ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರವು ಬಿಡುಗಡೆಯಾಗಿ ಒಂದೇ ವಾರದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ನೆಗಟಿವ್ ಪ್ರಚಾರ, ಬಾಯ್ಕಾಟ್ ಟ್ರೆಂಡ್ ನಡುವೆಯೂ ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರವು ವಿಶ್ವದಾದ್ಯಂತ 300 ಕೋಟಿ ರೂ ಗಳಿಸಿದೆ.
ಕರಣ್ ಜೋಹರ್ ತಮ್ಮ ನಿರ್ಮಾಣದ ಬ್ರಹ್ಮಾಸ್ತ್ರ ಚಿತ್ರದ ವಿಶ್ವ ಮಟ್ಟದ ಸಂಗ್ರಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬ್ರಹ್ಮಾಸ್ತ್ರ ಚಿತ್ರವು ಗ್ಲೋಬಲ್ ಗಲ್ಲಾಪೆಟ್ಟಿಗೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಪ್ರತಿನಿತ್ಯ ವಿದ್ಯಾರ್ಥಿಗಳ ಜೊತೆ ತರಗತಿಯಲ್ಲಿ ಕುಳಿತು ಪಾಠ ಕೇಳುವ ಸಿಂಗಳೀಕ: ವಿಡಿಯೋ ವೈರಲ್
ಟ್ರೇಡ್ ಅನಲಿಸ್ಟ್ ಸುಮಿತ್ ಕಡೆಲ್ ನೀಡಿದ ಮಾಹಿತಿಯಂತೆ, ರಣಬೀರ್ ಕಪೂರ್ ಚಿತ್ರವು ಭಾರತದಲ್ಲಿ ಒಂದು ವಾರದಲ್ಲಿ 173.40 ಕೋಟಿ ರೂ ಕಲೆಕ್ಷನ್ ಮಾಡಿದೆ. ಕಳೆದ ವಾರದ ಶುಕ್ರವಾರ 37.50 ಕೋಟಿ, ಶನಿವಾರ – 42.50 ಕೋಟಿ, ಭಾನುವಾರ- 45 ಕೋಟಿ, ಸೋಮವಾ – 16.40 ಕೋಟಿ, ಮಂಗಳವಾರ – 12.50 ಕೋಟಿ, ಬುಧವಾರ – 10.50 ಕೋಟಿ, ಗುರುವಾರ – 9 ಕೋಟಿ ರೂ. ಸಂಪಾದನೆ ಮಾಡಿದೆ. ಎರಡನೇ ವಾರಾಂತ್ಯದಲ್ಲಿ ಚಿತ್ರವು ಭಾರತದಲ್ಲಿ 200 ಕೋಟಿ ರೂ. ಗಳಿಕೆ ಮಾಡಲಿದೆ.
Related Articles
‘ಬ್ರಹ್ಮಾಸ್ತ್ರ’ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗ ಶಿವದಲ್ಲಿ ರಣಬೀರ್, ಆಲಿಯಾ ಭಟ್ ಜೊತೆಗೆ ಅಮಿತಾಭ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್, ಸೌರವ್ ಗುರ್ಜಾರ್ ಮುಂತಾದವರು ನಟಿಸಿದ್ದಾರೆ. ಚಿತ್ರದ ಎರಡನೇ ಭಾಗವು 2025ರಲ್ಲಿ ತೆರೆಗೆ ಬರಲಿದೆ ಎಂದು ಅಯಾನ್ ಮುಖರ್ಜಿ ಹೇಳಿಕೊಂಡಿದ್ದಾರೆ.