Advertisement

ಮೇ.13 ರಿಂದ ವಾಗ್ಮಾನ್‌ ದೇವರಮನೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

05:31 PM May 05, 2019 | Hari Prasad |

ಬದಿಯಡ್ಕ : ಕುಂಡಂಗುಳಿ ಜಾಲುಮನೆ ಕೋಟೆಬಯಲು ವಾಗ್ಮಾನ್‌ ದೇವರಮನೆಯ ಗೃಹಪ್ರವೇಶ, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಗಳ ನೇಮೋತ್ಸವಗಳು ಬ್ರಹ್ಮಶ್ರೀ ಇರುವೈಲು ಕೇಶವದಾಸ ತಂತ್ರಿ ಮತ್ತು ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳ ನೇತೃತ್ವದಲ್ಲಿ ಮೇ 13ರಿಂದ 17ರ ತನಕ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

Advertisement

ಮೇ 13 ರಂದು ಬೆಳಿಗ್ಗೆ 7ರಿಂದ ಗಣಹೋಮ, ವಾಸದ ಮನೆಯ ಗೃಹಪ್ರವೇಶ, 9ರಿಂದ ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ದೇವಾಲಯದಿಂದ ವಾಗ್ಮಾನ್‌ ದೇವರ ಮನೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 11ಕ್ಕೆ ಉಗ್ರಾಣ ತುಂಬಿಸುವುದು, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, 6ಕ್ಕೆ ವಿವಿಧ ವೈಧಿಕ ಕಾರ್ಯಕ್ರಮಗಳು, 6.30ಕ್ಕೆ ಕುಲಗುರು ತಾನೋಜಿ ರಾವ್‌ ವಾಗ್ಮಾನ್‌ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಮೋಜಿ ರಾವ್‌ ಅಧ್ಯಕ್ಷತೆ ವಹಿಸುವರು. ಇಂದಿರಾಕುಟ್ಟಿ ಟೀಚರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುಂಡೂರು ಇವರಿಂದ ಮಕ್ಕಳ ಯಕ್ಷಗಾನ ಶಾಂಭವಿ ವಿಲಾಸ, ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಮೇ 14ರಂದು ಬೆಳಿಗ್ಗೆ 6ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, ಸಂಜೆ 5ರಿಂದ ಭಜನೆ, 6ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, 6.30ರಿಂದ ಕುಟುಂಬದ ಸದಸ್ಯರಿಂದ ನೃತ್ಯ ವೈವಿಧ್ಯ, ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಮೇ 15ರಂದು ಬೆಳಿಗ್ಗೆ 6ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, 2.30ರಿಂದ ವಿಠಲ ನಾಯಕ್‌ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ವೈಭವ, ಸಂಜೆ 5ರಿಂದ ಭಜನೆ, 6ರಿಂದ ವೈದಿಕ ಕಾರ್ಯಕ್ರಮಗಳು, 6.30ರಿಂದ ಹರಿಶ್ರೀ ವಿದ್ಯಾಲಯ ಕುಂಡಂಗುಳಿ ಇವರಿಂದ ಯೋಗ ಪ್ರದರ್ಶನ, ವಿವೇಕಾನಂದ ನಾಟ್ಯ ನಿಲಯ ಕುಂಟಾರು ಇವರಿಂದ ಭರತನಾಟ್ಯ, ರಾತ್ರಿ 9ಕ್ಕೆ ಅನ್ನಸಂತರ್ಪಣೆ, ದೈವಜ್ಞ ಬೇಳ ಪದ್ಮನಾಭ ಶರ್ಮ ಇವರಿಂದ ಅನುಗ್ರಹ ಆಶೀರ್ವಚನ ನಡೆಯಲಿದೆ.

ಮೇ 16ರಂದು ಬೆಳಿಗ್ಗೆ 4ರಿಂದ ವೈದಿಕ ಕಾರ್ಯಕ್ರಮಗಳು, 6.06ರಿಂದ ಆರಾಧನಾ ಶಕ್ತಿಗಳಾದ ಶ್ರೀ ಮಹಿಷಮರ್ದಿನಿ, ಶ್ರೀ ಆರ್ಯಕಾತ್ಯಾಯಿನಿ ದೇವಿ, ಶ್ರೀ ವಿಷ್ಣುಮೂರ್ತಿ, ಶ್ರೀ ಧೂಮಾವತೀ, ರಕ್ತೇಶ್ವರೀ, ಗುಳಿಗ ಸಾನ್ನಿಧ್ಯಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ಪಾನಕಪೂಜೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, 3ರಿಂದ ಧಾರ್ಮಿಕ ಸಭೆ, ಆಶೀರ್ವಚನ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಅನುಗ್ರಹ ಭಾಷಣ ಬ್ರಹ್ಮಶ್ರೀ ಇರುವೈಲು ಕೇಶವದಾಸ ತಂತ್ರಿ ಮತ್ತು ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳು, ಅಧ್ಯಕ್ಷತೆ ರಾಘವೇಂದ್ರ ರಾವ್‌ ಹುಣ್ಸೆಡ್ಕ, ಕುಟುಂಬದ ಹಿರಿಯರಿಗೆ ಸನ್ಮಾನ, ಆಕಾಶವಾಣಿ ಕಲಾವಿದ ಮಹಾಬಲೇಶ್ವರ ಹೆಬ್ಟಾರ್‌ ಇವರಿಂದ ಧಾರ್ಮಿಕ ಉಪನ್ಯಾಸ.

Advertisement

ಗೌರವ ಅತಿಥಿಗಳಾಗಿ ಪುರೋಹಿತ ಈಶ್ವರ ಭಟ್‌, ಕುಲಗುರು ತಾನೋಜಿ ರಾವ್‌, ಮಾಧವನ್‌ ನಾಯರ್‌ ಕುಂಡಂಗುಳಿ, ವಾಸ್ತುಶಿಲ್ಪಿ ಪುಷ್ಪರಾಜ್‌, ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರನ್‌, ಗ್ರಾಮ ಪಂಚಾಯಿತಿ ಸದಸ್ಯೆ ಕೃಪಾಜ್ಯೋತಿ, ಆರ್ಯಮರಾಠ ಸಮಾಜ ಸಂಘದ ಅಧ್ಯಕ್ಷ ಯತೀಂದ್ರ ರಾವ್‌, ಕುಂಡಗುಳಿ ಕ್ಷೇತ್ರ ಆಡಳಿತೆ ಸಮಿತಿ ಅಧ್ಯಕ್ಷ ಕೋಡೋತ್ತ್ ವೇಣುಗೋಪಾಲನ್‌ ನಾಯರ್‌, ಗಿರಿಧರ ರಾವ್‌ ವಾಗ್ಮಾನ್‌, ದಾಕೋಜಿ ರಾವ್‌ ಚಂದ್ರಮಾನ್‌, ಹರೀಶ ಎಂ ರಾವ್‌ ಲಾಡ್‌ ಭಾಗವಹಿಸುವರು. ಸಂಜೆ 6ರಿಂದ ದೈವಗಳ ಭಂಡಾರ ಆಗಮನ, ರಾತ್ರಿ 8ಕ್ಕೆ ಮಹಾಪೂಜೆ, 9ಕ್ಕೆ ಅನ್ನ ಸಂತರ್ಪಣೆ, 9.30ರಿಂದ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಮೇ 17ರಂದು ಬೆಳಿಗ್ಗೆ 11ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಶ್ರೀ ವಿಷ್ಣುಮೂರ್ತಿ, ಧೂಮಾವತಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next