Advertisement

ಬಳ್ಪ ತ್ರಿಶೂಲಿನೀ ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣೆ 

11:06 AM Apr 06, 2018 | |

ಸುಬ್ರಹ್ಮಣ್ಯ: ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ ಬುಧವಾರ ನಡೆಯಿತು. ಇತಿಹಾಸ ಪ್ರಸಿದ್ಧ ಸಂಪೂರ್ಣ ಶಿಲಾಮಯವಾದ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಹಕಾರದಿಂದ ನಿರ್ಮಾಣವಾದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ಬುಧವಾರ ಸಂಜೆ ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀ ಅವರ ನೇತೃತ್ವದಲ್ಲಿ ನಡೆಯಿತು.

Advertisement

ಮಂಗಳವಾರ ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ತುಂಬುವ ಕಾರ್ಯಕ್ರಮಗಳ ಬಳಿಕ ಗುರುವಾರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ನಡೆದು ಕಲಶ ಪ್ರತಿಷ್ಠಾ- ಅಧಿವಾಸ ಹೋಮ ನಡೆಯಿತು. ಬಳಿಕ ಸಂಜೆ ಬ್ರಹ್ಮರಥ ಸಮರ್ಪಣ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಕ್ಷೇತ್ರ ಹನುಮಗಿರಿ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಅವರಿಂದ ಶ್ರೀ ಆಂಜನೇಯ ಸ್ವಾಮಿಗೆ ರಜತ ಕವಚ ಸಮರ್ಪಣೆ ನಡೆಯಿತು.

ಶೃಂಗೇರಿ ಶ್ರೀ ಶಂಕರ ಮಠ ಕೋಟೆಕಾರು ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ ರಾವ್‌, ಶ್ರೀಕ್ಷೇತ್ರ ಹನುಮಗಿರಿ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಮಂಗಳೂರು ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತೋಮ ಭಂಡಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕೋಶಾಧಿಕಾರಿ ಸುದೇಶ್‌ ಕುಮಾರ್‌ ರೈ, ಮಠಂತಬೆಟ್ಟು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ್‌ ರೈ, ಪೈಂದೋಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷೆ ಭವಾನಿ ಶಂಕರ ಪಾಲೋಳಿ, ಉದ್ಯಮಿ ಸುದೀಪ್‌ ಪ್ರಧಾನ್‌, ಬಳ್ಪ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ.ವಿ., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಕಟ್ಟ, ಅಧ್ಯಕ್ಷ ಸದಾನಂದ ರೈ ಅರ್ಗುಡಿ, ಕೋಶಾಧಿಕಾರಿ ಮುರಳಿ ಕಾಮತ್‌ ಬಳ್ಪ, ಕಾರ್ಯಾಧ್ಯಕ್ಷ ಶ್ರೀಕೃಷ್ಣ ಭಟ್‌ ಪಠೊಳಿ, ಸಂಘಟನ ಕಾರ್ಯದರ್ಶಿ ವಿಶ್ವನಾಥ ರೈ ಅರ್ಗುಡಿ, ಆಡಳಿತ ಮೊಕ್ತೇಸರರಾದ ಡಾ| ಮಂಜುನಾಥ ಎಂ.ವಿ., ರಥ ನಿರ್ಮಾಣ ಮಾಡಿದ ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಹರೀಶ್‌ ಆಚಾರ್ಯ ಉಪಸ್ಥಿತರಿದ್ದರು.

ಸುಂದರ ರಥ
ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾ ಪರಮೇಶ್ವರೀ ದೇವಸ್ಥಾನ ಶಿಲಾಮಯವಾಗಿದ್ದು, ರಾಜರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ದಾಖಲೆಗಳು ಇದೆ. ಇಲ್ಲಿ 1900ರ ಸುಮಾರಿಗೆ ರಥ ಶಿಥಿಲವಾಗಿತ್ತು ಎಂಬ ಮಾಹಿತಿ ಇವೆ. ದೇವಸ್ಥಾನ ಅಭಿವೃದ್ಧಿ ಬಳಿಕ ರಥ ಸಮರ್ಪಣೆಯಾಗಿದೆ. 100 ವರ್ಷಗಳ ಬಳಿಕ ರಥೋತ್ಸವ ನಡೆಯುತ್ತಿದೆ. ರಥವನ್ನು ಮೂಡಬಿದಿರೆ ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಹರೀಶ್‌ ಆಚಾರ್ಯ ನಿರ್ಮಾಣ ಮಾಡಿದ್ದಾರೆ. 6 ತಿಂಗಳಲ್ಲಿ ಕೆತ್ತನೆ ಮಾಡಿದ್ದು, ಕಿರಾಲ್‌ಬೋಗಿ, ಹೆಬ್ಬಲಸು ಹಾಗೂ ಮೈರೋಳು ಮರ ಬಳಸಲಾಗಿದೆ. ರಥದ ಸುತ್ತಲೂ ದೇವಸ್ಥಾನದ ಇತಿಹಾಸ, ತ್ರಿಶೂಲಿನೀ ದೇವರು, ದುರ್ಗೆ, ಶ್ರೀಚಕ್ರ ದೇವತೆಯ ಕೆತ್ತನೆ ಮಾಡಲಾಗಿದೆ. ರಥದ ಚಕ್ರ, ಅಚ್ಚುಮರ, ಜಂತಿ, ಪೀಠ, ಜಿಟ್ಟೆ ನಿರ್ಮಾಣವಾಗಿದೆ. ರಥದ ಒಟ್ಟು ಎತ್ತರ 35 ಅಡಿ ಇದ್ದರೆ ಚಕ್ರದಿಂದ ಜಿಟ್ಟೆಯವರೆಗೆ 8.45 ಅಡಿ ಎತ್ತರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next