Advertisement

ಅಂತಾರಾಷ್ಟ್ರೀಯ ಕ್ರಿಕೆಟಿಗೆ ನ್ಯೂಜಿಲ್ಯಾಂಡ್‌ ಕೀಪರ್‌ ಬ್ರಾಡ್ಲಿ ವಾಟ್ಲಿಂಗ್ ನಿವೃತ್ತಿ

12:18 AM May 13, 2021 | Team Udayavani |

ವೆಲ್ಲಿಂಗ್ಟನ್‌ : ನ್ಯೂಜಿಲ್ಯಾಂಡಿನ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಬ್ರಾಡ್ಲಿ ವಾಟ್ಲಿಂಗ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಬಳಿಕ ಕ್ರಿಕೆಟ್‌ನಿಂದ ದೂರ ಸರಿಯುವುದಾಗಿ ಹೇಳಿದ್ದಾರೆ.

Advertisement

ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್‌ ತಂಡ ಆತಿಥೇಯ ಇಂಗ್ಲೆಂಡ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಇದರಲ್ಲಿ ಪಾಲ್ಗೊಳ್ಳುವುದಾಗಿ ವಾಟ್ಲಿಂಗ್ ಹೇಳಿದ್ದಾರೆ.

ಟೆಸ್ಟ್‌ ಸ್ಪೆಷಲಿಸ್ಟ್‌
2009ರಲ್ಲಿ ಪ್ರವಾಸಿ ಪಾಕಿಸ್ಥಾನ ವಿರುದ್ಧ ನೇಪಿಯರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಟೆಸ್ಟ್‌ ಕ್ರಿಕೆಟಿಗೆ ಅಡಿಯಿರಿಸಿದ ವಾಟ್ಲಿಂಗ್, ಬಳಿಕ ಕೀಪರ್‌ ಆಗಿಯೂ ಯಶಸ್ಸು ಕಾಣತೊಡಗಿದರು. ಟೆಸ್ಟ್‌ ಸ್ಪೆಷಲಿಸ್ಟ್‌ ಆಗಿ ಗಮನಾರ್ಹ ಸಾಧನೆಗೈದರು. 73 ಟೆಸ್ಟ್‌ಗಳಿಂದ 259 ಕ್ಯಾಚ್‌, 8 ಸ್ಟಂಪಿಂಗ್‌ ಮಾಡಿದ ಸಾಧನೆ ಇವರದಾಗಿದೆ. ಇದರಲ್ಲಿ 10 ಕ್ಯಾಚ್‌ಗಳನ್ನು ಅವರು ಕ್ಷೇತ್ರರಕ್ಷಕನಾಗಿ ಪಡೆದಿದ್ದಾರೆ. ಕಿವೀಸ್‌ ತ್ರಿವಳಿಗಳಾದ ಟಿಮ್‌ ಸೌಥಿ (73), ಟ್ರೆಂಟ್‌ ಬೌಲ್ಟ್ (55), ನೀಲ್‌ ವ್ಯಾಗ್ನರ್‌ (53) ಬೌಲಿಂಗ್‌ನಲ್ಲಿ ಅತ್ಯಧಿಕ ಕ್ಯಾಚ್‌ ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲೂ ವಾಟಿÉಂಗ್‌ ಅವರದು ಅತ್ಯುತ್ತಮ ಸಾಧನೆಯಾಗಿದೆ. ಟೆಸ್ಟ್‌ನಲ್ಲಿ 8 ಶತಕಗಳನ್ನೊಳಗೊಂಡ 3,773 ರನ್‌ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next