ಇಂಫಾಲ್: ಮಣಿಪುರ ಮೂಲದ ಪ್ರಸಿದ್ದ ಬಾಕ್ಸರ್ ಸರಿತಾ ದೇವಿ ಮತ್ತು ಆಕೆಯ ಪತಿ ತೋಯ್ಬಾ ಸಿಂಗ್ ಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ಸರಿತಾ ದೇವಿ ಪತಿ ತೋಯ್ಬಾ ಸಿಂಗ್ ಈ ಮಾಹಿತಿಯನ್ನು ಸೋಮವಾರ ಮಾಧ್ಯಮಗಳಿಗೆ ತಿಳಿಸಿದ್ದು, ಸರಿತಾ ಮತ್ತು ನನಗೆ ಕೋವಿಡ್ ಪಾಸಿಟಿವ್ ಆಗಿದೆ. ಇದುವರೆಗೆ ಯಾವುದೇ ಕೋವಿಡ್ ಸಂಬಂಧಿ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ನಾವಿಬ್ಬರು ಕೋವಿಡ್ ಸೆಂಟರ್ ಗೆ ಹೋಗುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.
ಸರಿತಾ ದೇವಿಗೆ ಕೋವಿಡ್ ಸೋಂಕು ದೃಢವಾದ ಕಾರಣ ಭಾರತದ ಎರಡನೇ ಬಾಕ್ಸರ್ ಗೆ ಸೋಂಕು ದೃಢವಾದಂತಾಗಿದೆ. ಈ ಹಿಂದೆ ದಿಗ್ಗಜ ಬಾಕ್ಸರ್ ಡಿಂಗ್ಕೋ ಸಿಂಗ್ ಗೆ ಸೋಂಕು ತಾಗಿರುವುದು ಪತ್ತೆಯಾಗಿತ್ತು. ಡಿಂಗ್ಕೋ ಸಿಂಗ್ ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿದ್ದಾರೆ.
ಇದನ್ನೂ ಓದಿ: ಮಿಂಚಿದ ಕ್ರಾವ್ಲಿ, ಅಬ್ಬಾಸ್ ಮತ್ತು ಮಳೆ: ನೀರಸ ಡ್ರಾನಲ್ಲಿ ಅಂತ್ಯವಾದ ದ್ವಿತೀಯ ಟೆಸ್ಟ್
2006ರ ಆವೃತ್ತಿಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಸರಿತಾ ದೇವಿ, ನಂತರ ಎರಡು ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಬೆಳ್ಳಿ ಪದಕಕ್ಕೆ ಸರಿತಾ ಕೊರಳೊಡ್ಡಿದ್ದರು.
ಕೋವಿಡ್ ಪಾಸಿಟಿವ್ ಆಗಿದ್ದ ಆರು ರಾಷ್ಟ್ರೀಯ ಹಾಕಿ ಆಟಗಾರರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.