Advertisement

ಸಬ್ಸಿಡಿ ಸಿಗದಿದ್ರೆ ಬಿಪಿಎಲ್ ಕಾರ್ಡ್ ಗೆ ಕೊಡಲ್ಲ ಸಕ್ಕರೆ

03:50 AM Feb 28, 2017 | Team Udayavani |

ಬೆಂಗಳೂರು: ಬಿಪಿಎಲ್‌ ಕಾರ್ಡ್‌ ದಾರರಿಗೆ ವಿತರಿಸುವ ಸಕ್ಕರೆಗೆ ಕೇಂದ್ರ ಸರಕಾರ ಸಬ್ಸಿಡಿ ಮುಂದುವರಿಸದಿದ್ದರೆ ಎಪ್ರಿಲ್‌ನಿಂದ ರಿಯಾಯಿತಿ ದರದ ಸಕ್ಕರೆ ವಿತರಣೆ ಸ್ಥಗಿತಗೊಳ್ಳಲಿದೆ.

Advertisement

ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿ ಕಾರ್ಡ್‌ಗೆ ತಿಂಗಳಿಗೆ ಒಂದು ಕೆ.ಜಿ. ಸಕ್ಕರೆ ವಿತರಿಸಲಾಗುತ್ತಿದ್ದು, ಕೇಂದ್ರ ಸರಕಾರ ಪ್ರತಿ ಕೆ.ಜಿ.ಗೆ 18.50 ರೂ. ಸಬ್ಸಿಡಿ ನೀಡುತ್ತಿದ್ದು, ಇದರಿಂದಾಗಿ ಕಾರ್ಡ್‌ದಾರರಿಗೆ ರಾಜ್ಯ ಸರಕಾರ ಆ ಸಕ್ಕರೆಯನ್ನು 15 ರೂ.ಗೆ ನೀಡು ತ್ತಿದೆ. ಆದರೆ, ಎಪ್ರಿಲ್‌ ತಿಂಗಳಿನಿಂದ ಕೇಂದ್ರ ಸರಕಾರ ಸಬ್ಸಿಡಿ ಮುಂದು ವರಿಸುವ ಅನುಮಾನವಿದ್ದು, ಸಬ್ಸಿಡಿ ಸಿಗದಿದ್ದರೆ ಬಿಪಿಎಲ್‌ ಕಾರ್ಡ್‌
ದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ ಸ್ಥಗಿತಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಬಿಪಿಎಲ್‌ ಕಾರ್ಡ್‌ದಾರರಿಗೆ ರಿಯಾಯಿತಿ ದರ ದಲ್ಲಿ ಸಕ್ಕರೆ ನೀಡಲು ಪ್ರತಿ ವರ್ಷ ಕೇಂದ್ರ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತದೆ. ಆದರೆ,  ವಿತ್ತ ಸಚಿವ ಅರುಣ್‌ ಜೇಟಿ ಅವರು ಮಂಡಿಸಿದ 2017ಧಿಧಿ-18ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಯಾವುದೇ ಪ್ರಸ್ತಾವ ಇಲ್ಲ. ಯೋಜನೆ ಮುಂದುವರಿಸುವ ಬಗ್ಗೆ  ಘೋಷಣೆ 
ಮಾಡಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ಸಕ್ಕರೆಗೆ ಸಬ್ಸಿಡಿ ನೀಡುವ ಕುರಿತು ಮಾಹಿತಿ ಕೋರಿ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ಕೇಂದ್ರ ಸಬ್ಸಿಡಿ ಮುಂದುವರಿಸದಿದ್ದರೆ ಬಿಪಿಎಲ್‌ ಕಾರ್ಡ್‌ ದಾರರಿಗೆ ಸಕ್ಕರೆ ವಿತರಣೆ ಸ್ಥಗಿತಗೊಳಿಸುವುದು ಅನಿವಾರ್ಯ ಎಂದರು.

ರಾಜ್ಯದಲ್ಲಿ ಒಂದು ಕೋಟಿ ಬಿಪಿಎಲ್‌ ಕಾರ್ಡ್‌ಗಳಿದ್ದು, ತಿಂಗಳಿಗೆ ಒಂದು ಕೋಟಿ ಕಿಲೋ ಸಕ್ಕರೆ ವಿತರಿಸಲಾಗುತ್ತಿದೆ. 
ಕಾರ್ಡ್‌ದಾರರಿಂದ ಕೆ.ಜಿ. ಸಕ್ಕರೆಗೆ 15 ರೂ. ಪಡೆಯುತ್ತಿದ್ದು, 18.5 ರೂ. ಕೇಂದ್ರ ಸರಕಾರ ಭರಿಸುತ್ತಿತ್ತು. ಕಳೆದ ನಾಲ್ಕೈದು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಾಗಿದ್ದರೂ ಕೇಂದ್ರದ ಸಬ್ಸಿಡಿ ಮತ್ತು ಕಾರ್ಡ್‌ದಾರರಿಗೆ ವಿತರಿಸುವ ಸಕ್ಕರೆ ದರ ಏರಿಸಿಲ್ಲ. ಇದರಿಂದ ತಿಂಗಳಿಗೆ 9ರಿಂದ 10 ಕೋಟಿ ರೂ. ಹೊರೆಯಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸಬ್ಸಿಡಿ ಸ್ಥಗಿತಗೊಳಿಸಿದರೆ ಆ ಮೊತ್ತ 18.5 ಕೋಟಿ ರೂ. ಪ್ರತಿ ತಿಂಗಳು ರಾಜ್ಯ ಸರಕಾರ ಭರಿಸುವುದು ಕಷ್ಟಸಾಧ್ಯ ಎಂದರು.

Advertisement

ಗ್ಯಾಸ್‌ ಇದ್ದರೂ ಬಿಪಿಎಲ್‌ಗೆ  1 ಲೀ. ಸೀಮೆಎಣ್ಣೆ
ರಾಜ್ಯದ ಗ್ರಾಮೀಣ ಭಾಗದಲ್ಲಿ ಬಿಪಿಎಲ್‌ ಕಾರ್ಡ್‌ ಇರುವ ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿದ್ದರೂ ಅವರಿಗೆ ತಿಂಗಳಿಗೆ ಒಂದು ಲೀಟರ್‌ ಸೀಮೆಎಣ್ಣೆ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಗ್ಯಾಸ್‌ ಸಂಪರ್ಕ ಇದ್ದ ಬಿಪಿಎಲ್‌ ಕಾರ್ಡ್‌ ದಾರರಿಗೆ ಸೀಮೆಎಣ್ಣೆ ವಿತರಣೆಯನ್ನು ಕೇಂದ್ರ ಸ್ಥಗಿತಗೊಳಿಸಿದ್ದು, ಅದರಂತೆ ರಾಜ್ಯದಲ್ಲೂ ಸೀಮೆ ಎಣ್ಣೆ ವಿತರಣೆ ನಿಲ್ಲಿಸಲಾಗಿತ್ತು. ಆದರೆ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯವಾದಾಗ ರಾತ್ರಿ ವೇಳೆ ದೀಪ ಉರಿಸಲು ಸೀಮೆಎಣ್ಣೆ ಅಗತ್ಯವಿದ್ದು, ವಿತರಣೆ ಸ್ಥಗಿತಗೊಳಿಸದಂತೆ ಇತ್ತೀಚೆಗೆ ಮುಖ್ಯ ಮಂತ್ರಿ ಸೂಚಿಸಿದ್ದರು. ಅದರಂತೆ ಗ್ಯಾಸ್‌ ಸಂಪರ್ಕ ಹೊಂದಿದ ಬಿಪಿಎಲ್‌ ಕಾರ್ಡ್‌ದಾರರಿಗೂ ಒಂದು ಲೀಟರ್‌ ಸೀಮೆಎಣ್ಣೆಯನ್ನು ಮಾರ್ಚ್‌ನಿಂದ ವಿತರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next