Advertisement

Malpe: ವಡಭಾಂಡ ಬಲರಾಮ ದೇವಸ್ಥಾನ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

12:31 PM Mar 22, 2024 | Team Udayavani |

ಮಲ್ಪೆ: ಮಕ್ಕಳನ್ನು ದೇವಸ್ಥಾನಗಳಿಗೆ ಹೆಚ್ಚು ಹೆಚ್ಚು ಕರೆತರುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಪರಿಚಯವನ್ನು ಮಾಡಿಸಬೇಕಾಗಿದೆ. ಮುಂದೆ ಅವರ ಮೂಲಕ ನಿರಂತರವಾಗಿ ಈ ಸಂಸ್ಕೃತಿ ಬೆಳಗಬೇಕು, ಈ ನಿಟ್ಟಿನಲ್ಲಿ ದೇವರ ಅನುಗ್ರಹ ಇಡೀ ಗ್ರಾಮಕ್ಕೆ ಸದಾ ದೊರಕುವಂತಾಗಲಿ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.

Advertisement

ಅವರು ಗುರುವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ದೇವರ ಅನುಗ್ರಹ ಇದ್ದರೆ ಮಾತ್ರ ನಮ್ಮ ಬದುಕಿನ ಪ್ರಯತ್ನ ಯಶ್ವಸಿಯಾಗುತ್ತದೆ. ನಮ್ಮ ಎಲ್ಲ ಶ್ರಮ ಸಾರ್ಥಕವಾಗುವುದು ಸತ್ಕರ್ಮಗಳು ನಿರಂತರವಾಗಿ ನಡೆದಾಗ ಮಾತ್ರ. ಬಲರಾಮ ದೇವಸ್ಥಾನದಲ್ಲಿ  ನಿರಂತರವಾಗಿ ಒಳ್ಳೆಯ ಕೆಲಸ ಕಾರ್ಯಕ್ರಮಗಳು ನಡೆದು ನಾಡಿಗೆ ಸುಭಿಕ್ಷೆ, ಜನರಿಗೆ ನೆಮ್ಮದಿಯ ಬದುಕು ದೊರೆಯುವಂತಾಗಲಿ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ವೇ| ಮೂ| ವೇದವ್ಯಾಸ ಐತಾಳ ಸಗ್ರಿ ಅವರಿಂದ ಪ್ರವಚನ ನಡೆಯಿತು.

ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌, ಮಾಜಿ ಶಾಸಕ ರಘುಪತಿ ಭಟ್‌, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರು ಪ್ರವೀಣ್‌ ಎಂ. ಪೂಜಾರಿ, ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಸುಭಾಸ್‌ ಮೆಂಡನ್‌, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್‌, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್‌ ಕುಮಾರ್‌ ಮಂಜ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ನಗರಸಭಾ ಸದಸ್ಯೆ ಎಡ್ಲಿನ್‌ ಕರ್ಕಡ, ಲೆಕ್ಕ ಪರಿಶೋಧಕ ಪ್ರಶಾಂತ್‌ ಹೊಳ್ಳ, ಬೆಂಗಳೂರು ಪೂರ್ಣ ಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಸತ್ಯನಾರಾಯಣದ ಆಚಾರ್ಯ, ಉದ್ಯಮಿ ಪ್ರಶಾಂತ್‌ ಬನ್ನಂಜೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ ಮೂಲಿಗಾರ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.

Advertisement

ವಿಕ್ರಮ್‌ ಟಿ. ಶ್ರೀಯಾನ್‌ ಸ್ವಾಗತಿಸಿದರು. ನಿರೂಪಿಸಿ, ವಂದಿಸಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು, ಸತೀಶ್‌ ಕೊಡವೂರು ವಂದಿಸಿದರು.

ಇಂದು ದೇವರ ಪ್ರತಿಷ್ಠೆ, ಮಹಾ ಅನ್ನಸಂತರ್ಪಣೆ

ಗುರುವಾರ ಸೂರ್ಯಾಸ್ತದಿಂದ ಶುಕ್ರವಾರ ಸುರ್ಯೋದಯದ ವರೆಗೆ ನಡೆಯುವ ಭಜನೆಗೆ ಪೇಜಾವರ ಶೀಗಳು ಚಾಲನೆ ನೀಡಿದರು. ಬೆಳಗ್ಗೆ ಗಣಪತಿ ಯಾಗ, ಪೂರ್ಣ ಗ್ರಹಶಾಂತಿ, ಚೋರ ಶಾಂತಿ, ಗೋಪೂಜೆ, ಪ್ರತ್ಯಕ್ಷ ಗೋದಾನ, ಶಿಲಾ ಪ್ರತಿಷ್ಠೆ, ಪೀಠ ಪ್ರತಿಷ್ಠೆಯಾಗಲಿದೆ. ಬೆಳಗ್ಗಿನ 10.06ರ ವೃಷಭ ಲಗ್ನದಲ್ಲಿ ಪರಿವಾರ ಸಹಿತ ದೇವರ ಬಿಂಬ ಪ್ರತಿಷ್ಠೆಗೊಳ್ಳಲಿದೆ. ಬಳಿಕ ಜೀವಕುಂಭಾಭಿಷೇಕ, ನಿದ್ರಾಕುಂಭ, ತತ್ವಕಲಶಾಭಿಷೇಕ, ನ್ಯಾಸಪೂಜೆ, ಪ್ರತಿಷ್ಠಾಂಗ ಬಲಿ, ನಿತ್ಯ ನೈಮಿತ್ತಿಕ ಪೂಜಾ ವಿಧಿ ಜರಗಲಿರುವುದು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿ.

Advertisement

Udayavani is now on Telegram. Click here to join our channel and stay updated with the latest news.

Next