ಮಧ್ಯ ಪ್ರದೇಶ: ಗದ್ದೆ ಬದಿ ಆಡುತ್ತಿದ್ದ 8 ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದು ಸಿಲುಕಿರುವ ಘಟನೆ ಮಧ್ಯ ಪ್ರದೇಶದ ಬೆತುಲ್ ಜಿಲ್ಲೆ ಮಾಂಡವಿ ಗ್ರಾಮದಲ್ಲಿ ಮಂಗಳವಾರ (ಡಿ. 6 ರಂದು) ನಡೆದಿದೆ.
Advertisement
ಮಂಗಳವಾರ ಸಂಜೆ 5 ಗಂಟೆಗೆ ಸುಮಾರಿಗೆ ಗದ್ದೆಯಲ್ಲಿ ಆಡುತ್ತಿದ್ದ ಬಾಲಕ ತನ್ಮಯ್ ದಿಯಾವರ್ ಇತ್ತೀಚೆಗೆಗಷ್ಟೇ ಕೊರೆಯಲಾದ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ವರದಿ ತಿಳಿಸಿದೆ.
ಬಾಲಕ 60 ಆಳದಲ್ಲಿ ಸಿಲುಕಿಗೊಂಡಿದ್ದು, ಆಮ್ಲಜನಕದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಚರಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರತರಾಗಿದ್ದು, ಕೊಳವೆ ಬಾವಿ ಸುತ್ತಲಿನ ಪ್ರದೇಶವನ್ನು ಅಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.