Advertisement

Bowling; ಆ್ಯಂಡರ್ಸನ್‌ ಯಶಸ್ಸಿಗೆ ಜಹೀರ್‌ ಖಾನ್‌ ಕೂಡ ಕಾರಣ!

11:48 PM Feb 28, 2024 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರ ವಿಕೆಟ್‌ಗಳತ್ತ ದಾಪುಗಾಲನ್ನಿಡುತ್ತಿರುವ ಜೇಮ್ಸ್‌ ಆ್ಯಂಡರ್ಸನ್‌ ಸಮಕಾಲೀನ ಕ್ರಿಕೆಟಿನ ಅತ್ಯಂತ ಹಿರಿಯ ಬೌಲರ್‌. 41ನೇ ವಯಸ್ಸಿನಲ್ಲೂ ಇಂಗ್ಲೆಂಡ್‌ ಬೌಲಿಂಗ್‌ ಆಕ್ರಮಣದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೆಸ್ಟ್‌ನಲ್ಲಿ 700 ವಿಕೆಟ್‌ ಕ್ಲಬ್‌ಗ ಸೇರ್ಪಡೆಗೊಳ್ಳಲು ಇವರಿಗೆ ಬೇಕಿರುವುದು ಇನ್ನೆರಡೇ ವಿಕೆಟ್‌. ಆಗ “ಆ್ಯಂಡಿ’ ಈ ಎತ್ತರ ತಲುಪಿದ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಬಹುಶಃ ಧರ್ಮಶಾಲಾ ಪಂದ್ಯದಲ್ಲಿ ಇದಕ್ಕೆ ಕಾಲ ಕೂಡಿಬರಬಹುದು.

Advertisement

ಈ ಸಂದರ್ಭದಲ್ಲಿ ತಮ್ಮ ಬೌಲಿಂಗ್‌ ಯಶಸ್ಸಿನ ಬಗ್ಗೆ ಹಿನ್ನೋಟ ಹರಿಸಿದ ಆ್ಯಂಡರ್ಸನ್‌, ಭಾರತದ ಮಾಜಿ ವೇಗಿ ಜಹೀರ್‌ ಖಾನ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ಜಹೀರ್‌ ಅವರ ಕೆಲವು ಬೌಲಿಂಗ್‌ ವಿಧಾನವನ್ನು ತಾನು ಅಳವಡಿಸಿಕೊಂಡಿದ್ದಾಗಿ ಹೇಳಿದ್ದಾರೆ.

“ನಾನು ಜಹೀರ್‌ ಖಾನ್‌ ಅವರ ಬೌಲಿಂಗನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಜಹೀರ್‌ ಅವರ ಕೆಲವು ಬೌಲಿಂಗ್‌ ವಿಧಾನವನ್ನು ಅಳವಡಿಸಿಕೊಂಡೆ. ಮುಖ್ಯವಾಗಿ ರಿವರ್ಸ್‌ ಸ್ವಿಂಗ್‌. ಅವರು ಬೌಲಿಂಗ್‌ ರನ್‌ಅಪ್‌ನತ್ತ ಓಡಿ ಬರುತ್ತಿದ್ದಾಗ ಚೆಂಡನ್ನು ಹೇಗೆ ಕೈ ಯಲ್ಲಿ ಹಿಡಿದಿಟ್ಟು ಕೊಳ್ಳುತ್ತಿದ್ದರು ಎಂಬುದು ನನ್ನ ಪಾಲಿಗೆ ಮುಖ್ಯ ವಾ ಗಿತ್ತು. ಜಹೀರ್‌ ಜತೆ ಆಡುವ, ಅವರ ಕೆಲವು ಎಸೆತಗಳನ್ನು ಎದು ರಿ ಸುವ ಅವಕಾಶವೂ ನನಗೆ ಸಿಕ್ಕಿತ್ತು’ ಎಂಬುದಾಗಿ ಆ್ಯಂಡರ್ಸನ್‌ ಹೇಳಿದರು. ಎಡಗೈ ವೇಗಿ ಜಹೀರ್‌ ಖಾನ್‌ 2014ರಲ್ಲಿ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು.

ಬುಮ್ರಾ ಗುಣಗಾನ
ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನೂ ಆ್ಯಂಡರ್ಸನ್‌ ಪ್ರಶಂಸಿಸಿದರು. “ಬುಮ್ರಾ ಓರ್ವ ವಿಶ್ವ ದರ್ಜೆಯ ಬೌಲರ್‌. ಅವರ ಯಾರ್ಕರ್‌, ರಿವರ್ಸ್‌ ಸ್ವಿಂಗ್‌ ಗುಣಮಟ್ಟ ಸಾಟಿಯಿಲ್ಲದ್ದು. ಓಲೀ ಪೋಪ್‌ ಅವರನ್ನು ಬೌಲ್ಡ್‌ ಮಾಡಿದ ಆ ಯಾರ್ಕರ್‌ ಎಸೆತವೊಂದೇ ಸಾಕು, ಬುಮ್ರಾ ಅವರ ಬೌಲಿಂಗ್‌ ಯಾವ ಮಟ್ಟದಲ್ಲಿದೆ ಎಂದು ತಿಳಿಯುತ್ತದೆ. ಹಾಗೆಯೇ ಅವರ ರಿವರ್ಸ್‌ ಸ್ವಿಂಗ್‌ ಎಸೆತಗಳನ್ನು ಎದುರಿಸುವುದು ಬ್ಯಾಟರ್‌ ಗಳಿಗೆ ಭಾರೀ ಸವಾಲು. ಭಾರತದಲ್ಲಿ ರಿವರ್ಸ್‌ ಸ್ವಿಂಗ್‌ ಬಹಳ ಪರಿಣಾಮ ಬೀರುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next