Advertisement

ಪೆರುವಾಜೆ : ಶೌಚಾಲಯಕ್ಕೆಂದು ತೆರಳಿದ ಬಾಲಕ‌ ನಾಪತ್ತೆ

03:01 PM Feb 11, 2020 | keerthan |

ಬೆಳ್ಳಾರೆ: ಮನೆಯ ಶೌಚಾಲಯಕ್ಕೆ ತೆರಳಿದ ಬಾಲಕ ನಾಪತ್ತೆಯಾದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮಂಗಳವಾರ ನಡೆದಿದೆ.

Advertisement

ಬೆಳ್ಳಾರೆ ಸನಿಹದ ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಕುಂಞ ಅವರ ಪುತ್ರ, ಚೆನ್ನಾವರ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ( 11) ನಾಪತ್ತೆಯಾದ ಬಾಲಕ.

ಬೆಳಗ್ಗೆ 7 ಗಂಟೆ ಹೊತ್ತಿಗೆ ತಾಯಿಯ ಬಳಿ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ. ತುಂಬಾ ಹೊತ್ತಾದರೂ ಬಾರದಿರುವ ಕಾರಣ ಮನೆ ಮಂದಿ ಹುಡಕಾಟ ನಡೆಸಿದ್ದಾರೆ. ಆದರೆ ಆತ ಪತ್ತೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next