Advertisement
ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮತ್ತು ಅಡೂxರು ಗ್ರಾಮಗಳ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಡೂxರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷೆ ರುಕಿಯಾ ಅಧ್ಯಕ್ಷತೆಯಲ್ಲಿ ಜರಗಿತು.
ಯಾರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕಿತ್ತೂ ಅವರಿಗೆ ಎಪಿಎಲ್ ಪಡಿತರ ಚೀಟಿ ನೀಡಲಾಗಿದೆ. ಯಾರಿಗೆ ಎಪಿಎಲ್ ನೀಡಬೇಕಿತ್ತೂ ಅವರಿಗೆ ಬಿಪಿಎಲ್ ನೀಡಲಾಗಿದೆ ಎಂದು ಗ್ರಾಮಸ್ಥರು ಆಹಾರ ಇಲಾಖಾಧಿಕಾರಿಯವರಲ್ಲಿ ಪ್ರಶ್ನಿಸಿದಾಗ ಆ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದರು.
Related Articles
“ಕೈಕಂಬ ಮೆಸ್ಕಾಂ ವಲಯದಿಂದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ. ನಮ್ಮ ವಲಯ ವ್ಯಾಪ್ತಿಯಲ್ಲಿ ಗಂಜಿಮಠ, ಗುರುಪುರ, ಕಂದಾವರ, ಪಡುಪೆರಾರ ಗ್ರಾಮ ಪಂಚಾಯತ್‌ಗಳು ಬರುತ್ತವೆ. ಮೂಳೂರು ಗ್ರಾಮಕ್ಕೆ ತುರ್ತು ಅಗತ್ಯ ಕಾಮಗಾರಿಗಳು ನಡೆಯಬೇಕಾಗಿವೆ. 20 ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯಲಿವೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೈಕಂಬ ವಲಯದ ಮೆಸ್ಕಾಂ ಅಧಿಕಾರಿ ಮೋಹನ್ ಸಭೆಗೆ ತಿಳಿಸಿದರು.
Advertisement
ಗ್ರಾಮೀಣ ಪ್ರದೇಶಗಳಲ್ಲಿ 4ಸ್ಟಾರ್, ನಗರ ಪ್ರದೇಶಗಳಲ್ಲಿ 5ಸ್ಟಾರ್ ಇರುವ ಉಪಕರಣವನ್ನು ಬಳಕೆ ಮಾಡುವ ಬಗ್ಗೆ ಸರಕಾರ ಈಗಾಗಲೇ ಆದೇಶ ನೀಡಿದೆ. ಇದರ ಬಳಕೆಯಿಂದ ವಿದ್ಯುತ್ ಮಿತಬಳಕೆಯಾಗಲಿದೆ. ಇಲಾಖೆಯಿಂದ ಇನ್ನೂ ಆದೇಶ ಬರಬೇಕಾಗಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. “ವ್ಯಾಪಾರಸ್ಥರು ಡಿಡಿ ತೆಗೆದುಕೊಳ್ಳುವಾಗ ಎಚ್ಚರ ವಹಿಸಿ. ನಕಲು ಡಿಡಿಗಳ ಹಾವಳಿ ಇದೆ’ ಎಂದು ಎಸ್‌ಐ ರಾಜಾರಾಮ್ ಎಚ್ಚರಿಸಿದರು.ಗುರುಪುರ ರಸ್ತೆಯ ಉಬ್ಬುಗಳಿಗೆ ಬಣ್ಣ ಬಳಿಯುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ಉದಯ ಭಟ್ ಜಿ.ಎಂ., ತಾ.ಪಂ. ಸದಸ್ಯ ಸಚಿನ್ ಕುಮಾರ್ ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಅಬೂಬಕ್ಕರ್ ಸಭೆಯನ್ನು ನಿರ್ವಹಿಸಿದರು.