Advertisement
ಇಂದು (ಫೆ.27) ಬಿಪಿಎಫ್ ಅಧ್ಯಕ್ಷ ಹಂಗ್ರಾಮ್ ಮೊಹಿಲರಿ ಟ್ವೀಟರ್ ನಲ್ಲಿ ಮೈತ್ರಿಯಿಂದ ಹೊರ ಬರುವ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಶಾಂತಿ, ಒಕ್ಕಟ್ಟು ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಬಿಪಿಎಫ್, ಮಹಾಜತ್ (ಕಾಂಗ್ರೆಸ್ ಮೈತ್ರಿಕೂಟ) ಜತೆ ಕೈ ಜೋಡಿಸುತ್ತಿದೆ ಎಂದು ಹೇಳಿರುವ ಅವರು, ನಾವು ಇಂದಿನಿಂದ(ಫೆ.27) ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿದ್ದೇವೆ ಎಂದಿದ್ದಾರೆ.
Related Articles
Advertisement
ಕಳೆದ ವರ್ಷ ‘ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್’ ನಲ್ಲಿ ಅಧಿಕಾರದ ಗದ್ದುಗೆ ಏರಲು ಬಯಸಿದ್ದ ಬಿಜೆಪಿ, ಮಿತ್ರ ಪಕ್ಷ ಬಿಪಿಎಫ್ ಪಕ್ಕಕ್ಕೆ ಸರಿಸಿ ‘ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್’ (ಯುಪಿಪಿಎಲ್) ಜತೆ ಹೊಂದಾಣಿಕೆ ಮಾಡಿಕೊಂಡಿತ್ತು. ಇದು ಬಿಪಿಎಫ್ ಮುನಿಸಿಗೆ ಕಾರಣವಾಯಿತು. ಅದನ್ನು ಇದೀಗ ಹೊರಹಾಕಿರುವ ಬಿಪಿಎಫ್ ಕಮಲದ ತೆಕ್ಕೆಯಿಂದ ಹೊರ ಬಂದಿದೆ.
ಚುನಾವಣೆ ಯಾವಾಗ ?
ಶುಕ್ರವಾರ (26) ಚುನಾವಣಾ ಆಯೋಗ ದೇಶದ 5 ರಾಜ್ಯಗಳ ವಿಧಾನ ಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿಗೆ ಎಂಟು ಹಾಗೂ ಪರಿಶಿಷ್ಟ ಪಂಗಡಕ್ಕೆ 16 ಸೀಟುಗಳನ್ನು ಮೀಸಲಿರಿಸಲಾಗಿದೆ.