Advertisement

BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!

02:46 PM Nov 21, 2024 | Team Udayavani |

ನಮ್ಮ ಆಡಳಿತಗಾರರು ಕೆಲವೊಮ್ಮೆ ಸೇೂಲುವುದು ಗೆಲ್ಲುವುದು ಅವರು ಬಳಸುವ ಶಬ್ದಗಳಿಂದ ಹೊರತು ಅವರು ಮಾಡುವ ಕೆಲಸದಿಂದ ಅಲ್ಲ. ಹೀಗೆ ನೇೂಡಿದರೆ ಕಾಂಗ್ರೆಸ್ ನವರಿಗೂ ಬಿಜೆಪಿಯವರಿಗೂ ಸ್ವಲ್ಪ ವ್ಯತ್ಯಾಸವಿದೆ.ಈ ಬಿಜೆಪಿಗರು ಪದ ಬಳಕೆಯಲ್ಲಿ ತುಂಬಾ ನಿಷ್ಣಾತರು.ಅವರು ಸೃಷ್ಟಿಸುವ ಪದಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಾಗಲೇ ಐದು ವರುಷಗಳು ಮುಗಿದು ಹೇೂಗಿರುತ್ತದೆ. ಅದೇ ಕಾಂಗ್ರೆಸ್ ನವರು ಸೇೂತಿರುವುದು ಅವರು ಬಳಸುವ ಸಾದಾ ಸೀದಾ ಜನಸಾಮಾನ್ಯರಿಗೂ ಅರ್ಥವಾಗುವ ಶಬ್ದಗಳಿಂದ. ಬಿಜೆಪಿಯವರು ಬಳಸುವ ಶಬ್ದಗಳು ಎಷ್ಟು ಅಸಂಗತವಾಗಿರುತ್ತವೆ ಅಂದರೆ ಅದನ್ನು ಅರ್ಥಮಾಡಿಕೊಳ್ಳುವಾಗಲೇ ರಾತ್ರಿ ಬೆಳಗಾಗಿರುತ್ತದೆ.

Advertisement

ವಿಕಸಿತ ಭಾರತ ;ಆತ್ಮ ನಿರ್ಭರ ;ವಿಶ್ವ ಗುರು.. ಇದನ್ನು ಸುಲಭವಾಗಿ ವ್ಯಾಖ್ಯಾನ ಮಾಡುವುದು ಕಷ್ಟ ಹಾಗಾಗಿ ನಾವು ಈ ಪದಗಳನ್ನು ಹಿಡಿದುಕೊಂಡು ತೇಲುತ್ತಾ ಸುಖ ನಿದ್ರೆಗೆ ಜಾರಿ ಹೇೂಗಬೇಕು..ಯಾಕೆಂದರೆ ಈ ಪದಗಳ ಅರ್ಥ ಇನ್ನೂ ನಮಗಾಲಿಲ್ಲ… ಇದನ್ನೇ ಕರೆಯುವುದು ಅಸಂಗತ ಸಾಹಿತ್ಯ..!

ಅದೇ ಕಾಂಗ್ರೆಸ್ ನವರು ನೇೂಡಿ ಇವರಿಗೆ ಪದಗಳ ಬಂಡವಾಳದ ತೀವ್ರ ಕೊರತೆ ಕಾಡುತ್ತಿದೆ ಅನ್ನಿಸುತ್ತದೆ. ಇವರು ಬಳಸುವ ಪದಗಳು ಸಾದಾ ಸೀದಾವಾಗಿ ಹೊಟ್ಟೆಗೆ ನೇರವಾಗಿ ಬಡಿಯುವಂತೆ ಇರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಅಂದರೆ ಇತ್ತೀಚೆಗೆ ಕರ್ನಾಟಕದಲ್ಲಿ ಬಹು ಚರ್ಚೆಯಾಗುತ್ತಿರುವ ವಿಷಯ ಬಿ.ಪಿ.ಎಲ್. ಪಡಿತರ ಚೀಟಿ ರದ್ದು..ಈ ಕಾಂಗ್ರೆಸ್ ನವರು ಎಷ್ಟು ದಡ್ಡರು ಅಂದರೆ ಇದನ್ನು ಝರಿ ಶಾಲಿನೊಳಗೆ ಇಟ್ಟು ಹೊಡೆಯಲು ಸಾಧ್ಯವಿತ್ತು ಆದರೆ ಇವರಿಗೆ ಪದ ಸಾಹಿತ್ಯದ ಕೊರತೆ ಇದೆ ಅನ್ನುವುದು ಅವರ ಮಾತಿನಲ್ಲಿಯೇ ಸ್ವಷ್ಟವಾಗುತ್ತದೆ.

ಪಡಿತರ ರದ್ದು ಮಾಡುತ್ತೇವೆ ಅನ್ನುವುದರ ಬದಲಾಗಿ ಡಿಜಿಟಲೀಕರಣ ಮಾಡಲಾಗುವುದು ಅಂತಹ ಹೇಳಿದ್ದರೆ ಜನರಿಗೂ ಅರ್ಥ ವಾಗುತ್ತಿರಲಿಲ್ಲ..ವಿರೇೂಧ ಪಕ್ಷಗಳಿಗೂ ಸುಲಭವಾಗಿ ತಲೆಗೂ ಹೊಳೆಯುತ್ತಿರಲಿಲ್ಲ.ಈಗ ಇನ್ನೊಂದು ತಮಾಷೆ ನೇೂಡಿ ಕರ್ನಾಟಕದಲ್ಲಿ ವಿರೇೂಧಿಸುವ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಆಡಳಿತವಿರುವ ಕೇಂದ್ರ ಸರ್ಕಾರ ಪಡಿತರ ಕಾರ್ಡು ಡಿಜಿಟಲೀಕರಣ ಮಾಡುವುದರ ಮೂಲಕ ಸುಮಾರು 5.8 ಕೇೂಟಿ ಅನರ್ಹ ಪಡಿತರ ಚೀಟಿಗಳು ರದ್ದು ಮಾಡಲು ಮುಂದಾಗಿದೆ ಅನ್ನುವುದನ್ನು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ.

Advertisement

ಹಾಗಾದರೆ ರದ್ದು ಮಾಡುತ್ತೇವೆ ಅನ್ನುವುದಕ್ಕೂ ಡಿಜಿಟಲೀಕರಣದ ಮೂಲಕ ರದ್ದು ಮಾಡುವುದಕ್ಕೂ ವ್ಯತ್ಯಾಸ ಏನು? ಅಳಿಯ ಅಲ್ಲ..ಮಗಳ ಗಂಡ ಅಷ್ಟೇ ವ್ಯತ್ಯಾಸ ? ಮೇಲೆ ಕೂತವರು ಪದ ಬಳಕೆಯಲ್ಲಿ ಬುದ್ಧಿವಂತಿಕೆ ತೇೂರಿಸಿದ್ದಾರೆ..ಹಾಗಾಗಿ ಕಾಂಗ್ರೆಸ್ ನವರಿಗೂ ಅರ್ಥವಾಗಿಲ್ಲ..ಜನಸಾಮಾನ್ಯರಾದ ನಮಗೂ ಈ ಡಿಜಿಟಲ್‌ ಪದ ಅರ್ಥವಾಗಲಿಲ್ಲ.. ಏನೇೂ ಮಹತ್ತರವಾದ ಆಡಳಿತ ಸುಧಾರಣೆಗೆ ಕೇಂದ್ರ ಕೈ ಹಾಕಿದ್ದಾರೆ ಎಂದು ನಿಭ೯ಯರಾಗಿ ತಿರುಗುತ್ತಿದ್ದೇವೆ… ಅಷ್ಟೇ.

ಅದಕ್ಕೆ ಹೇಳುವುದು “Administration is an art..”ಇದನ್ನು ಕಾಂಗ್ರೆಸ್ ನವರು ಬಿಜೆಪಿಯವರಿಂದ ಕಲಿಯಬೇಕು..ಕಾಂಗ್ರೆಸ್ ಮುಖಂಡರೇ  ನೀವು ಕೆಲಸ ಮಾಡುವುದರಲ್ಲಿ ಸೇೂತರೂ ಪರವಾಗಿಲ್ಲ..ಪದ ಬಳಕೆಯಲ್ಲಿ ಮಾತ್ರ ಸೇೂಲ ಬೇಡಿ..ಅಷ್ಟೇ ಸಾಕು..?!

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next