Advertisement

ಬ್ರಹ್ಮರ್ಷಿ ನಾರಾಯಣ ಗುರು ಆದರ್ಶ ದಾರಿದೀಪವಾಗಲಿ

07:11 PM Sep 04, 2020 | Suhan S |

ಕಂಪ್ಲಿ: ಬ್ರಹ್ಮರ್ಷಿ ನಾರಾಯಣ ಗುರುಗಳು 19ನೇ ಶತಮಾನದ ಕೇರಳದ ಮಹಾನ್‌ ಸಂತ ಹಾಗೂ ಸಮಾಜ ಸುಧಾರಕರಾಗಿದ್ದು, ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ತಹಶೀಲ್ದಾರ್‌ ಗೌಸಿಯಾಬೇಗಂ ತಿಳಿಸಿದರು.

Advertisement

ಅವರು ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಕೋವಿಡ್ ಹಿನ್ನೆಲೆ ಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಬುಧವಾರ ಸರಳವಾಗಿ ಆಚರಿಸಿ ಮಾತನಾಡಿ, ಕೋವಿಡ್ ಹಿನ್ನೆಲೆ ಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಸರ್ಕಾರದ ಆದೇಶದಂತೆ ಆಚರಿಸಲಾಯಿತು. ನಾರಾಯಣಗುರು ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶ ತತ್ವಗಳೊದಿಗೆ ಉತ್ತಮ ಜೀವನ ನಡೆಸಬೇಕು. ನಾರಾಯಣಗುರು ಪ್ರತಿಯೊಬ್ಬರಿಗೂ ದಾರಿ ದೀಪವಾಗಿದ್ದಾರೆ ಎಂದರು.

ತದನಂತರ ಆರ್ಯ ಈಡಿಗರ ಸಮಾಜದ ಅಧ್ಯಕ್ಷ ಈ. ನರಸಪ್ಪ ಮಾತನಾಡಿ, ನಾರಾಯಣ ಗುರುಗಳು ಸಮಾಜದಲ್ಲಿ ಮೇಲು-ಕೀಳು ಬಿಟ್ಟು ಒಂದೇ ಜಾತಿ, ಒಂದೇ ಮತ, ಒಂದೇ ದೈವ ಎಂಬ ಸಂದೇಶವನ್ನು ನಾಡಿಗೆ ಸಾರಿದ್ದಾರೆ. ಎಲ್ಲ ರಂಗಗಳಲ್ಲಿ ಹಿಂದುಳಿದ ಆರ್ಯ ಈಡಿಗರ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಸಮಾಜದ ಹಿತದೃಷ್ಟಿಯಿಂದ ಸರ್ಕಾರ ಮುತುವರ್ಜಿವಹಿಸಿ ಕೂಡಲೇ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶ್ರೀನಾರಾಯಣ ಗುರು ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಂತರ ಪುಷ್ಪ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿರಸ್ತೇದಾರ ಪಂಪಾಪತಿ, ಕಂದಾಯ ಅಧಿಕಾರಿ ಗಣೇಶ್‌, ಗ್ರಾಮಲೆಕ್ಕಾ ಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್‌ ಶರೀಫ್‌, ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಈ. ಬಸವರಾಜ, ಖಜಾಂಚಿ ಶ್ರೀನಿವಾಸ ಹಾಗೂ ಈ.ಕೆ. ಗುರುರಾಜ, ಪ್ರಥಮ ದರ್ಜೆ ಸಹಾಯಕರಾದ ಮಾಲತೇಶ್‌ ದೇಶಪಾಂಡೆ, ಭೂಮಾಪನಾ ಇಲಾಖೆಯ ಮಹಾಂತೇಶ್‌, ಮೌನೇಶ್‌, ವಿಎಗಳಾದ ಲಕ್ಷ್ಮಣನಾಯ್ಕ, ವಿಜಯಕುಮಾರ ಹಾಗೂ ಸಿಬ್ಬಂದಿಗಳು ಸೇರಿದಂತೆ ಆರ್ಯ ಈಡಿಗರ ಸಮಾಜದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next