Advertisement

ಬಿಪಿಎಲ್‌, ನಿವೇಶನ ಹಂಚಿಕೆ ಚುರುಕುಗೊಳಿಸಿ: ಪ್ರಮೋದ್‌

07:50 AM Aug 04, 2017 | Team Udayavani |

ಉಡುಪಿ : ಉಡುಪಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಿವಾಸಿಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ ಮತ್ತು ಸಂತ್ರಸ್ತರಿಗೆ ನಿವೇಶನ ಹಂಚಿಕೆ ಕಾರ್ಯವನ್ನು ಚುರುಕುಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಆ. 3ರಂದು ಉಡಪಿ ತಾ.ಪಂ. ಸಭಾಂಗಣದಲ್ಲಿ ಜರಗಿದ ಕಂದಾಯ ಇಲಾಕೆ, ವಸತಿ-ನಿವೇಶನ ಇಲಾಖೆ ಹಾಗೂ ಮೂಲಭೂತ ಸೌಕರ್ಯ ಇಲಾಖೆಯ ಅಧಿಕಾರಿಗಳೊಂದಿಗೆ, ಜನಪ್ರತಿನಿಧಿಗಳೊಂದಿಗೆ ಜರಗಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

4275 ಬಿಪಿಎಲ್‌ ಕೋರಿ ಅರ್ಜಿ ಬಂದಿವೆ. ಸುಮಾರು 12 ಗ್ರಾಮಗಳಲ್ಲಿ ಚೆಕ್‌ಲಿಸ್ಟ್‌ ಬಂದಿಲ್ಲ. ಅವುಗಳನ್ನು ಆ. 15ರೊಳಗೆ ಪರಿಶೀಲಿಸಿ, ಪೂರ್ಣಗೊಳಿಸಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತ ನೀಡಿದರು.
ಬಹ್ಮವಾರ  ಹೋಬಳಿಯಲ್ಲಿ   ಎ ಪಟ್ಟಿಯಲ್ಲಿ  440 ಮತ್ತು ಬಿ ಪಟ್ಟಿ ಯಲ್ಲಿ 743 ಅರ್ಜಿಗಳು ಬಾಕಿ ಇವೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದಾಗ ಅವೆಲ್ಲವೂ ವಾರದೊಳಗೆ ಪೂರ್ಣಗೊಳ್ಳಬೇಕೆಂದು ಆದೇಶಿಸಿದರು.

ನಿವೇಶನ ರಹಿತರಿಗೆ ನಿವೇಶನವನ್ನು ಹುಡುಕುವ ಕಾರ್ಯ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅವರ ಕಾನೂನುಗಳು ಸಸೂತ್ರವಾಗಿ ನಿವೇಶನ ಗುರುತಿಸಲು ಕಷ್ಟವಾಗುತ್ತಿದೆ ಎಂದು ನಿವೇಶನ ಅಧಿಕಾರಿಗಳು ತಿಳಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಅರಣ್ಯ ಇಲಾಖೆ ಅವರಿಗೆ ಭೂಮಂಡಲ ಕೊಟ್ರೂ ಸಾಗಾಗಲ್ಲ ಎಂದು ವ್ಯಂಗವಾಡಿದರು. ಡೀಮ್ಡ್ ಫಾರೆಸ್ಟ್‌ ವಿಷಯದ ಕುರಿತು ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಅದಕ್ಕೆ ಸುಪ್ರಿಂ ಕೋರ್ಟಿಗೆ ಅಫಿದಾವತ್‌ ನೀಡದರೆ ಸಾಕಾಗುತ್ತದೆ ಎಂದು ಹೇಳಲಾಗಿದೆ. ಇದೇ ಕ್ರಮವನ್ನು ಅನುಸರಿಸಲಾಗುವುದು ಎಂದು ಅವರು ಹೇಳಿದರು. ಉಡುಪಿ ಹೋಬಳಿಯಲ್ಲಿ  ಎ ಮತ್ತು ಬಿ ಪಟ್ಟಿಯಲ್ಲಿ 595 ಅರ್ಜಿಗಳಿವೆ. ಅವರಿಗೆ ಹೆರ್ಗದಲ್ಲಿ ನಿವೇಶನ ನೀಡುವಂತೆ ಸೂಚಿಸಿದರು. ಉಡುಪಿ ಗ್ರಾಮಾಂತರದಲ್ಲಿ ಒಟ್ಟು 320 ಅರ್ಜಿಗಳಿವೆ ಅವುಗಳನ್ನು ತ್ವರಿತಗತಿಯಲ್ಲಿ  ವಿಲೇವಾಮಾಡಲಾಗುವುದು ಎಂದು ಸಚಿವರು ಹೇಳಿದರು. ಖಾಸಗಿ ಸ್ಥಳಗಳನ್ನು ಖರೀಧಿಸಲು ಹೊಸ ಅವಕಾಶವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ ಸಚಿವರು ಈ ಬಗ್ಗೆ ಚಿಂತಿಸಿ ನಿರ್ಧರಿಸಲಾಗುವುದು ಎಂದರು. ಸಭೆಯಲ್ಲಿ ಉಡುಪಿ ತಹಶೀಲ್ದಾರ ಮಹೇಶ್ಚಂದ್ರ, ಉಡುಪಿ ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ, ವಸತಿ ಸಮಿತಿಯ ನಯನಾ, ಇಲಾಖೆಗಳ ಮುಖ್ಯಸ್ಥರಾದ ಸದಾಶಿವ, ಮೋಹನ್‌ ರಾವ್‌, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next