Advertisement
ಐ.ಡಿ.ಕಾರ್ಡ್‌ನಲ್ಲಿ ಜಾತಿ ವಿವರತಿರುಚ್ಚಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಐ.ಡಿ.ಕಾರ್ಡ್‌ನಲ್ಲಿ ಜಾತಿ ವಿವರ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಕಾರ್ಡ್‌ನಲ್ಲಿ ಇರುವ ಕ್ಯೂ.ಆರ್.ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ವಿದ್ಯಾರ್ಥಿಯ ಜಾತಿ ಮತ್ತು ಉಪ ಜಾತಿಯ ವಿವರ ಲಭ್ಯವಾಗುತ್ತಿದೆ. ಈ ಬಗ್ಗೆ ತಿರುಚ್ಚಿಯ ಸಾಮಾಜಿಕ ಹೋರಾಟಗಾರರು ಆಕ್ಷೇಪ ಮಾಡಿದ್ದಾರೆ. ಇದರ ಜತೆಗೆ ಅದರಲ್ಲಿ ಹೆತ್ತವರ ಫೋನ್ ನಂಬರ್, ರಕ್ತದ ಗುಂಪು ಕೂಡ ನೀಡಲಾಗಿದೆ. ತಿರುವಾಂಕೋಯಿಲ್ನಲ್ಲಿ ವಿದ್ಯಾರ್ಥಿಯ ಐ.ಡಿ.ಕಾರ್ಡ್‌ನಲ್ಲಿರುವ ಕೋಡ್ ಸ್ಕ್ಯಾನ್ ಮಾಡಿದಾಗ ಈ ಅಂಶ ಬಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸರ್ವ ಶಿಕ್ಷಾ ಅಭಿಯಾನ ಹೆಚ್ಚುವರಿ ಯೋಜನಾ ನಿರ್ದೇಶಕ ಎನ್.ವೆಂಕಟೇಶ್ ವಿದ್ಯಾರ್ಥಿಗಳ ಗುರುತಿಗಾಗಿ ಕಾರ್ಡ್ ನೀಡಲಾಗಿದೆ ಎಂದಿದ್ದಾರೆ