Advertisement

ಮಕ್ಕಳ ಜೀವಕ್ಕೆ ಕಂಟಕವಾದ ಬ್ರಹ್ಮಗಿರಿ ಪಾರ್ಕ್‌!

08:33 PM Sep 14, 2021 | Team Udayavani |

ಉಡುಪಿ: ನಗರದ ಬ್ರಹ್ಮಗಿರಿ -ಬನ್ನಂಜೆ ಮಾರ್ಗದ ಬಾಲಭವನ ರಂಗಮಂದಿರ ಸಮೀಪದ ಮಕ್ಕಳ ಆಟದ ಪಾರ್ಕ್‌ ಸೂಕ್ತ ನಿರ್ವಹಣೆಯಿಲ್ಲದೆ ಗಿಡಗಂಟಿಗಳು ಬೆಳೆದು ನಿಂತಿದೆ. ಇದರಲ್ಲಿ ಅಡಗಿದ ವಿಷ ಜಂತುಗಳ ಮಕ್ಕಳ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.

Advertisement

ವಿಷ ಜಂತುಗಳಿರುವ ಸಾಧ್ಯತೆ:

ನಗರದಲ್ಲಿ ಅಜ್ಜರಕಾಡು ಪಾರ್ಕ್‌ ಹೊರತು ಪಡಿಸಿದರೆ, ಬನ್ನಂಜೆ ಬಾಲಭವನದಲ್ಲಿರುವ ಮಕ್ಕಳ ಪಾರ್ಕ್‌ಗೆ ಬೇಡಿಕೆ ಇದೆ. ಪ್ರಸ್ತುತ ಮಕ್ಕಳ ಆಟದ ಪರಿಕರಗಳಿರುವ ಜಾಗದಲ್ಲಿ ಗಿಡಗಳು ಬೆಳೆದು ದೊಡ್ಡ ಪೊದೆಗಳು ಸೃಷ್ಟಿಯಾಗಿದೆ. ಇಲ್ಲಿ ವಿಷ ಜಂತುಗಳು ಇರುವ ಸಾಧ್ಯತೆಗಳಿದ್ದು, ಮಕ್ಕಳ ಜೀವಕ್ಕೆ ಅಪಾಯವಾಗ ಬಹುದಾಗಿದೆ. ಆಟವಾಡಲು ಬರುವ ಮಕ್ಕಳ ಹಿತದೃಷ್ಟಿಯಿಂದ ಸಂಬಂಧಪಟ್ಟವರು ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಉಡುಪಿ ತಾಲೂಕು ಪಂಚಾಯ ತ್‌ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ (ಸಿಡಿಪಿಒ) ಆವರಣದಲ್ಲಿಯೇ ರಂಗ ಮಂದಿರ ಹಾಗೂ ಪಾರ್ಕ್‌ ಇದೆ. ಮೂರು ವರ್ಷಗಳ ಜಿಲ್ಲಾ ಬಾಲ ಭವನದ ರಂಗಮಂದಿರವನ್ನು 14 ಲ.ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಈ ವೇಳೆ ಪಾರ್ಕ್‌ನಲ್ಲಿ ಮಕ್ಕಳ ಪರಿಕರಗಳನ್ನು ಅಳವಡಿಸಿ ಸುಂದರವಾಗಿರಿಸಲಾಗಿತ್ತು. ಆದರೆ ರಂಗಮಂದಿರ ಉದ್ಘಾಟನೆಯಾದ ಬಳಿಕ ಕಾರ್ಯಕ್ರಮಗಳು ನಡೆದಿರುವುದು ಅಪರೂಪವಾಗಿದೆ. ಕಟ್ಟಡ ನಿರ್ಮಾಣದ ಸಾಮಗ್ರಿಗಳು, ಕಸ, ಕಡ್ಡಿಗಳಿಂದ ತುಂಬಿರುವುದರ ಜತೆಗೆ ಬೀದಿ ನಾಯಿಗಳು ಆಶ್ರಯ ಪಡೆಯುವ ತಾಣವಾಗಿ ಪರಿಣಮಿಸಿದೆ.

ಬಳಕೆಯಾಗದ ಪಾರ್ಕ್‌:

Advertisement

ಪ್ರಸ್ತುತ ಮಕ್ಕಳಿಗೆ ತರಗತಿಗಳು ಇಲ್ಲದೆ ಇರುವುದರಿಂದ ಪಾರ್ಕ್‌ಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಜ್ಜರಕಾಡು ಪಾರ್ಕ್‌ನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯ ಸಮೀಪದವರು ಬಾಲಭವನದ ಸಮೀಪ ಇರುವ ಪಾರ್ಕ್‌ ಕಡೆಗೆ ಮುಖ ಹಾಕುತ್ತಿದ್ದಾರೆ. ಆದರೆ ಪಾರ್ಕ್‌ನಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಮಕ್ಕಳನ್ನು ಈ ಪಾರ್ಕ್‌ನಲ್ಲಿ ಆಟವಾಡಲು ಬಿಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ವ್ಯಯಿಸಿ ಮಕ್ಕಳಿಗಾಗಿ ನಿರ್ಮಿಸಿದ ಪಾರ್ಕ್‌ ಬಳಕೆಯಾಗುತ್ತಿಲ್ಲ. ಆಳೆತ್ತರದಲ್ಲಿ ಗಿಡಗಳು ಬೆಳೆದು ನಿಂತಿದೆ. ಶೀಘ್ರದಲ್ಲಿ ಗಿಡಗಳನ್ನು ತೆರವುಗೊಳಿಸಿ ಮಕ್ಕಳು ಆಟವಾಡಲು ಅನುವು ಮಾಡಬೇಕು.ಸರಿತಾ, ಹೆತ್ತವರು

ಮಳೆ ಕಡಿಮೆಯಾಗುತ್ತಿದ್ದಂತೆ ಗಿಡಗಂಟಿಗಳನ್ನು ಸ್ವತ್ಛಗೊಳಿಸಿ, ಮಕ್ಕಳು ಆಟವಾಡಲು ಅನುವು ಮಾಡಿಕೊಡಲಾಗುತ್ತದೆ. ಸುಮಾರು 19 ಲ.ರೂ. ವೆಚ್ಚದಲ್ಲಿ ಬಾಲಭವನ ಪಾರ್ಕ್‌ ಅಭಿವೃದ್ಧಿ ಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. – ಶೇಷಪ್ಪ , ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next