತ್ತೆಯಾಗಿದೆ.

Advertisement

ಶಿವಲಿಂಗ, ನಂದಿ, ಖಡ್ಗ, ಸೂರ್ಯ, ಚಂದ್ರರನ್ನು ಒಳಗೊಂಡು ಹಳೆಗನ್ನಡದಲ್ಲಿ ಬರೆದಿರುವ ಶಾಸನವು ಗಣೇಶ್‌ರಾಜ್‌ ಸರಳೇಬೆಟ್ಟು ಅವರಿಗೆ ಕಾಣಸಿಕ್ಕಿದೆ. ಸ್ಥಳೀಯ ವ್ಯಕ್ತಿ ಯೋಗೀಶ್‌ ಪೂಜಾರಿ ಬಂಡೀಮಠ ಅವರು ಇಂತಹದೇ  ಇನ್ನೂ ನಾಲ್ಕೈದು ಶಾಸನಗಳು ಹಿಂದೆ ಗದ್ದೆಯಲ್ಲಿ  ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. 

ಶಿಲಾಶಾಸನ ಸಿಕ್ಕಿರುವ ಪ್ರದೇಶದ ಸುತ್ತಮುತ್ತ ಉಳುಮೆ ಮಾಡುವ ಗದ್ದೆಗಳಿದ್ದು, ಪಕ್ಕದಲ್ಲಿ ಸೀತಾನದಿ ಹರಿಯುತ್ತಿ¤ದೆ. ಈ ಹಿಂದೆ ಹಾವಂಜೆ ಗ್ರಾಮದ ಕೀಳಿಂಜೆ, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ನಾಯರ್‌ ತೋಟ ಮೊದಲಾದ ಕಡೆಗಳಲ್ಲಿ  ಶಿಲಾಶಾಸನಗಳನ್ನು  ಸ್ಥಳೀಯರ ಮಾಹಿತಿ ಮೇರೆಗೆ ಪತ್ತೆ ಹಚ್ಚಲಾಗಿದೆ ಎಂದು ಗಣೇಶ್‌ರಾಜ್‌ ಸರಳೇಬೆಟ್ಟು  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next