Advertisement

ಬೂತ್‌ಮಟ್ಟದ ಮತಗಳ ಎಣಿಕೆ: ಪಿಐಎಲ್‌ ಸಲ್ಲಿಕೆ

06:00 AM May 23, 2018 | |

ಬೆಂಗಳೂರು: ಚುನಾವಣಾ ಫ‌ಲಿತಾಂಶ ಪ್ರಕಟಿಸುವಾಗ ಅಭ್ಯರ್ಥಿಗಳು ಬೂತ್‌ ಮಟ್ಟದಲ್ಲಿ ಪಡೆದಿರುವ ಮತಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಪ್ರಕಟಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿವರಾಮ ಗೋಪಾಲಕೃಷ್ಣ ಗಾಂವ್ಕರ್‌ ಎಂಬುವರು ಸಲ್ಲಿಸಿದ್ದ ಪಿಐಎಲ್‌ನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ಎ.ಎಸ್‌ ಬೋಪಣ್ಣ ಹಾಗೂ ನ್ಯಾ.ಆರ್‌.ದೇವದಾಸ್‌ ಅವರಿದ್ದ ರಜಾಕಾಲದ ವಿಭಾಗೀಯ ಪೀಠ, ಪ್ರತಿವಾದಿಗಳಾದ
ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ, ಕೇಂದ್ರ ಕಾನೂನು ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ
ಮುಂದೂಡಿತು. ಎವಿಎಂ ಮತ ಎಣಿಕೆ ಮಾಡಿದ ಬಳಿಕ ಆಯೋಗ, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಆಯಾ ಬೂತ್‌ಮಟ್ಟದಲ್ಲಿ ಪಡೆದ ಮತಗಳ ಸಂಖ್ಯೆಯನ್ನು ಪ್ರಕಟಗೊಳಿಸಲಾಗುತ್ತಿದೆ. ಇದರಿಂದಾಗಿ ಕಡಿಮೆ ಮತ ಪಡೆದಿರುವ ಬೂತ್‌ನ ಪ್ರದೇಶವನ್ನು ಆಯ್ಕೆಯಾಗಿರುವ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕಡೆಗಣಿಸಬಹುದು. ಹೀಗಾಗಿ, ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಾಗಿ 100 ಇವಿಎಂ ಯಂತ್ರಗಳಲ್ಲಿ ದಾಖಲಾದ ಮತಗಳ ಸಂಖ್ಯೆಯನ್ನು ಒಟ್ಟಾಗಿ ಪ್ರಕಟಿಸಬೇಕು ಎಂದು ಕೇಂದ್ರ ಕಾನೂನು ಆಯೋಗ ಮಾಡಿದ್ದ ಶಿಫಾರಸ್ಸನ್ನು ಆಯೋಗ ಜಾರಿಗೊಳಿಸಬೇಕು. ಮುಂಬರುವ ಲೋಕಸಭೆ ಇನ್ನಿತರ ಚುನಾವಣೆಗಳಲ್ಲಿ ಬೂತ್‌ಮಟ್ಟದ ಮತಗಳನ್ನು ಪ್ರತ್ಯೇಕವಾಗಿ ಪ್ರಕಟಿಸದಂತೆ ನಿರ್ದೇಶಿಸಬೇಕು ಎಂದು ಅವರು ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next