Advertisement

ಐಸಿಸಿ ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ : ಆಫ್ ಸ್ಪಿನ್ನರ್ ಮಿರಾಜ್‌ ನಂ.2

12:24 AM May 27, 2021 | Team Udayavani |

ದುಬಾೖ : ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹಿದಿ ಹಸನ್‌ ಮಿರಾಜ್‌ ನೂತನ ಐಸಿಸಿ ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಅತ್ಯುತ್ತಮ ರ್‍ಯಾಂಕಿಂಗ್‌ ಆಗಿದೆ. ಜತೆಗೆ ನಂ.2 ಹಾಗೂ ಇದಕ್ಕೂ ಉತ್ತಮ ರ್‍ಯಾಂಕಿಂಗ್‌ ಅಲಂಕರಿಸಿದ ಬಾಂಗ್ಲಾದ ಕೇವಲ 3ನೇ ಬೌಲರ್‌ ಆಗಿದ್ದಾರೆ.

Advertisement

2009ರಲ್ಲಿ ಶಕಿಬ್‌ ಅಲ್‌ ಹಸನ್‌ ನಂ.1 ಸ್ಥಾನ ಅಲಂಕರಿಸಿದ್ದರು. 2010ರಲ್ಲಿ ಅಬ್ದುರ್‌ ರಜಾಕ್‌ ದ್ವಿತೀಯ ಸ್ಥಾನಕ್ಕೆ ಏರಿದ್ದರು. ಸದ್ಯ ಶಕಿಬ್‌ ಆಲ್‌ರೌಂಡರ್‌ ಯಾದಿಯ ಅಗ್ರಸ್ಥಾನದಲ್ಲಿ ಮುಂದು ವರಿದಿದ್ದಾರೆ.

ಪ್ರಸಕ್ತ ಸಾಗುತ್ತಿರುವ ಶ್ರೀಲಂಕಾ ಎದುರಿನ ಏಕದಿನ ಸರಣಿಯ ಮೊದ ಲೆರಡು ಪಂದ್ಯಗಳಲ್ಲಿ ಮೆಹಿದಿ ಹಸನ್‌ ಮಿರಾಜ್‌ ಉತ್ತಮ ಬೌಲಿಂಗ್‌ ನಿರ್ವಹಣೆ ತೋರಿದ್ದರು. ಮೊದಲ ಪಂದ್ಯದಲ್ಲಿ 30ಕ್ಕೆ 4, ಎರಡನೇ ಪಂದ್ಯದಲ್ಲಿ 28ಕ್ಕೆ 3 ವಿಕೆಟ್‌ ಕಿತ್ತ ಸಾಧನೆ ಇವರದಾಗಿತ್ತು.

ಬಾಂಗ್ಲಾದ ಮತ್ತೋರ್ವ ಬೌಲರ್‌ ಮುಸ್ತಫಿಜುರ್‌ ರೆಹಮಾನ್‌ ಮರಳಿ ಟಾಪ್‌-10 ಯಾದಿಯಲ್ಲಿ ಕಾಣಿಸಿ ಕೊಂಡಿದ್ದಾರೆ (9).
ನ್ಯೂಜಿಲ್ಯಾಂಡ್‌ ವೇಗಿ ಟ್ರೆಂಟ್‌ ಬೌಲ್ಟ್ ಅಗ್ರಸ್ಥಾನದಲ್ಲಿ ಮುಂದುವರಿದರೆ, ಇಂಗ್ಲೆಂಡ್‌ ಎದುರಿನ ಏಕದಿನ ಸರಣಿ ಯಿಂದ ಹೊರಗುಳಿದಿದ್ದ ಜಸ್‌ಪ್ರೀತ್‌ ಬುಮ್ರಾ 5ನೇ ಸ್ಥಾನದಲ್ಲೇ ಉಳಿದಿದ್ದಾರೆ.

ಇದನ್ನೂ ಓದಿ :ಒಪ್ಪಂದದ ಪ್ರಕಾರವೇ ವನಿತಾ ಕ್ರಿಕೆಟಿಗರಿಗೆ ವೇತನ ನೀಡಲಾಗಿದೆ: ಬಿಸಿಸಿಐ

Advertisement

14ಕ್ಕೆ ಏರಿದ ರಹೀಂ
ಲಂಕಾ ಎದುರಿನ ಎರಡೂ ಪಂದ್ಯಗಳಲ್ಲಿ “ಮ್ಯಾನ್‌ ಆಫ್ ದ ಮ್ಯಾಚ್‌’ ಪ್ರಶಸ್ತಿಗೆ ಭಾಜನರಾದ ಮುಶ್ಫಿಕರ್‌ ರಹೀಂ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 14ನೇ ಸ್ಥಾನಕ್ಕೆ ಬಂದಿದ್ದಾರೆ.

ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ 2ನೇ ಹಾಗೂ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಗ್ರಸ್ಥಾನ ದಲ್ಲಿರುವವರು ಪಾಕಿಸ್ಥಾನ ತಂಡದ ನಾಯಕ ಬಾಬರ್‌ ಆಜಂ.

Advertisement

Udayavani is now on Telegram. Click here to join our channel and stay updated with the latest news.

Next