Advertisement
ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಹಸ್ರಾರು ಭಕ್ತರು ಭೇಟಿ ನೀಡು ತ್ತಿರುತ್ತಾರೆ. ಚಂಪಾ ಷಷ್ಠಿ ಮಹೋತ್ಸವದಂದು ಎಳೆಯುವ ತೇರನ್ನು ಕಣ್ತುಂಬಿಕೊಳ್ಳುತ್ತಾರೆ. 450ಕ್ಕೂ ಅಧಿಕ ವರ್ಷಗಳ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿದ್ದರಿಂದ ನೂತನ ಬ್ರಹ್ಮರಥ ಸಮರ್ಪಣೆಯಾಗುತ್ತಿದೆ.
ಬ್ರಹ್ಮರಥದಲ್ಲಿ 6 ಚಕ್ರಗಳಿವೆ. ಪ್ರತಿ ಚಕ್ರದ ಎತ್ತರ ಎಂಟು ಅಡಿ 6 ಅಂಗುಲ. ಒಂದು ಚಕ್ರದಲ್ಲಿ ಮರದ 5 ಬೃಹತ್ ತುಂಡುಗಳು ಇವೆ. ರಥದ ಚಕ್ರಗಳ ಅಗಲ 21 ಅಂಗುಲ, ದಪ್ಪ 10 ಅಂಗುಲ ಇದೆ. ಬ್ರಹ್ಮರಥದಲ್ಲಿ ಜೀವರಾಶಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಇವುಗಳಲ್ಲಿ ಅಸಂಖ್ಯ ವಿಸ್ಮಯಗಳಿದ್ದು, ಕಾಲಾಂತರದಲ್ಲಿ ಬಹುತೇಕ ಚಿತ್ರಗಳು ನಶಿಸಿದ್ದವು. ಅದೇ ಮಾದರಿಯಲ್ಲಿ ಈಗಿನ ಬ್ರಹ್ಮರಥ ನಿರ್ಮಾಣಗೊಂಡಿದೆ.
Related Articles
ನೂತನ ರಥದಲ್ಲಿ ಈ ಮೊದಲಿನಂತೆ 16 ಅಂತಸ್ತು ಹೊಂದಿದೆ. ಅವುಗಳಲ್ಲಿ ಕ್ರಮವಾಗಿ ಆರು ನೇಗಳನ ಸಾಲುಗಳು, ಆನೆ ಸಾಲು, ಹೂವಿನ ಸಾಲು, ದ್ರಾಕ್ಷಿ ಬಳ್ಳಿಗಳ ಸಾಲು, ಪದ್ಮ ಸಾಲು, ವಿಗ್ರಹಗಳ ಒಂದನೇ ಸಾಲು, ಬಳ್ಳಿಗಳ ಸಾಲು, ಕೊನೆ ಅಡ್ಡೆಗಳ ಸಾಲು, ವಿಗ್ರಹಗಳ ಎರಡನೇ ಸಾಲು, ವಿಗ್ರಹಗಳಿಂದ ಕೂಡಿದ ಕೊನೆ ಅಡ್ಡೆಗಳ ಎರಡನೇ ಸಾಲು, ಕೊನೆ ಅಡ್ಡೆಗಳ ಮೂರನೇ ಸಾಲು, ವಿಗ್ರಹಗಳ ನಾಲ್ಕನೇ ಸಾಲು, ಬಳ್ಳಿಗಳ ಸಾಲು ಹಾಗೂ ಕೊನೆಯ ಅಂತಸ್ತಿನಲ್ಲಿ ಮುಚ್ಚಿಗೆ ನಿರ್ಮಿಸ ಲಾಗಿದೆ. ನೂತನ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ವಿಗ್ರಹ. ಕುದುರೆ ಸವಾರರ ವಿಗ್ರಹ, ಸಿಂಹಗಳು, ಬೃಹತ್ ಗಾತ್ರದ ದ್ವಾರಪಾಲಕ ವಿಗ್ರಹಗಳ ಅದ್ಭುತ ಕೆತ್ತನೆಗಳಿವೆ.
Advertisement
25 ಟನ್ ತೂಕರಥವು ಸ್ಕಂದ್ಯ ಶಿಲ್ಪ ಪ್ರಕಾರ ರಚನೆಗೊಂಡಿದ್ದು, ರಥವು ನೆಲದಿಂದ ಅಡ್ಡೆಯ ತನಕ 17 ಅಡಿ ಎತ್ತರ ಹೊಂದಿದೆ. ಚಿತ್ರಪಟ 4 ಕಾಲು ಅಡಿ ಎತ್ತರ, ದೊಡ್ಡಗೂಡು 20 ಅಡಿ ಎತ್ತರ, ಸಣ್ಣಗೂಡು 8 ಅಡಿ ಎತ್ತರ, ಕಲಶ 6.5 ಅಡಿ ಎತ್ತರವಿದೆ. 16 ಚಕ್ರಗಳನ್ನು ಹೊಂದಿದ್ದು, 8.5 ಅಡಿ ಎತ್ತರವಿದೆ. ನೆಲದಿಂದ ಕಲಶದ ತುದಿ ತನಕ 64.5 ಅಡಿ ಎತ್ತರದ ರಥದ ತೂಕ 25 ಟನ್ ಇದೆ. ಶಿಲ್ಪಿ ಲಕ್ಷ್ಮೀನಾರಾಯಣ ಕೋಟೇಶ್ವರ ನೇತೃತ್ವದಲ್ಲಿ 65 ಮಂದಿ ಶಿಲ್ಪಿಗಳು ಕೆತ್ತನೆ ನಡೆಸಿದ್ದಾರೆ. ಬೋಗಿ, ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಹಲಸಿನ ಮರದಿಂದ ದೇವರ ಪೀಠ ನಿರ್ಮಿಸಲಾಗಿದೆ. ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಕಡಬ 2.50 ಕೋಟಿ ರೂ. ವೆಚ್ಚದಲ್ಲಿ ರಥ ಸಮರ್ಪಿಸಿದ್ದು, ರಥ ಆಗಮಿಸುವ ಕ್ಷಣ ಐತಿಹಾಸಿಕ ದಿನವಾಗಲಿದೆ. 400 ವರ್ಷಗಳ ಬಳಿಕ ರಥ ಆಗಮಿಸುತ್ತಿರುವುದು ಇಂದಿನ ತಲೆಮಾರಿನ ಜನತೆಗೆ ಅದ್ಭುತ ಅನುಭವ ಮತ್ತು ಪುಣ್ಯದ ದಿನ. ಸಂಭ್ರಮದ ವಾತಾವರಣ
ಪುರ ಪ್ರವೇಶಕ್ಕೆ ಕುಕ್ಕೆಯಲ್ಲಿ ಅದ್ದೂರಿ ಸಿದ್ಧತೆಗಳು ನಡೆದಿವೆ. ನಗರವನ್ನು ಅದ್ಭುತವಾಗಿ ಸಿಂಗರಿಸಲಾಗಿದೆ. ಕೇಸರಿ ಧ್ವಜ, ಪತಾಕೆಗಳು ರಾರಾಜಿಸುತ್ತಿವೆ. ಕಣ್ಣೆತ್ತಿ ನೋಡಿದಲ್ಲೆಲ್ಲ ಫ್ಲೆಕ್ಸ್, ಬ್ಯಾನರ್‌ಗಳು ಗೋಚರಿಸುತ್ತಿವೆ. ರಸ್ತೆಗಳ ತಾತ್ಕಾಲಿಕ ದುರಸ್ತಿ ನಡೆಯುತ್ತಿದೆ. ಕುಲ್ಕುಂದ, ಕುಮಾರಧಾರಾ, ಕಾಶಿಕಟ್ಟೆ ಈ ಮೂರು ಕಡೆ ರಥ ಆಕೃತಿಯ ದ್ವಾರಗಳು ನಿರ್ಮಾಣಗೊಂಡಿವೆ. ಕೈಕಂಬದಿಂದ ರಥ ಮೆರವಣಿಗೆ ಬರುವ ವೇಳೆ ಪೂರ್ಣಕುಂಭ ಸ್ವಾಗತ, ಮಂಗಲ ಮಂತ್ರ ಘೋಷ, ಕುಣಿತ ಭಜನೆ, ಗೊಂಬೆ ಕುಣಿತ. 15ಕ್ಕೂ ಅಧಿಕ ಸ್ತಬ್ಧಚಿತ್ರ, ಬೊಂಬೆ ಕುಣಿತ, ಕೇರಳದ ಚೆಂಡೆ, ವಿವಿಧ ಕಲಾತಂಡಗಳ ನೃತ್ಯ ತಂಡಗಳು ಭಾಗವಹಿಸಲಿವೆ. ಅಕರ್ಷಕ, ಸುಡುಮದ್ದು ಪ್ರದರ್ಶನವಿರಲಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಗಣ್ಯರು, ಭಕ್ತರು ಭಾಗವಹಿಸಲಿರುವರು.
ಸುಬ್ರಹ್ಮಣ್ಯ: ಬ್ರಹ್ಮರಥ ಬುಧವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪ್ರವೇಶಿಸುವ ಹಿನ್ನೆಲೆಯಲ್ಲಿ ನಗರವನ್ನು ಸಿಂಗರಿಸಲಾಗಿದೆ. ರಥ ಸ್ವಾಗತಿಸಿ ಮೆರವಣಿಗೆ ಸಾಗಿ ಬರುವ ಕೈಕಂಬದಿಂದ ರಥಬೀದಿ ತನಕದ 8 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕೇಸರಿ ತೋರಣ ಕಟ್ಟಲಾಗಿದೆ. ನಡುವೆ ಅಲ್ಲಲ್ಲಿ ಸಂಘ-ಸಂಸ್ಥೆಗಳಿಂದ ಸ್ವಾಗತ ಬ್ಯಾನರ್ ಹಾಕಲಾಗಿದೆ. ಕೈಕಂಬದಲ್ಲಿ ಸುಂದರವಾಗಿ ಸ್ವಾಗತ ದ್ವಾರ ನಿರ್ಮಿಸಿದ್ದು, ಕಣ್ಮನ ಸೆಳೆಯುತ್ತಿದೆ. ಕುಲ್ಕುಂದ, ಕುಮಾರಧಾರಾ, ಕಾಶಿಕಟ್ಟೆಯಲ್ಲಿ ರಥದ ಮಾದರಿಯ ಮೂರು ಸ್ವಾಗತ ಗೋಪುರಗಳನ್ನು ಜನಪದೀಯ ಶೈಲಿಯಲ್ಲಿ ಸ್ಥಳೀಯರು ರಚಿಸಿದ್ದಾರೆ. ಕುಮಾರಧಾರಾದಿಂದ ರಥಬೀದಿ ತನಕ ರಸ್ತೆ ಬದಿ ಸಾಲು ಬಣ್ಣದ ಕೊಡೆಗಳನ್ನು ಇರಿಸಲಾಗಿದೆ. ವಿವಿಧ ಮುಖವರ್ಣಿಕೆಗಳ ಚಿತ್ರಗಳು ರಸ್ತೆಯ ಎರಡೂ ಬದಿ ಮನ ಸೆಳೆಯುತ್ತಿವೆ. ರಸ್ತೆಯುದ್ದಕ್ಕೂ ಮಾವಿನ ಎಲೆ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಈ ಐತಿಹಾಸಿಕ ಕ್ಷಣದಲ್ಲಿ ಭಾಗವಹಿಸುವ ಅವಕಾಶ ಜನತೆಗೆ ಒದಗಿ ಬಂದಿದ್ದು, ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಬ್ರಹ್ಮರಥವು ಮಂಗಳವಾರ ಬಲ್ಯ ದೇವಸ್ಥಾನದಲ್ಲಿ ತಂಗಿ, ಅ. 2ರ ಬೆಳಗ್ಗೆ 8ಕ್ಕೆ ಹೊರಟು ಕಡಬ ಮಾರ್ಗ ವಾಗಿ ಕುಕ್ಕೆ ಕ್ಷೇತ್ರ ತಲುಪಲಿದೆ. ಅಪ ರಾಹ್ನ 2ಕ್ಕೆ ರಥವು ಕುಲ್ಕುಂದ ತಲುಪುವ ನಿರೀಕ್ಷೆ ಇದ್ದು, ಅಲ್ಲಿಂದ ಮೆರವಣಿಗೆ ಕ್ಷೇತ್ರಕ್ಕೆ ಸಾಗಲಿದೆ. ಸ್ವಾಗತಕ್ಕೆ ಏರ್ಪಾಡು
ಕೋಟೇಶ್ವರದಿಂದ ಹೊರಟು ರಥ ಸಾಗಿ ಬಂದ ದಾರಿಯುದ್ದಕ್ಕೂ ಅನೇಕ ಮಂದಿ ಗಣ್ಯರು ಸ್ವಾಗತ ಕೋರಿರುವರು. ಆಯಾ ತಾಲೂಕುಗಳ ಶಾಸಕರು, ಗಣ್ಯರು ಪಾಲ್ಗೊಂಡಿರುವರು. ಬ್ರಹ್ಮರಥ
ಅ. 2ರಂದು ಕ್ಷೇತ್ರ ಪ್ರವೇಶಿಸಲಿದ್ದು, ಅದ್ದೂರಿ ಸ್ವಾಗತಕ್ಕೆ ಎಲ್ಲ ಏರ್ಪಾಡು ಮಾಡಲಾಗಿದೆ.
– ನಿತ್ಯಾನಂದ ಮುಂಡೋಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕುಕ್ಕೆ ಸುಬ್ರಹ್ಮಣ್ಯ