Advertisement

ಶಾಲೆಯಲ್ಲಿ ಕಲಿತ ಮಾಹಿತಿ ಬಳಸಿ ತಂಗಿಯ ರಕ್ಷಣೆ

09:40 AM Oct 14, 2017 | Karthik A |

ನೆಲ್ಯಾಡಿ: ಮನೆಯ ತೋಟದಲ್ಲಿ ತನ್ನ ಸಹೋದರಿಗೆ ವಿಷಯುಕ್ತ ಹಾವು ಕಡಿದಾಗ ತಾನು ಶಾಲೆಯಲ್ಲಿ ಕಲಿತ ಪ್ರಥಮ ಚಿಕಿತ್ಸಾ ವಿಧಾನವನ್ನು ಸಮಯೋಚಿತವಾಗಿ ಅನುಷ್ಠಾನಿಸಿ ರಕ್ತದಲ್ಲಿದ್ದ ವಿಷವನ್ನು ಬಾಯಲ್ಲಿ ಹೀರಿ ಸಹೋದರಿಯನ್ನು ರಕ್ಷಿಸಿದ ಘಟನೆ ಕೊಕ್ಕಡದಲ್ಲಿ ಕಣ್ಣಹಿತ್ತಿಲುವಿನಲ್ಲಿ ಸಂಭವಿಸಿದೆ. ಕಣ್ಣಹಿತ್ತಿಲು ಮನೆ ನಿವಾಸಿ ರಾಜು ಅವರ ಪುತ್ರ ನಿತಿನ್‌ ಕೆ. ಆರ್‌. ಧೈರ್ಯದಿಂದ ಪ್ರಥಮ ಚಿಕಿತ್ಸೆ ನೀಡಿ ಸಹೋದರಿಯನ್ನು ರಕ್ಷಿಸಿದ ಯುವಕ.

Advertisement

ಈತ ನೆಲ್ಯಾಡಿಯ ಸಂತ ಜಾರ್ಜ್‌ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ತನ್ನ ಮನೆಯ ತೋಟದಲ್ಲಿ ತನ್ನ ತಂಗಿ 11ರ ಹರೆಯದ ಶರಣ್ಯಾಳಿಗೆ ವಿಷ ಪೂರಿತ ಹಾವು ಕಡಿದಿತ್ತು. ಅದನ್ನು ಕಂಡ ನಿತಿನ್‌ ತಾನು ಶಾಲೆಯಲ್ಲಿ ಕಲಿತಿದ್ದ ಪ್ರಥಮ ಚಿಕಿತ್ಸಾ ವಿಧಾನವನ್ನು ಇಲ್ಲಿ ಅನುಷ್ಠಾನಿಸಿದ. ಹಾವು ಕಡಿದ ಭಾಗದ ಮೇಲ್ಭಾಗವನ್ನು ಬಟ್ಟೆಯಲ್ಲಿ ಬಲವಾಗಿ ಕಟ್ಟಿ ಹಾವು ಕಡಿದ ಭಾಗದಲ್ಲಿ ರಕ್ತವನ್ನು ತನ್ನ ಬಾಯಲ್ಲಿ ಬಲವಾಗಿ ಹೀರಿ ವಿಷ ಪೂರಿತ ರಕ್ತ ದೇಹದ ವಿವಿಧೆಡೆಗಳಿಗೆ ಪ್ರಸಹರಿಸದಂತೆ ಮುನ್ನೆಚ್ಚರಿಕೆ ವಹಿಸಿದ. 

ಹಾವು ಕಡಿದಾಕ್ಷಣ ನಡೆಸಿದ ಈ ತ್ವರಿತ ಕ್ರಮದಿಂದಾಗಿ ಶರಣ್ಯಾ ಚೇತರಿಸಿ ಬಳಿಕ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ತಂಗಿಯನ್ನು ಸಾವಿನದವಡೆಯಿಃಂದ ಪಾರು ಮಾಡುವ ಮೂಲಕ ನಿತಿನ್‌ ಅಪ್ರತಿಮ ಧೈರ್ಯ ಸಾಹಸ ಪ್ರದರ್ಶಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.

‘ಕಲಿತದ್ದು ನೆರವಿಗೆ ಬಂತು’


ಸಂತಜಾರ್ಜ್‌ ಕಾಲೇಜಿನಲ್ಲಿ ಕಲಿಯುತ್ತಿರುವ ವೇಳೆಯಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ಸಿಕ್ಕಿದ ಮಾಹಿತಿಯು ಈ ಸಂದರ್ಭದಲ್ಲಿ ನೆರವಿಗೆ ಬಂತು. ಸಹೋದರಿಯ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಶಾಲೆಯಲ್ಲಿ ಸಿಕ್ಕಿದ ಮಾಹಿತಿಯಂತೆ ಕಾರ್ಯಪ್ರವೃತ್ತನಾದೆ.  ಈ ಹಿನ್ನೆಲೆಯಲ್ಲಿ ಸಹೋದರಿಯನ್ನು ಅಪಾಯದಿಂದ ಪಾರು ಮಾಡವಲು ಸಾಧ್ಯವಾಯಿತು ಈ ಸಂದರ್ಭದಲ್ಲಿ ತಾನು ಕಲಿಯುತ್ತಿರುವ ಶಾಲೆಯನ್ನು ಹಾಗೂ ಇಂತಹ ಮಾಹಿತಿಗಳನ್ನು ಶಾಲೆಯಲ್ಲಿ ನೀಡುವ ವ್ಯವಸ್ಥೆ ಮಾಡಿದ ಅಧ್ಯಾಪಕರನ್ನು ನೆನೆಸಿಕೊಳ್ಳುತ್ತೇನೆ ಎಂದು ನಿತಿನ್‌ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next