Advertisement

ಮಹಿಳಾ ಪಡೆಗೆ ಬಿಪಿಇಟಿ ಕಡ್ಡಾಯ

08:42 AM Jun 17, 2020 | mahesh |

ಹೊಸದಿಲ್ಲಿ: ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳು, ಮಹಿಳಾ ಕೆಡೆಟ್‌ಗಳು ಹಾಗೂ ನೇಮಕಾತಿಗಳಿಗೆ ದೈಹಿಕ ಸಮರ ದಕ್ಷತಾ ಪರೀಕ್ಷೆಯನ್ನು (ಬಿಪಿಇಟಿ) ಕಡ್ಡಾಯಗೊಳಿಸಲಾಗಿದೆ. 2009ರ ಮೊದಲು ನಿಯೋಜನೆಗೊಂಡ ಹಾಗೂ 35 ವರ್ಷ ಮೇಲ್ಪಟ್ಟ ಮಹಿಳಾ ಅಧಿಕಾರಿ­ಗಳಿಗೂ ಬಿಪಿಇಟಿ ಕಡ್ಡಾಯಮಾಡಿ ಡೈರೆಕ್ಟೊರೇಟ್‌ ಜನರಲ್‌ ಆಫ್ ಮಿಲಿಟರಿ ಟ್ರೈನಿಂಗ್‌ (ಡಿಜಿಎಂಟಿ) ಹೊಸ ನಿರ್ದೇಶನಗಳನ್ನು ಜಾರಿಗೊಳಿಸಿದೆ.

Advertisement

ಏನಿದು ಬಿಪಿಇಟಿ?: ಇದು ದೈಹಿಕ ಪರೀಕ್ಷೆಗಳ ಸರಣಿ. ಅಧಿಕಾರಿಗಳಿಗೆ, ಸೈನಿಕರಿಗೆ ಮಿಲಿಟರಿ ಕ್ಷಮತೆ ಕಾಯ್ದುಕೊಳ್ಳಲು ಈ ಪರೀಕ್ಷೆ ನೆರವಾಗ­ಲಿದೆ. 5 ಕಿ.ಮೀ. ಓಟ, 60 ಮೀಟರ್‌ ಓಟ (ಸ್ಪ್ರಿಂಟ್‌), ಅಡ್ಡವಾಗಿ ಕಟ್ಟಿದ ಹಗ್ಗವನ್ನು ಹಾದು ಹೋಗುವುದು- ಇತ್ಯಾದಿ ಪರೀಕ್ಷೆಗಳು ಮಹಿಳಾ ಅಧಿಕಾರಿಗಳಿಗೆ ಕಡ್ಡಾಯವಾಗಿವೆ. 1500 ಮೀಟರ್‌ ಅನ್ನು 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಿದರೆ ಅತ್ಯುತ್ತಮ ಶ್ರೇಣಿ, 31 ನಿಮಿಷ 30 ಸೆಕೆಂಡಿನಲ್ಲಿ ಕ್ರಮಿಸಿದರೆ ಉತ್ತಮ ಶ್ರೇಣಿ, 33 ನಿಮಿಷದಲ್ಲಿ ಗುರಿ ತಲುಪಿದರೆ ತೃಪ್ತಿಕರ ಶ್ರೇಣಿ ಎಂಬ ಮಾನದಂಡ ನಿಗದಿಪಡಿಸಲಾಗಿದೆ. ಈ ಮೊದಲು (2011ರ ನಿರ್ದೇಶನ) ಎಲ್ಲ ಓಟಗಳಿಗೆ 2 ನಿಮಿಷ ಹೆಚ್ಚು ಕಾಲಾವಧಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next