Advertisement

ಬಾಕ್ಸಿಂಗ್‌ ಒಕ್ಕೂಟ ವಿರುದ್ಧ ಸಿಡಿದ ಬಾಕ್ಸರ್‌ ನಿಖತ್‌ ಜರೀನ್‌

09:55 PM Oct 17, 2019 | Sriram |

ನವದೆಹಲಿ: ಭಾರತೀಯ ಮಹಿಳಾ ಬಾಕ್ಸರ್‌ ನಿಖತ್‌ ಜರೀನ್‌ ಭಾರತೀಯ ಬಾಕ್ಸಿಂಗ್‌ ಒಕ್ಕೂಟ (ಬಿಎಫ್ಐ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಮೇರಿ ಕೋಮ್‌ಗಾಗಿ ತನ್ನನ್ನು ಆಯ್ಕೆ ಟ್ರೆಯಲ್ಸ್‌ ಕೂಡ ನಡೆಸದೆ ಮೂಲೆಗುಂಪು ಮಾಡಲಾಗುತ್ತಿದೆ. ಇದರಿಂದ ತನ್ನ ಮುಂದಿನ ಕ್ರೀಡಾ ಭವಿಷ್ಯಕ್ಕೆ ಅತಂತ್ರ ಪರಿಸ್ಥಿತಿ ಎದುರಾಗಿದೆ ಎನ್ನುವ ಆತಂಕವನ್ನು ಕ್ರೀಡಾ ಸಚಿವ ಕಿರಣ್‌ ರಿಜಿಜುಗೆ ಬರೆದ ಪತ್ರದಲ್ಲಿ ನಿಖತ್‌ ಜರೀನ್‌ ತಿಳಿಸಿದ್ದಾರೆ. ಫೆ.3ರಿಂದ ಟೊಕೊÂದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ ಕೂಟಕ್ಕೆ 51 ಕೆ.ಜಿ ವಿಭಾಗದಲ್ಲಿ ಖ್ಯಾತ ಬಾಕ್ಸರ್‌ ಮೇರಿ ಕೋಮ್‌ಗೆ ನೇರ ಪ್ರವೇಶ ನೀಡಲಾಗಿದೆ. ಕಳೆದ ವಿಶ್ವ ಬಾಕ್ಸಿಂಗ್‌ ಕೂಟದಲ್ಲೂ ಇದೇ ವಿಭಾಗದಿಂದ ಮೇರಿ ಕೋಮ್‌ಗೆ ನೇರ ಪ್ರವೇಶ ಕೊಡಲಾಗಿತ್ತು. ಹೀಗಾಗಿ 51 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿದ್ದ ನಿಖತ್‌ ಜರೀನ್‌ ಅವಕಾಶ ಕಳೆದುಕೊಂಡಿದ್ದರು.

ಇದೀಗ ನಿಖತ್‌ ಸಿಡಿದಿದ್ದಾರೆ. ಬಿಎಫ್ಐ ಅನ್ನು ಹಲವು ಸಲ ಸಂಪರ್ಕಿಸಿ ಆಯ್ಕೆ ಟ್ರಯಲ್ಸ್‌ ನೀಡುವಂತೆ ಹೇಳಿದ್ದೆ. ಆದರೆ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಕಡೆಯ ಕ್ಷಣದಲ್ಲಿ ನಿಯಮ ಬದಲಿಸಿ ಮೇರಿ ಕೋಮ್‌ಗೆ ಅವಕಾಶ ನೀಡಲಾಗಿದೆ. ಮೇರಿ ಕೋಮ್‌ ಜತೆಗೆ ಸೆಣಸಲು ನನಗೊಂದು ಅವಕಾಶ ಕೊಡಿ, ಸಾಮರ್ಥ್ಯ ಪ್ರದರ್ಶಿಸುತ್ತೇನೆ. ನನಗೆ ಅನ್ಯಾಯವಾಗಿದೆ. ನ್ಯಾಯ ಒದಗಿಸಿ ಎಂದು ರಿಜಿಜುಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next