ನವದೆಹಲಿ: ವೇಗವಾಗಿ ಬೆಳೆಯುತ್ತಿರುವ ಆಡಿಯೋ ಸ್ಮಾರ್ಟ್ ವಾಚ್ ಭಾರತೀಯ ಬ್ರಾಂಡ್ ಬೌಲ್ಟ್ Z40 ಸರಣಿಯ ಟಿಡಬ್ಲೂಎಸ್ ಒಂದು ಮಿಲಿಯನ್ (ಹತ್ತು ಲಕ್ಷ) ಯೂನಿಟ್ ಗಳನ್ನು ಮಾರಾಟ ಮಾಡುವ ಮೂಲಕ ಜಗತ್ತಿನ ಬೆಸ್ಟ್ ಸೆಲ್ಲಿಂಗ್ ಟಿಡಬ್ಲೂಎಸ್ ಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿದೆ.
ಬೌಲ್ಟ್ ನ Z40 ಟಿಡಬ್ಲೂಎಸ್ ಮಾದರಿ 10 ಲಕ್ಷ ಮಾರಾಟವಾಗಿದ್ದು, ಇ-ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಗ್ರಾಹಕರಿಂದ 1,83,028 ರೇಟಿಂಗ್ಸ್ ಮತ್ತು 27,968 ವಿಮರ್ಶೆ ಪಡೆಯುವುದರೊಂದಿಗೆ 5ಕ್ಕೆ 4.1 ರೇಟಿಂಗ್ ಪಡೆದುಕೊಂಡಿದೆ. ಕೌಂಟರ್ ಪಾಯಿಂಟ್ ರೀಸರ್ಚ್ ಸಮೀಕ್ಷೆಯಲ್ಲಿ ಜಗತ್ತಿನ ಬೆಸ್ಟ್ ಸೆಲ್ಲಿಂಗ್ ಇಯರ್ ಬಡ್ಗಳಲ್ಲೊಂದು ಎಂದು ಗುರುತಿಸಲ್ಪಟ್ಟಿದೆ.
ಈ ಕುರಿತು ಬೌಲ್ಟ್ ಸಹ ಸಂಸ್ಥಾಪಕ ವರುಣ್ ಗುಪ್ತ ಮಾತನಾಡಿ, Z40 ಸರಣಿಯ ವೈರ್ ಲೆಸ್ ಇಯರ್ಬಡ್ ಲಾಂಚ್ ಮಾಡಿದಾಗ ಇದು ಯಶಸ್ಸು ಕಾಣುವ ವಿಶ್ವಾಸವಿತ್ತು. ಇದರ ಆಡಿಯೋ ಅನುಭವ, ಕೈಗೆಟುಕುವ ದರ (1399 ರೂ.) ಗ್ರಾಹಕರನ್ನು ಆಕರ್ಷಿಸಿದೆ ಎನ್ನುತ್ತಾರೆ.
ಕೌಂಟರ್ ಪಾರ್ಟ್ ರೀಸರ್ಚ್ ನ ಹಿರಿಯ ವಿಶ್ಲೇಷಕ ಅನ್ಶಿಕಾ ಜೈನ್, ಬೌಲ್ಟ್ Z40 ಟಾಪ್ 10 ಬೆಸ್ಟ್ ಸೆಲ್ಲಿಂಗ್ ಟಿಡಬ್ಲೂಎಸ್ ಬಡ್ಸ್ ಅಗಿದೆ. ಇದು 2 ಸಾವಿರ ರೂ. ಒಳಗಿನ ಬಡ್ ಗಳಲ್ಲಿ ವಿನ್ಯಾಸ, ಗುಣಮಟ್ಟ, ಆರಾಮದಾಯಕವಾಗಿದೆ ಎನ್ನುತ್ತಾರೆ. ಫ್ಲಿಪ್ ಕಾರ್ಟ್ ಎಲೆಕ್ಟ್ರಾನಿಕ್ಸ್ ವಿಭಾಗದ ಉಪಾಧ್ಯಕ್ಷ ಜಗಜಿತ್ ಹರೋಡೆ, ಫ್ಲಿಪ್ ಕಾರ್ಟ್ ನಲ್ಲಿ ಅತ್ಯಂತ ಯಶಸ್ವಿ ಮಾರಾಟವಾದ ಟಿಡಬ್ಲೂಎಸ್ Z40 ಆಗಿದೆ ಎಂದರು.
ಇದೇ ಉತ್ಸಾಹದಲ್ಲಿ ಬೌಲ್ಟ್ Z40 Ultra ಟ್ರೂ ವೈರ್ಲೆಸ್ ಇಯರ್ ಬಡ್ ಅನ್ನು ಶೀಘ್ರವೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.