ನ್ಯೂಯಾರ್ಕ್: ಡೋನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಡಳಿತಕ್ಕೆ ಬಂದ ಬಳಿಕ ಅಮೆರಿಕದಲ್ಲಿ ಮುಸ್ಲಿಂ ವಿರೋಧಿ ಅಲೆ ಶುರುವಾಗಿದೆ ಎನ್ನುವ ದೂರು ಕೇಳಿ ಬಂದಿದ್ದವು. ಈ ಬೆನ್ನಲ್ಲೇ ಅಮೆರಿಕದ ಖ್ಯಾತ ಬಾಕ್ಸರ್ ದಿವಂಗತ ಮೊಹಮ್ಮದ್ ಅಲಿ ಪುತ್ರ ಮೊಹಮ್ಮದ್ ಅಲಿ ಜೂನಿಯರ್ ಮತ್ತು ಕುಟುಂಬವನ್ನು ಅಮೆರಿಕದ ಫ್ಲೋರಿಡಾದ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆ ಹಿಡಿದು ವಿಚಿತ್ರವಾಗಿ ನಡೆಸಿಕೊಂಡ ಘಟನೆ ನಡೆದಿದೆ.
ಆಲಿ ಕುಟುಂಬವನ್ನು ಸುಮಾರು 2 ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಿನ್ನ ಧರ್ಮ ಯಾವುದು? ನೀನು ಎಲ್ಲಿಂದ ಬಂದೆ? ನಿನ್ನ ಹೆಸರು ಎಲ್ಲಿಂದ ಬಂತು? ನೀನು ಮುಸ್ಲಿಂ ಧರ್ಮಕ್ಕೆ ಸೇರಿದವನಾ? ಎಂಬಿತ್ಯಾದಿ ಅಸಂಬದ್ಧ ಪ್ರಶ್ನೆ ಕೇಳಿ ವಲಸೆ ಅಧಿಕಾರಿಗಳು ಕಿರಿಕಿರಿ ಮಾಡಿದ್ದಾರೆ ಎಂದು ಮಾಧ್ಯಮ ಗಳು ವರದಿ ಮಾಡಿವೆ.
ಈ ಘಟನೆಯನ್ನು ಮೊಹ ಮ್ಮದ್ ಆಲಿ ಜೂನಿಯರ್ ಪರ ವಕೀಲ ಕ್ರಿಸ್ ಮನ್ಸಿನಿ ಖಂಡಿಸಿದ್ದಾರೆ. ಇತ್ತೀಚೆಗೆ ಮುಸ್ಲಿಂ ಜನಸಂಖ್ಯೆ ಅತೀ ಹೆಚ್ಚು ಹೊಂದಿರುವ ವಿಶ್ವದ 7 ಮುಸ್ಲಿಂ ರಾಷ್ಟ್ರಗಳ ಅಮೆರಿಕದ ಪ್ರಜೆಗಳ ಪೌರತ್ವವನ್ನು ನಿಷೇ
ಧಿಸಲು ಟ್ರಂಪ್ ಮುಂದಾಗಿ ದ್ದರು. ಹೀಗಾಗಿ ಅಮೆರಿಕದಲ್ಲಿ ಮುಸ್ಲಿಂರಿಗೆ ತೀವ್ರ ತೊಂದರೆ ಯಾಗಿದೆ ಎಂದು ದೂರಿದ್ದಾರೆ.