Advertisement

ಬಿಪಿಎಲ್‌ ಕಾರ್ಡ್‌ಗೆ ಸ್ವದೃಢಪತ್ರ ಮಾನ್ಯ: ಖಾದರ್‌

10:50 AM Apr 01, 2017 | Team Udayavani |

ಮಂಗಳೂರು: ಬಿಪಿಎಲ್‌ ಕಾರ್ಡ್‌ ನೀಡಿಕೆ ಕುರಿತಂತೆ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದ್ದು ಮಾನದಂಡಕ್ಕೊಳಪಟ್ಟಂತೆ ಅರ್ಜಿಯಲ್ಲಿ ನಮೂದಿಸುವ ವಿವರಗಳ ಸ್ವದೃಢಪತ್ರವನ್ನು ಪರಿಗಣಿಸಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ನಮ್ಮ ಸರಕಾರ ಬಿಪಿಎಲ್‌ ಕಾರ್ಡ್‌ ಪಡೆಯಲು ಇದ್ದ 12 ಮಾನದಂಡವನ್ನು 4ಕ್ಕೆ ಇಳಿಸಿತ್ತು. ಇದೀಗ ಇದನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದೆ. ಅರ್ಜಿದಾರರು ಮಾನದಂಡದಂತೆ ತಮ್ಮ ಅರ್ಹತೆಗಳ ಬಗ್ಗೆ ಅರ್ಜಿಯಲ್ಲಿ ಸ್ವದೃಢೀಕರಣ ನೀಡಿದರೆ ಸಾಕಾಗುತ್ತದೆ. ಅದನ್ನು ಅಧಿಕಾರಿಗಳಿಂದ ದೃಢಪಡಿಸುವ ಆವಶ್ಯಕತೆ ಇರುವುದಿಲ್ಲ. ಗ್ರಾಮ ಕರಣಿಕರಿಂದ ಆದಾಯ ದೃಢಪತ್ರವನ್ನು ತಂದರೆ ಸಾಕಾಗುತ್ತದೆ ಎಂದು ವಿವರಿಸಿದರು.

ಅರ್ಜಿದಾರರ ಸ್ವದೃಢೀಕರಣವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಆದರೆ ಇಲಾಖೆ ಅವುಧಿಗಳಲ್ಲಿ ಕೆಲವು ಅರ್ಜಿಗಳನ್ನು ಕೈಗೆತ್ತಿಧಿಕೊಂಡು (ರ್‍ಯಾಂಡಮ್‌ ಆಗಿ) ತನಿಖೆ ನಡೆಸಧಿಲಿದೆ. ಅದಧಿರಲ್ಲಿ ಸುಳ್ಳು ಮಾಹಿತಿ ನೀಡಿರುವುದು ಕಂಡುಬಂದರೆ ಅವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು ಹಾಗೂ ಸರಕಾರದಿಂದ ಪಡೆದಿರುವ ಸೌಲಭ್ಯಗಳನ್ನು ಹಿಂದಕ್ಕೆ ಪಡೆದುಕೊಂಡು ಕಾನೂನು ಕ್ರಮಗಳನ್ನು ಜರಗಿಸಲಾಗುವುದು. ಅರ್ಜಿದಾರರಲ್ಲಿ ಶೇ. 90 ಮಂದಿ ಪ್ರಾಮಾಣಿಕರಿರುತ್ತಾರೆ. ಶೇ. 10 ಮಂದಿ ತಪ್ಪು ಮಾಹಿತಿ ನೀಡುವ ಸಾಧ್ಯತೆಗಳಿರುತ್ತವೆ. ಶೇ. 10 ಮಂದಿಗಾಗಿ ಶೇ. 90 ಮಂದಿಯನ್ನು ಸಮಸ್ಯೆ ಮಾಡುವುದು ಸರಿಯಲ್ಲ ಎಂದರು.

ರಾಜ್ಯದಲ್ಲಿ ಬಿಪಿಎಲ್‌ ಪಡಿತರ ಚೀಟಿಗಾಗಿ 9 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ವೆಬ್‌ ಮೂಲಕ ಪಡಿತರ ಚೀಟಿ ನೀಡುವ ಕುರಿತಂತೆ ಎನ್‌ಐಸಿ ಇಲಾಖೆಯ ಜತೆ ಸಮಾಲೋಚನೆ ನಡೆದಿದೆ ಎಂದರು.

ಈ ತಿಂಗಳಿನಿಂದ ತಲಾ 7 ಕಿಲೋ ಅಕ್ಕಿ
ಪ್ರತಿ ಬಿಪಿಎಲ್‌ ಸದಸ್ಯರಿಗೆ 7 ಕಿಲೋ ಅಕ್ಕಿ ನೀಡುವ ಕ್ರಮ ಎಪ್ರಿಲ್‌ನಿಂದ ಜಾರಿಗೆ ಬರ‌ಲಿದೆ. ರಾಜ್ಯದಲ್ಲಿ 4.20 ಕೋಟಿ ಬಿಪಿಎಲ್‌ ಪಡಿತರಚೀಟಿದಾರರಿದ್ದು ಮಾಸಿಕ ಸುಮಾರು 240 ಕೋ.ರೂ. ಇದಕ್ಕೆ ಹಣ ಬೇಕಾಗುತ್ತದೆ. ಹೆಚ್ಚುವರಿ ಅಕ್ಕಿಯನ್ನು ರಾಜ್ಯ ಸರಕಾರವೇ ಖರೀದಿಸಿ ನೀಡಲಿದೆ. ಈ ತಿಂಗಳಿನಿಂದ ಕೂಪನ್‌ ಪದ್ಧತಿ ರದ್ದಾಗಲಿದೆ. ಆಧಾರ್‌ ನಂಬರ್‌ ನೀಡದಿದ್ದರೂ ಪಡಿತರ ಸಾಮಗ್ರಿ ದೊರೆಯಲಿರುವುದು ಎಂದು ಸಚಿವ ಖಾದರ್‌ ತಿಳಿಸಿದರು.

Advertisement

ಇಂದಿರಾ ಕ್ಯಾಂಟೀನನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 8ರಂತೆ 198 ಕಡೆಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಪ್ರಥಮವಾಗಿ ಇದು ಬೆಂಗಳೂರಿನಲ್ಲಿ ಕಾರ್ಯಾಚರಿಸಲಿದೆ. ಯೋಜನೆಗೆ ಈ ಬಾರಿ ಮುಖ್ಯಮಂತ್ರಿ 100 ಕೋ.ರೂ. ಮೀಸಲಿರಿಸಿದ್ದಾರೆ. ಕ್ಯಾಂಟೀನ್‌ ನಿರ್ವಹಣೆಗೆ ಹೊಟೇಲ್‌ ಮಾಲಕರ ಸಂಘ, ಪ್ರಮುಖ ಹೊಟೇಲ್‌ ಸಂಸ್ಥೆಗಳು ಆಸಕ್ತಿ ತೋರಿಸಿವೆ. ಆಹಾರದ ಗುಣಮಟ್ಟ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಅವರಿಂದ ವಿವರಣೆಗಳನ್ನು ಕೇಳಲಾಗಿದೆ ಎಂದವರು ವಿವರಿಸಿದರು.

ಜಿಲ್ಲಾ ಆಹಾರ ಮತ್ತು ಪಡಿತರ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಜಯಪ್ಪ ಉಪಸ್ಥಿತರಿದ್ದರು.

ಸಂಘ-ಸಂಸ್ಥೆಗಳಿಗೆ ದಾಸೋಹ ವ್ಯವಸ್ಥೆ  ಜಾರಿ
ಅನಾಥಾಶ್ರಮ, ವೃದ್ಧಾಶ್ರಮ, ಮಹಿಳಾ ಆಶ್ರಮ ಮುಂತಾದವುಗಳನ್ನು ಉಚಿತವಾಗಿ ನಡೆಸುತ್ತಿರುವ ಸಂಘ-ಸಂಸ್ಥೆಗಳಿಗೆ ತಿಂಗಳಿಗೆ ವ್ಯಕ್ತಿಗೆ ತಲಾ ಮಾಸಿಕ 15 ಕಿಲೋ ಅಕ್ಕಿಯಂತೆ ಉಚಿತ ಪಡಿತರ ನೀಡುವ ವ್ಯವಸ್ಥೆಯನ್ನು  ಇಲಾಖೆ ಜಾರಿಗೆ ತಂದಿದೆ. ಸಂಘ-ಸಂಸ್ಥೆಗಳು ತಾವು ಕಾರ್ಯಾಚರಿಸುತ್ತಿರುವ ಪ್ರದೇಶ ವ್ಯಾಪ್ತಿಯ ತಾಲೂಕಿನ ಗೋದಾಮಿನಿಂದಲೇ ಇದನ್ನು ಪಡೆಯಬಹುದು. 6 ತಿಂಗಳಿಗೆ ಬೇಕಾಗುವಷ್ಟು  ಅಕ್ಕಿಯನ್ನು ಒಂದೇ ಬಾರಿ ಪಡೆಯಲು ಅವರಿಗೆ ಅವಕಾಶವಿದೆ. ಈ ಯೋಜನೆಗೆ ದಾಸೋಹ ಎಂದು ಹೆಸರಿಡಲಾಗಿದೆ. ಆಸಕ್ತರು ಜಿಲ್ಲಾ ಆಹಾರ ಮತ್ತು ಪಡಿತರ ಇಲಾಖೆಯ ಜಿಲ್ಲಾ ಉಪನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next