Advertisement

ಫುಟ್‌ಬಾಲ್‌ ಸಂಭ್ರಮದ ವೇಳೆ ಬಾಲಕನ ದುರಂತ ಸಾವು

04:53 PM May 24, 2021 | Team Udayavani |

ಮ್ಯಾಡ್ರಿಡ್‌: ನೆಚ್ಚಿನ ತಂಡ ಜಯಿಸಿದ ಬೆನ್ನಲ್ಲೇ ಸಂಭ್ರಮಿಸುತ್ತಿದ್ದ 14 ವರ್ಷದ ಬಾಲಕನೋರ್ವ ಪ್ರಾಣ ಕಳೆದುಕೊಂಡ ಘಟನೆ ಸ್ಪೇನ್‌ನಲ್ಲಿ ನಡೆದಿದೆ. ಅಟ್ಲೆಟಿಕೊ ಮ್ಯಾಡ್ರಿಡ್‌ ಪ್ರತಿಷ್ಠಿತ ಲಾ ಲಿಗಾ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.

Advertisement

ಚಲಿಸುವ ವಾಹನದಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ಸ್‌ ತಂಡ ಗೆಲುವಿನ ಸಂಭ್ರಮವನ್ನು ಆಚರಿಸುತ್ತಿದ್ದ ವೇಳೆ 14 ವರ್ಷದ ಬಾಲಕ ಕುಣಿದಾಡುತ್ತಿದ್ದಾಗ ಗೋಡೆಗೆ ತಲೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮ್ಯಾಡ್ರಿಡ್‌ ನಗರ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದೆ. ಅಟ್ಲೆಟಿಕೊ ಮ್ಯಾಡ್ರಿಡ್‌ 2014ರ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next