Advertisement

ಶ್ರೀ ಸಾಯಿಮಂದಿರದಲ್ಲಿ ಬ್ರಹ್ಮ ಕಲಶೋತ್ಸವ

12:48 PM Apr 20, 2018 | Team Udayavani |

ಕೆ.ಆರ್‌.ನಗರ: ಪಟ್ಟಣದ ಹೊರವಲಯದಲ್ಲಿರುವ ಎಡತೊರೆ ಅರ್ಕೇಶ್ವರ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಿಸಿರುವ ಶ್ರೀ ಸಾಯಿಮಂದಿರದ ಉದ್ಘಾಟನೆ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮ ಗುರುವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಕಳೆದ ಮೂರು ದಿನಗಳಿಂದ ನಡೆದ ಶ್ರೀ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಸಲುವಾಗಿ ವಿವಧ ಪೂಜಾ ಕೈಂಕರ್ಯ, ಹೋಮ ಹವನಗಳನ್ನು ನೆರವೇರಿಸಲಾಯಿತು.

Advertisement

ಮೈಸೂರಿನ ವಿದ್ವಾನ್‌ ಶ್ರೀನಿವಾಸ ಉಪಾಧ್ಯಾಯ ಮತ್ತು ವಿಘ್ನೇಶ್ವರ ಭಟ್‌ ನೇತ್ರತ್ವದಲ್ಲಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಪ್ರತಿಷ್ಠಾ ಹೋಮ, ಶ್ರೀ ಸಾಯಿಬಾಬಾ ನೂತನ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮ ಕಲಶಾಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮೊದಲಾದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. 

ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಂದ ಸಂಗೀತ ಹಾಗೂ ಸಾಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶ್ರೀ ಸಾಯಿಬಾಬಾ ಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಶ್ರೀಶಂಕರಭಾರತೀ ಸ್ವಾಮೀಜಿ ವಹಿಸಿದ್ದರು. ಶ್ರೀ ಸಾಯಿಬಾಬಾ ಮಂದಿರದ ಸ್ಥಾಪಕ ಹಾಗೂ ಗುತ್ತಿಗೆದಾರ ಮಂಜುನಾಥ್‌, ಶ್ರೀ ಸಾಯಿ ಮಂದಿರದ ಉದ್ಘಾಟನಾ ಸೇವಾ ಸಮಿತಿ ನಿರ್ದೇಶಕರಾದ ಗೌಡಪ್ಪ, ವಕೀಲೆ ಪದ್ಮ, ಶಿಕ್ಷಕಿ ಮಧು, ಸಂಗೀತಾ, ಕವಿತಾ ಮತ್ತು ಸೋಮಣ್ಣ ಹಾಗೂ ಅರುಣ್‌ಸಾಯಿರಾಂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next