ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನ ಖಾಸಗಿ ಶಾಲೆಯೊಂದರಲ್ಲಿ 4ನೇ ತರಗತಿಯ ವಿದ್ಯಾಥಿಯೊಬ್ಬನ ಮೇಲೆ ಅದೇ ತರಗತಿಯ ಇನ್ನಿತರ ಮೂವರು ವಿದ್ಯಾರ್ಥಿಗಳು ಸೇರಿ ಜಾಮಿಟ್ರಿ ಕಾಂಪಸ್‌ನಿಂದ 108 ಬಾರಿ ಚುಚ್ಚಿ, ಹಲ್ಲೆ ನಡೆಸಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಏರೋಡ್ರೋಮ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಇದನ್ನು ಗಂಭೀರ ಪರಿಗಣಿಸಲಾಗಿದೆ.
ಅಲ್ಲದೇ, ಈ ಸಂಬಂಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆಯೂ ಪೊಲೀಸರನ್ನು ಕೇಳಿದ್ದೇವೆ ಎಂದು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲೂéಸಿ) ಅಧ್ಯಕ್ಷೆ ಪಲ್ಲವಿ ಪೊರ್ವಾಲ್ ಅವರು ತಿಳಿಸಿದ್ದಾರೆ.
ನ.24 ರಂದು ಶಾಲೆಯಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ ಘಟನೆ ಸಂಭವಿಸಿದೆ. ಹಲ್ಲೆಗೊಳಗಾದ ಮಗು ಮನೆಗೆ ಹಿಂದಿರುಗಿ ಪೋಷಕರಿಗೆ ವಿಚಾರ ತಿಳಿಸಿದ ಬಳಿಕ ಪೋಷಕರು ದೂರು ದಾಖಲಿಸಿದ್ದಾರೆ.
ಜಗಳಕ್ಕೆ ಕಾರಣವೇನು ? ಇಷ್ಟು ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಈ ಕ್ರೂರ ಪ್ರವೃತ್ತಿ ಶುರುವಾಗಿದ್ದು ಹೇಗೆ ಎಂಬುದನ್ನು ತನಿಖೆ ನಡೆಸಲು ಪೊಲೀಸರಿಗೆ ಸಮಿತಿ ಆದೇಶಿಸಿದೆ.