Advertisement

ಬಾಲಕನ ಕೊನೇ ಆಸೆ ಸಾಕಾರ

07:00 AM Apr 06, 2018 | |

ಹೈದರಾಬಾದ್‌: ಆ ಕ್ಷಣ ನಿಜಕ್ಕೂ ಕಣ್ಣಾಲಿಗಳು ತುಂಬಿ ಬರುವಂತಿದ್ದವು. ಆರು ವರ್ಷದ ಬಾಲಕ ಇಶಾನ್‌ ಒಂದು ದಿನಕ್ಕಾಗಿ ಹೈದರಾಬಾದ್‌ ನಗರ ಪೊಲೀಸ್‌ ಆಯುಕ್ತನಾಗಿದ್ದ. ಅದು ಆತನ ಕೊನೆಯ ಆಸೆಯಾಗಿದೆ. ಮೇದಕ್‌ ಜಿಲ್ಲೆಯ ದುಡೇಕಲ ಇಶಾನ್‌ ಕಳೆದ ಡಿಸೆಂಬರ್‌ನಿಂದಲೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಆತನ ಕೊನೆಯಾಸೆ ಪೂರೈಸಲು ಹೈದರಾಬಾದ್‌ನ ಎನ್‌ಜಿಒ ನೆರವಾಗಿದೆ. ಅದಕ್ಕೆ ಸಹಕಾರ ನೀಡಿದ್ದು ಹೈದರಾಬಾದ್‌ ಪೊಲೀಸ್‌ ಆಯುಕ್ತ ಮಹೇಶ್‌ ಭಾಗವತ್‌. 

Advertisement

ಒಂದು ದಿನದ ಮಟ್ಟಿಗೆ ಪೊಲೀಸ್‌ ಆಯುಕ್ತನಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಗಚ್ಚಿಬೌಲಿಯಲ್ಲಿರುವ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಆತನಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆತ, ಎಲ್ಲಾ ಕಳ್ಳರನ್ನು ಜೈಲಿಗಟ್ಟುತ್ತೇನೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇನೆ ಎಂದು ಹೇಳಿದ. ಚಟಪಟನೆ ಮಾತನಾಡುವ ಹುಡುಗನನ್ನು ನೋಡಿ ಬೆರಗಾಗುವ ಸರದಿ ಮಾಧ್ಯಮ ಪ್ರತಿನಿಧಿಗಳದ್ದು. 

ನಗರ ಪೊಲೀಸ್‌ ಇಲಾಖೆ ಪರವಾಗಿ 10 ಸಾವಿರ ರೂ.ಗಳ ಚೆಕ್‌ ಅನ್ನು ಆತನಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಭಾವುಕರಾದ ಆಯುಕ್ತ ಮಹೇಶ್‌ ಭಾಗವತ್‌, ಆತ ಶೀಘ್ರ ಗುಣಮುಖನಾಗಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next