Advertisement

ಬೌಲರ್‌ಗಳಿಂದ ಗೆದ್ದೆವು: ಗ್ಲೆನ್‌ ಮ್ಯಾಕ್ಸ್‌ವೆಲ್‌ 

03:12 PM Apr 12, 2017 | Team Udayavani |

ಇಂದೋರ್‌: ಆರ್‌ಸಿಬಿ ವಿರುದ್ಧದ ಈ ಜಯಕ್ಕೆ ಬೌಲರ್‌ಗಳೇ ಕಾರಣ ಎಂದವರು ಪಂಜಾಬ್‌ ಕಪ್ತಾನ, ಕಾಂಗರೂ ನಾಡಿನ ಮತ್ತೂಬ್ಬ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್‌.

Advertisement

“ನಮ್ಮ ಪಾಲಿಗೆ ಈ ಐಪಿಎಲ್‌ ಒಂದು ಅಮೋಘ ಆರಂಭ. ಇದೊಂದು ವಿಶೇಷ ಅನುಭವ. ಬೌಲರ್‌ಗಳ ನಿಯಂತ್ರಿತ ಪ್ರದರ್ಶನದಿಂದ ಗೆಲುವು ಒಲಿದು ಬಂತು. ಪವರ್‌ ಪ್ಲೇ ಅವಧಿಯಲ್ಲಿ ಬರೀ 23 ರನ್‌ ಬಿಟ್ಟುಕೊಟ್ಟದ್ದು ಅಮೋಘ ಸಾಧನೆಯೇ ಸರಿ…’ ಎಂದು ಮ್ಯಾಕ್ಸ್‌ವೆಲ್‌ ಹೇಳಿದರು.

“ಈ ಪಿಚ್‌ನ ಸಂಪೂರ್ಣ ಲಾಭವನ್ನು ಪಡೆಯುವಲ್ಲಿ ನಮ್ಮ ಬೌಲರ್‌ಗಳು ಯಶ್ವಿ‌ಯಾಗಿದ್ದಾರೆ. ಅವರಿಂದ ಇದಕ್ಕಿಂತ ಹೆಚ್ಚೇನನ್ನೂ ಸಾಧಿಸುವಂತೆ ನಾನು ಅವರಲ್ಲಿ ಹೇಳುತ್ತಿಲ್ಲ…’ ಎಂದರು.

ಪಂಜಾಬ್‌ ತನ್ನ ಮೊದಲ ಪಂದ್ಯದಲ್ಲಿ ಪುಣೆ ವಿರುದ್ಧ 6 ವಿಕೆಟ್‌ ಜಯ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next