Advertisement

ಇಮ್ಮಡಿಹಳ್ಳಿಯಲ್ಲಿ ಬ್ರಹ್ಮ ರಥೋತ್ಸವ

11:53 AM Mar 05, 2017 | |

ಮಹದೇವಪುರ: ಪುರಾತನ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು ವೈಟ್‌ಫೀಲ್ಡ್‌ ಸಮೀಪದ ಇಮ್ಮಡಿಹಳ್ಳಿಯಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಮತ್ತು ಪಾಲಿಕೆ ಸದಸ್ಯ ಎಸ್‌.ಉದಯ್‌ಕುಮಾರ್‌ ಮುಜರಾಯಿ ಅಧಿಕಾರಿಗಳೊಂದಿಗೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ರಥೋತ್ಸವದಲ್ಲಿ ಇಮ್ಮಡಿಹಳ್ಳಿ, ಹಗದೂರು, ಕಾಡುಗುಡಿ, ಬೆಳತೂರು, ಚನ್ನಸಂದ್ರ, ನಾಗೊಂಡಹಳ್ಳಿ, ಓ ಫಾರಂ, ಪಟ್ಟಂದೂರು ಅಗ್ರಹಾರ, ವರ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ರಥೋತ್ಸವದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ, ಕೀಲು ಕುದುರೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ ಹಾಗೂ ಹಳ್ಳಿಸೊಗಡಿನ ಆರತಿ ದೀಪಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. 

ದೇವಸ್ಥಾನದ ಧರ್ಮದರ್ಶಿ ಹನುಮಂತೆಗೌಡ, ಸಂಸದ ಪಿ.ಸಿ ಮೋಹನ್‌, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಪಾಲಿಕೆ ಸದಸ್ಯ ಎಸ್‌.ಮುನಿಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್‌, ರಾಜರೆಡ್ಡಿ, ಜಯಚಂದ್ರರೆಡ್ಡಿ, ಚನ್ನಸಂದ್ರ ಚಂದ್ರಶೇಖರ್‌, ಯೋಗೇಶ್‌ಆರಾಧ್ಯ, ಅರ್ಚಕರಾದ ಕೆ.ಜಿ.ಶ್ರೀನಿವಾಸ್‌ ಐಯ್ಯಂಗಾರ್‌, ವರ್ತೂರು ಶ್ರೀಧರ್‌, ಅನಂತರಾಮಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next