Advertisement

Missing: ರಾಮನಗರ: ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆ

12:57 PM Sep 19, 2023 | Team Udayavani |

ರಾಮನಗರ: ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆಯಾಗಿರುವ ಪ್ರಕರಣ ಚನ್ನಪಟ್ಟಣ ತಾಲೂಕಿನ‌ ವಂದಾರಗುಪ್ಪೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Advertisement

ಮುಖ ತೊಳೆಯುವ ನೆಪದಲ್ಲಿ ಸರ್ಕಾರಿ ಬಾಲಮಂದಿರದಿಂದ ಅಪ್ರಾಪ್ತರು ನಾಪತ್ತೆಯಾಗಿದ್ದರು ಎನ್ನಲಾಗಿದ್ದು ಕಳೆದ ಮೂರು ದಿನಗಳಿಂದ ಸಿಬಂದಿಗಳು ಮಕ್ಕಳನ್ನ ಹುಡುಕುತ್ತಿದ್ದರು ಎನ್ನಲಾಗಿದೆ ಬಾಲಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕಳೆದ 14 ರಂದು ರಾಮನಗರ ಬಾಲಮಂದಿರದಿಂದ ಚನ್ನಪಟ್ಟಣ ತಾಲೂಕಿಗೆ ಬಾಲಕರು ವರ್ಗಾಗೊಂಡಿದ್ದರು. ಮೂರು ಪಾಳೆಯಲ್ಲಿ ಬಾಲಕರನ್ನು ಸಿಬ್ಬಂದಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ನಾಪತ್ತೆಯಾಗಿರುವ ಬಾಲಕರು 16, 13, 11 ವರ್ಷದವರು ಎನ್ನಲಾಗಿದೆ. ಸಿಬ್ಬಂದಿ ಸಿದ್ದರಾಜು ನೋಡಿಕೊಳ್ಳುತ್ತಿದ್ದ ಸಮಯದಲ್ಲಿ‌ ಬಾಲಕರು ನಾಪತ್ತೆಯಾಗಿದ್ದು ಇದೀಗ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next