ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರಿ ದೆ„ವಸಾನ್ನಿಧ್ಯಗಳ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಏಳನೆ ದಿನವಾದ ಎ. 8ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಭಜನೆ, ಸಾವಿತ್ರಿ ಕೆ. ದೊಡ್ಡಮಾಣಿ ಮತ್ತು ಶಿಷ್ಯರಿಂದ ಸಂಗೀತ ಕಛೇರಿ, ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ ನಾರಾಯಣಮಂಗಲ ವಿಘ್ನೇಶ್ವರ ಯಕ್ಷಗಾನ ಕಲಾಸಂಘದ ಕಲಾವಿದರಿಂದ ರಣವೀಳ್ಯ ತಾಳಮದ್ದಳೆ, ಸಂಜೆ ಭಜನೆ, ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಗಜೇಂದ್ರಮೋಕ್ಷ ಕಂಸವಧೆ ರತಿಕಲ್ಯಾಣ ಯಕ್ಷಗಾನ ಬಯಲಾಟ ಜರಗಿತು.
ರಾತ್ರಿ ಸೋಪಾನದಲ್ಲಿ ಪೂಜೆ, ಅಂಕುರ ಪೂಜೆ, ರಾತ್ರಿ ಪೂಜೆ ಜರಗಿತು.
ಇಂದಿನ ಕಾರ್ಯಕ್ರಮ
ಎ. 9ರಂದು ಬೆಳಗ್ಗೆ 6.30ರಿಂದ ವೈದಿಕ ಕಾರ್ಯಕ್ರಮಗಳು, 10.30ರಿ ಂದ ಭಜನೆ, ಕಡೆಶಿವಾಲಯದ ಗಹನ ಶ್ರೀ ಬಳಗದಿಂದ ಸಂಗೀತ ಕಛೇರಿ, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2ರಿಂದ ಪ್ರಸಿದ್ಧ ಕಲಾವಿದ ರಿಂದ ಶ್ರೀಕೃಷ್ಣ ಲೀಲಾಮೃತಂ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ಭಜನೆ, ರಾತ್ರಿ 6ರಿಂದ ವೈದಿಕ ಕಾರ್ಯಕ್ರಮಗಳ ಬಳಿಕ ರಾತ್ರಿಪೂಜೆ, 7ರಿಂದ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯರಿಂದ ನೃತ್ಯಾರ್ಪಣಂ-ಭರತನಾಟ್ಯ ಮತ್ತು ಜಾನಪದ ನೃತ್ಯನಡೆಯಲಿದೆ.
ಎ. 10ರಂದು ಬ್ರಹ್ಮಕಲಶ ನಡೆಯಲಿದೆ.