Advertisement

ದಿಲ್ಲಿ : ಹೊಸ ವರ್ಷದ ಗುಂಡಿಗೆ ಬಾಲಕ ಬಲಿ, ಇನ್ನೋರ್ವ ಗಂಭೀರ

06:03 AM Jan 01, 2019 | Team Udayavani |

ಹೊಸದಿಲ್ಲಿ : ಈಶಾನ್ಯ ದಿಲ್ಲಿಯ ಉಸ್ಮಾನ್‌ಪುರ ಪ್ರದೇಶದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮೋಲ್ಲಾಸದಲ್ಲಿ ಹಾರಿಸಲಾದ ಗುಂಡಿಗೆ ಎಂಟು ವರ್ಷ ಪ್ರಾಯದ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಿನ್ನೆ ಸೋಮವಾರ ರಾತ್ರಿ 11 ಗಂಟೆಯ ವೇಳೆಗೆ ಈ ದುರ್ಘ‌ಟನೆ ಸಂಭವಿಸಿತು. ಆಸ್ಪತ್ರೆ ಅಧಿಕಾರಿಗಳು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಬಾಲಕನ ಮನೆ ಪಕ್ಕದಲ್ಲೇ ಈ ಘಟನೆ ನಡೆದಿದೆ.

ಇನ್ನೊಂದು ಘಟನೆಯಲ್ಲಿ 12 ವರ್ಷ ಪ್ರಾಯದ ಬಾಲಕನಿಗೆ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಹಾರಿಸಲಾದ ಗುಂಡೇಟು ತಗಲಿ ಆತ ಗಂಭೀರವಾಗಿ ಗಾಯಗೊಂಡಿರುವುದು ತಿಳಿದು ಬಂದಿದೆ.

ಬಾಲಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ದಿಲ್ಲಿಯ ವೆಲ್‌ಕಂ ಪ್ರದೇಶದಲ್ಲಿ ಈ ದುರ್ಘ‌ಟನೆ ನಡೆದಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next