Advertisement
ಈ ಸಮಸ್ಯೆಗಳಿಗೆ ಮುಖ್ಯವಾಗಿ ಇಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣದ ವಿಳಂಬ ನೀತಿಯೇ ಕಾರಣವಾದರೆ ಈ ಹೆದ್ದಾರಿಯ ಇಕ್ಕೆಲಗಳಲ್ಲಿ ರಸ್ತೆ ಕೆಸರು ಮಯವಾಗಿರುವುದರಿಂದ ಜನರು ಅಪಾಯವನ್ನು ಎದುರಿಸಬೇಕಾಗಿದೆ.
Related Articles
Advertisement
ಉಡುಪಿ, ಕುಂದಾಪುರ ಕಡೆಗೆ ಬರುವ ಆಟೋ ರಿಕ್ಷಾ , ಬೈಕ್, ಕಾರು, ಸರಕು ಸಾಗಣೆ ವಾಹನಗಳು ವಿರುದ್ಧ ದಿಕ್ಕಿ ನಲ್ಲಿ ಬಂದು ಜಂಕ್ಷನ್ ಬಳಿ ತಿರುವು ತೆಗೆದುಕೊಂಡು ಚಲಿಸುವುದರಿಂದ ಈ ಭಾಗದಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿದೆ. ಸರ್ವೀಸ್ ರಸ್ತೆ ಇಲ್ಲದ ಕಾರಣ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು ಅಪಘಾತಗಳು ಯಾವಾಗಲೂ ಸಂಭವಿಸುತ್ತಿವೆ. ಈ ಭಾಗದಲ್ಲಿ ಖಾಸಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್, ಎಲ್.ಐ.ಸಿ. ಕಚೇರಿಗಳು ಇದ್ದು , ಹೆಚ್ಚು ಜನ ಸಂಚಾರ ಇರುವುದರಿಂದ ಈ ಭಾಗದಲ್ಲಿ ರಾ.ಹೆ. ಪಕ್ಕದ ಮಾರ್ಗಗಳು ಹಾಗೂ ಚರಂಡಿ ವ್ಯವಸ್ಥೆಗಳ ಅನಿವಾರ್ಯತೆ ಇದೆ ಎನ್ನುವುದು ಹಾಗು ವಿರುದ್ಧದಿಕ್ಕಿನ ವಾಹನ ಸಂಚಾರದ ತಡೆಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಬೇಡಿಕೆಯಾಗಿದೆ. ಅವ್ಯವಸ್ಥೆ ಆಗದಂತೆ ಸೂಕ್ತ ಕ್ರಮ
ಹೆದ್ದಾರಿ ಅವ್ಯವಸ್ಥೆ , ಪಕ್ಕದ ಸರ್ವಿಸ್ ರಸ್ತೆಯ ಕುರಿತು ಈಗಾಗಲೇ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಟೋಲ್ ನಿರ್ವಾಹಕ ಪ್ರಮುಖರ ಗಮನಕ್ಕೆ ತರಲಾಗಿದ್ದು ಅವರು ಕೂಡಲೇ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆದ್ದಾರಿಯಲ್ಲಿ ನೀರು ಶೇಖರಣೆ ಹಾಗೂ ಪಕ್ಕದ ಸ್ಥಳದಲ್ಲಿ ಇಂತಹ ಅವ್ಯವಸ್ಥೆಗಳು ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ದಿವಾಕರ್,, ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ ಕಾಳಜಿ ವಹಿಸುವುದು ಅಗತ್ಯ
ಬ್ರಹ್ಮಾವರದ ಸರ್ವಿಸ್ ರಸ್ತೆ ಮಹೇಶ್ ಆಸ್ಪತ್ರೆ ಬಳಿ ತನಕ ಮಾತ್ರ ಇದ್ದು ಅಲ್ಲೇ 100 ಮೀಟರ್ ಮುಂದಕ್ಕೆ ಎಸ್. ಎಂ. ಕಾಲೇಜು, ಚರ್ಚ್ ಹಾಗೂ ಸಭಾಭವನಗಳಿಗೆ ದಿನಕ್ಕೆ ಕನಿಷ್ಠ 1500ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತದೆ. ಈ ಹೆದ್ದಾರಿ ಪಕ್ಕದಲ್ಲಿ ಓಡಾಟ ನಡೆಸುವ ಸಾವಿರಾರು ವಿದ್ಯಾರ್ಥಿಗಳು, ಸಿಬಂದಿಗೆ ರಸ್ತೆ ಪಕ್ಕದ ಅವ್ಯವಸ್ಥೆ ತೊಂದರೆ ಉಂಟಾಗಿದೆ. ರಸ್ತೆ ಪಕ್ಕದ ಸ್ಥಳವನ್ನು ರಸ್ತೆಯ ಬಗ್ಗೆ ಕಾಳಜಿ ವಹಿಸಬೇಕಾದ ತುರ್ತು ಅಗತ್ಯ ಇದೆ .
*ಆಲ್ವಿನ್ ಅಂದ್ರಾದೆ ,
ಕಾರ್ಯದರ್ಶಿ ಹೆದ್ದಾರಿ ಜಾಗೃತಿ ಸಮಿತಿ