Advertisement

Watch Video: ಮಧ್ಯರಾತ್ರಿ 10 ಕಿ.ಮೀ. ಓಟ…ಈ ಯುವಕನ ಓಟದ ಹಿಂದಿನ ಕಾರಣ ಸ್ಫೂರ್ತಿದಾಯಕ

12:33 PM Mar 21, 2022 | Team Udayavani |

ನವದೆಹಲಿ: ಗುರಿ ಮುಟ್ಟಲೇಬೇಕೆಂಬ ಛಲ, ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಎಷ್ಟು ತೀವ್ರವಾಗಿರಲು ಸಾಧ್ಯ ಎಂಬುದಕ್ಕೆ ವೈರಲ್ ಆಗಿರುವ 19 ವರ್ಷದ ಈ ಯುವಕನ ವಿಡಿಯೋ ಸಾಕ್ಷಿಯಾಗಿದೆ. ಈ ಸ್ಫೂರ್ತಿದಾಯಕ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರ ಮನಗೆದ್ದಿದೆ.

Advertisement

ಮಧ್ಯರಾತ್ರಿ ನೋಯ್ಡಾದ ಬೀದಿಯಲ್ಲಿ ಈ ಹುಡುಗ ಓಡುವುದರಲ್ಲಿ ವಿಶೇಷತೆ ಏನಿದೆ..ಎಂಬುದನ್ನು ನೀವು ಕೇಳಿದರೆ ನಿಜಕ್ಕೂ ಅಚ್ಚರಿಗೊಳಗಾಗುತ್ತೀರಿ. ಹೌದು ಈ ಹುಡುಗನ ಕಥೆ ಸ್ಫೂರ್ತಿದಾಯಕವಾಗಿದೆ.

ಚಿತ್ರ ನಿರ್ಮಾಪಕ, ಲೇಖಕ ವಿನೋದ್ ಕಪ್ರಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಧ್ಯರಾತ್ರಿ ನೋಯ್ಡಾದ ರಸ್ತೆಯಲ್ಲಿ ಓಡುತ್ತಿದ್ದ 19 ವರ್ಷದ ಯುವಕ ಪ್ರದೀಪ್ ಮೆಹ್ರಾನನ್ನು ಕಾಣುತ್ತಲೇ ಕಪ್ರಿ ಅವರು ಮಾತಿಗೆಳೆದಿದ್ದರು.

ಈ ಯುವಕನಿಗೆ ತುರ್ತಾಗಿ ಹೋಗಬೇಕಾಗಿದ್ದು, ಅದಕ್ಕಾಗಿ ಈತ ಓಡುತ್ತಿದ್ದಾನೆ ಎಂದು ತಿಳಿದು, ತನ್ನ ಕಾರಿನಲ್ಲಿ ಕುಳಿತುಕೋ ನಿನ್ನನ್ನು ಡ್ರಾಪ್ ಮಾಡುತ್ತೇನೆ ಎಂದು ಪ್ರದೀಪ್ ಗೆ ಆಹ್ವಾನ ನೀಡಿದಾಗ, ಆತ ನಯವಾಗಿ ತಿರಸ್ಕರಿಸಿದ್ದಾನೆ.

ಒಂದೇ ಸಮನವಾಗಿ ಪ್ರದೀಪ್ ಓಡುತ್ತಿದ್ದರೆ, ವಿನೋದ್ ಅವರು ಕೂಡಾ ತಮ್ಮ ಕಾರನ್ನು ಚಲಾಯಿಸುತ್ತಲೇ ಕುತೂಹಲದಿಂದ ಆತನ ಬಗ್ಗೆ ವಿಚಾರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Advertisement

ಪ್ರತಿದಿನ 10 ಕಿಲೋ ಮೀಟರ್ ಓಡುತ್ತೇನೆ:

ಮೆಕ್ ಡೊನಾಲ್ಡ್ ನಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿದ ನಂತರ ನಾನು ಪ್ರತಿದಿನ 10 ಕಿಲೋ ಮೀಟರ್ ಓಡುತ್ತಾ ಮನೆ ತಲುಪುವುದಾಗಿ ಮೆಹ್ತಾ ತಿಳಿಸಿದ್ದಾನೆ. ಏತನ್ಮಧ್ಯೆ ವಿನೋದ್ ಅವರು ಕಾರಿನಲ್ಲಿ ಲಿಫ್ಟ್ ಕೊಡುವುದಾಗಿ ಪದೇ, ಪದೇ ಹೇಳಿದರು ಕೂಡಾ ಆತ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದ, ಅಷ್ಟೇ ಅಲ್ಲ ತಾನು ಸೇನೆಗೆ ಸೇರಬೇಕು, ಅದಕ್ಕಾಗಿ ಪ್ರತಿದಿನ ಓಟದ ಅಭ್ಯಾಸ ಮಾಡುತ್ತಿರುವುದಾಗಿ ತನ್ನ ಓಟದ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದಾನೆ.

ಹೀಗೆ ವಿನೋದ್ ಮತ್ತು ಮೆಹ್ತಾ ನಡುವಿನ ಮಾತುಕತೆ ಮುಂದುವರಿದಿದ್ದು, ತಾನು ಉತ್ತರಾಖಂಡ್ ನಿವಾಸಿ ಎಂಬುದಾಗಿ ತಿಳಿಸಿದ್ದಾನೆ. ತನಗೆ ಬೆಳಗ್ಗೆ ಹೊತ್ತು ಓಟದ ಅಭ್ಯಾಸ ಮಾಡಲು ಸಮಯ ಸಿಗುವುದಿಲ್ಲ. ಪ್ರತಿದಿನ ಬೆಳಗ್ಗೆ 8ಗಂಟೆ ಎದ್ದು, ಕೆಲಸಕ್ಕೆ ಹೋಗುವ ಮೊದಲು ಅಡುಗೆ ಮಾಡುತ್ತೇನೆ. ತಾನು ನನ್ನ ಸಹೋದರ ಜತೆ ವಾಸವಾಗಿದ್ದು, ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಮೆಹ್ತಾ ತಿಳಿಸಿದಾಗ, ನನ್ನ ಮನೆಗೆ ಬಾ ಊಟ ಮಾಡಿ ಹೋಗಬಹುದು ಎಂಬ ವಿನೋದ್ ಅವರ ಆಹ್ವಾನವನ್ನೂ ತಿರಸ್ಕರಿಸಿದಾಗ..ಬೆಸ್ಟ್ ಆಫ್ ಲಕ್ ಅಂತ ಶುಭಹಾರೈಸಿ, ಯುವಕನನ್ನು ಅಪ್ಪಟ ಚಿನ್ನ ಎಂಬುದಾಗಿ ಟ್ವೀಟ್ ನಲ್ಲಿ ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next