Advertisement
ಬಡ ವಿದ್ಯಾರ್ಥಿಗಳ ಆಶಾಕಿರಣಶಿರ್ವ ಪರಿಸರ ಹಾಗೂ ದೂರದ ಊರುಗಳ ಹಲವಾರು ಬಡ ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ವಾಸ್ತವ್ಯ ಹೊಂದಿ ಪರಿಸರದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈದು ದೇಶ ವಿದೇಶಗಳಲ್ಲಿ ಉದೋÂಗದಲ್ಲಿದ್ದಾರೆ. ದಶಕಗಳ ಹಿಂದೆ ಈ ವಸತಿ ನಿಲಯದಲ್ಲಿ ಸುಮಾರು 60 ರಿಂದ 80 ಸಂಖ್ಯೆಯ ವಿದ್ಯಾರ್ಥಿಗಳು ವಾಸ್ತವ್ಯವಿದ್ದು ಇಬ್ಬರು ವಾರ್ಡನ್‌ಗಳು ಮತ್ತು ಓರ್ವ ಅಡುಗೆಯವರು ಇದ್ದರು. ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಹಾಸ್ಟೆಲ್‌ನಲ್ಲಿದ್ದು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು ಕ್ರಮೇಣ ಮುಚ್ಚಲ್ಪಟ್ಟಿತ್ತು.
2008ರಲ್ಲಿ ಜಿ.ಪಂ.ಅನುದಾನದಿಂದ ಹಳೆ ಕಟ್ಟಡದ ದುರಸ್ತಿ ಮಾಡಿ ಸುಣ್ಣಬಣ್ಣ ಬಳಿದು ಆವರಣ ಗೋಡೆ ನಿರ್ಮಿಸಿ ಬಾಲಕರ ಸುಸಜ್ಜಿತ ಶೌಚಾಲಯದೊಂದಿಗೆ ಹೊಸ ಆರ್‌ಸಿಸಿ ಕೋಣೆ ಸೇರ್ಪಡೆಗೊಂಡು ಸುಸ್ಥಿತಿಯಲ್ಲಿತ್ತು. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟ ಹಾಸ್ಟೆಲ್ ಕಟ್ಟಡವನ್ನು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಶಿರ್ವ ಗ್ರಾ.ಪಂ.ಗೆ ಉಪಯೋಗವಾಗುವಂತೆ ಹಸ್ತಾಂತರಿಸಿದ್ದರು.ಸುಸ್ಥಿತಿಯಲ್ಲಿದ್ದ ಕಟ್ಟಡವನ್ನು ಉಪಯೋಗಿಸುವ ಬದ್ಧತೆ ತೋರದೆ ಗ್ರಾ.ಪಂ.ನಿರ್ಲಕ್ಷé ವಹಿಸಿದೆ. ಸ್ಥಳೀಯಾಡಳಿತದ ನಿರ್ಲಕ್ಷ
ಹಸ್ತಾಂತರಗೊಂಡ ಹಾಸ್ಟೆಲ್ ಕಟ್ಟಡವನ್ನು ಉಪಯೋಗ ಮಾಡುವು ದಾಗಲೀ ಯಾ ಸದ್ರಿ ಸ್ಥಳದಲ್ಲಿ ಕಟ್ಟಡ ಕೆಡವಿ ಯಾವುದೇ ನೂತನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಆಸಕ್ತಿ ತೋರದೆ ಗ್ರಾ.ಪಂ.ಸಂಪೂರ್ಣ ನಿರ್ಲಕ್ಷé ವಹಿಸಿದೆ. ಹಳೆ ಕಟ್ಟಡಕ್ಕೆ ಹೊಂದಿಕೊಂಡು ನಿರ್ಮಿಸಿರುವ ಹೊಸ ಆರ್‌ಸಿಸಿ ಕಟ್ಟಡ ಕೂಡಾ ಉಪಯೋಗಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಸುಮಾರು 25 ಲ.ರೂ.ಗಳ ಮೌಲ್ಯದ ಕಟ್ಟಡ ಸರಿಯಾದ ನಿರ್ವಹಣೆಯಿಲ್ಲದೆ ಸುತ್ತಮುತ್ತ ಪೊದೆ ಗಿಡ ಗಂಟಿ ಬೆಳೆದು ನಿರುಪಯುಕ್ತವಾಗಿದೆ. ಕಿಟಿಕಿ ಬಾಗಿಲುಗಳು ಮುರಿದಿದ್ದು, ಮಾಡಿನ ಹೆಂಚುಗಳು ಹಾರಿ ಹೋಗಿ ಮಳೆ ನೀರು ಬಿದ್ದು ಗೋಡೆಗಳು ಶಿಥಿಲಗೊಂಡು ಸಾರ್ವಜನಿಕರ ತೆರಿಗೆಯ ಹಣ ಪೋಲಾಗುತ್ತಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ,ಚಟುವಟಿಕೆಯ ಕೇಂದ್ರವಾಗಿದ್ದ ಹಾಸ್ಟೆಲ್ ಕಟ್ಟಡ ಮತ್ತು ಧ್ವಜಸ್ತಂಭ ಪಾಳು ಬಿದ್ದು ಅನಾಥವಾಗಿದೆ.
Related Articles
ಸರಿಯಾದ ನಿರ್ವಹಣೆಯಿಲ್ಲದೆ ಕಟ್ಟಡದ ಕಿಟಿಕಿ ಬಾಗಿಲುಗಳು ಮುರಿದು ಹೋಗಿದ್ದು ಪಡ್ಡೆ ಹುಡುಗರ ಆಶ್ರಯ ತಾಣವಾಗಿದೆ. ಕಟ್ಟಡದ ಹಿಂಬದಿಯ ಬಾಗಿಲು ಮತ್ತು ಶೌಚಾಲಯದ ಬಾಗಿಲುಗಳು ಮುರಿದಿದ್ದು , ರಾತ್ರಿ ವೇಳೆಗೆ ಪಾಳು ಬಿದ್ದ ಕಟ್ಟಡ ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿದೆ.
Advertisement
ಶಿರ್ವ ಗ್ರಾ.ಪಂ.ಗೆ ಉಪಯೋಗಕ್ಕೆ ಬಾರದ ಈ ಕಟ್ಟಡವನ್ನು ಹಾಳುಗೆಡವದೆ ಶಾಸಕರು / ಜನಪ್ರತಿನಿಧಿಗಳು/ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಮುಂದಿನ ದಿನಗಳಲ್ಲಿ ಕಾಪು ತಾಲೂಕು ಕೇಂದ್ರವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ತಾಲೂಕು ಮಟ್ಟದ ಕಚೇರಿಗಳಿಗೆ ಅವಕಾಶ ಮಾಡಿಕೊಡಬೇಕೆಂಬುದು ಶಿರ್ವದ ನಾಗರಿಕರ ಆಶಯವಾಗಿದೆ.
ಕಟ್ಟಡದ ಬಗ್ಗೆ ಈಗಾಗಲೇ ಶಿರ್ವ ಗ್ರಾ.ಪಂ.ಆಡಳಿತದ ಗಮನಕ್ಕೆ ತಂದು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂ.ಅ.ಅಧಿಕಾರಿ ಮತ್ತು ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲಿಸಿದೇªವೆ. ಹಳೇ ಕಟ್ಟಡದ ದುರಸ್ತಿ ಯಾ ಕೆಡವಿ ಬೇರೆ ಕಟ್ಟಡ ಕಟ್ಟುವ ಬಗ್ಗೆ ಮತ್ತು ಹಳೆ ಕಟ್ಟಡಕ್ಕೆ ತಾಗಿ ನಿರ್ಮಿಸಿರುವ ಹೊಸ ಆರ್‌ಸಿಸಿ ಕಟ್ಟಡವನ್ನು ಉಳಿಸಿ ಗ್ರಾ.ಪಂ.ಗೋಡೌನ್ ಆಗಿ ಬಳಸುವಂತೆ ಸಲಹೆ ನೀಡಿದೇªನೆ.ಆದರೆ ಯಾವುದೇ ಸಲಹೆ ಈವರೆಗೆ ಕಾರ್ಯಗತವಾಗಿಲ್ಲ. ಕಟ್ಟಡಕ್ಕೆ ನೀರು ಸರಬರಾಜು ಆಗುತ್ತಿದ್ದ ಬಾವಿಯನ್ನು ಮುತುವರ್ಜಿ ವಹಿಸಿ ಶಾಸಕ ವಿನಯ ಕುಮಾರ್ ಸೊರಕೆಯವರ ಅನುದಾನದಿಂದ ದುರಸ್ತಿಗೊಳಿಸಿದೇªವೆ. ಪಂಪುಸೆಟ್, ಪೈಪ್‌ಲೈನ್ ಅಳವಡಿಸಿ ಸಾರ್ವಜನಿಕ ನೀರಿನ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಿ ಶಿರ್ವ ಪೇಟೆಗೆ ಕುಡಿಯುವ ನೀರಿನ ಸರಬರಾಜು ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಿ ಕೊಡಲಾಗಿದೆ.– ವಿಲ್ಸನ್ ರೊಡ್ರಿಗಸ್, ಜಿ.ಪಂ.ಸದಸ್ಯರು,ಶಿರ್ವ ಕ್ಷೇತ್ರ ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ಬಂಗ್ಲೆ ಮೈದಾನಕ್ಕೆ ಬರುವ ರಸ್ತೆಯನ್ನು ಡಾಮರೀಕರಣಗೊಳಿಸಿದರೆ ಉತ್ತಮ. ಈ ಪರಿಸರದಲ್ಲಿ ಮಾಲಿನ್ಯರಹಿತ ವಾತಾವರಣವಿರುವುದರಿಂದ ಸುಸಜ್ಜಿತ ಪಾರ್ಕ್ ನಿರ್ಮಿಸಿ ಸಾರ್ವಜನಿಕರಿಗೆ/ಮಕ್ಕಳಿಗೆ ವಾಯುವಿಹಾರಕ್ಕಾಗಿ ಅವಕಾಶ ಕಲ್ಪಿಸಬಹುದು.
– ಹರೀಶ್ ಆಚಾರ್ಯ, ಸ್ಥಳೀಯ ನಿವಾಸಿ.