Advertisement
1. ಕೆಲ ದಿನಗಳ ಹಿಂದಷ್ಟೇ ರಷ್ಯಾದಲ್ಲಿ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದವರು ಭಾರತದ ಮಂಜು ರಾಣಿ.2. 48 ಕೆ.ಜಿ. ವಿಭಾಗದ ಅಂತಿಮ ಸುತ್ತಿನಲ್ಲಿ ಮಂಜು, ರಷ್ಯಾದ ಏಕ್ತರಿನಾ ಪಾಲ್ಟಸೆವ ಅವರನ್ನು ಎದುರಿಸಿದರು.
3. ಹರಿಯಾಣದ ಬಡ ಕುಟುಂಬದಿಂದ ಬಂದ ಮಂಜು ರಾಣಿ ಹುಟ್ಟಿದ್ದು 1996 ಅಕ್ಟೋಬರ್ 20ರಂದು.
4. ಮೊದಲು ಕಬಡ್ಡಿ ಆಟದಲ್ಲಿ ತೊಡಗಿಕೊಂಡಿದ್ದ ಮಂಜು, ನಂತರದ ದಿನಗಳಲ್ಲಿ ಕೋಚ್ ಸಹಾಬ್ ಸಿಂಗ್ ಮಾರ್ಗದರ್ಶನದಿಂದ ಬಾಕ್ಸಿಂಗ್‌ನತ್ತ ಹೊರಳಿದರು.
5. ಕೋಚ್ ತಮ್ಮ ಸ್ವಂತ ಹಣದಿಂದ ಮಂಜು ಮತ್ತು ಇತರ ಬಾಕ್ಸರ್‌ಗಳಿಗೆ ತರಬೇತಿ ನೀಡಿದರು.
6. ತನ್ನ ಶಿಷ್ಯರನ್ನು ಮುಂದಿನ ಬಾಕ್ಸಿಂಗ್ ಪಟುಗಳಾದ ಮೇರಿ ಕೋಮ್, ವಿಜೇಂದರ್ ಸಿಂಗ್ ಮಾಡುತ್ತೇನೆ ಅಂತ ಸಹಾಬ್ ಸಿಂಗ್ ಹೇಳಿದ್ದಾಗ, ಬಹಳ ಜನ ನಕ್ಕುಬಿಟ್ಟಿದ್ದರಂತೆ.
7. 19 ವರ್ಷದ ಮಂಜುಗೆ ಇದು ಚೊಚ್ಚಲ ಪಂದ್ಯವಾಗಿತ್ತು.
8. ಬಾಕ್ಸರ್ ಮೇರಿ ಕೋಮ್‌ರ ಮಹಾನ್ ಅಭಿಮಾನಿಯಾಗಿರೋ ಈಕೆ, ಮೇರಿ ಕೋಮ್ ಚೊಚ್ಚಲ ಪಂದ್ಯದಲ್ಲಿ ಮಾಡಿದ್ದ ಸಾಧನೆಯನ್ನು ತಾವೂ ಮಾಡಿದ್ದಾರೆ.
9. ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಮೇರಿ ಕೋಮ್‌ರೊಟ್ಟಿಗೆ ರಷ್ಯಾಕ್ಕೆ ಪಯಣಿಸಿದ್ದ ಮಂಜುರಾಣಿ, ಅವರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಷ್ಟೇ ಅಲ್ಲ, ಮೇರಿಯಿಂದ ಬಾಕ್ಸಿಂಗ್‌ನ ಕೆಲವು ಪಾಠಗಳನ್ನೂ ಕಲಿತಿದ್ದಾರೆ.
10. 2024ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಮಂಜುರಾಣಿಯ ಗುರಿಯಂತೆ.