Advertisement

Boult Striker Pro ಸ್ಮಾರ್ಟ್ ವಾಚ್: Luxury ವಿನ್ಯಾಸ, ಬೆಲೆ ಎಷ್ಟು?

11:06 PM Aug 19, 2023 | Team Udayavani |

ಇದು ಸ್ಮಾರ್ಟ್ ವಾಚ್ ಗಳ ಜಮಾನ. ಬಹುತೇಕ ಯುವಕರು, ವಿದ್ಯಾರ್ಥಿಗಳು ಸ್ಮಾರ್ಟ್ ವಾಚ್ ಗಳನ್ನು ಧರಿಸಿರುತ್ತಾರೆ. ಅನೇಕ ಭಾರತೀಯ ಬ್ರಾಂಡ್ ಗಳು ಸ್ಮಾರ್ಟ್ ವಾಚ್ ಗಳನ್ನು ತಯಾರಿಸುತ್ತಿವೆ. ಸ್ಮಾರ್ಟ್ ವಾಚ್ ತಯಾರಕ ಭಾರತೀಯ ಬ್ರಾಂಡ್ ಗಳಲ್ಲಿ ಬೌಲ್ಟ್ ಪ್ರಮುಖ ಹೆಸರು. ಬೌಲ್ಟ್ ಕಂಪೆನಿ ಬಜೆಟ್ ದರದಲ್ಲಿ ಉತ್ತಮ ಗುಣಮಟ್ಟದ, ಹಲವು ವೈಶಿಷ್ಟ್ಯಗಳುಳ್ಳ ಸ್ಮಾರ್ಟ್ ವಾಚ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇತ್ತೀಚಿಗೆ ಅದು ಹೊರತಂದಿರುವ ಹೊಸ ಸ್ಮಾರ್ಟ್ ವಾಚ್ Boult Striker Pro.

Advertisement

ಇದು ನೋಡಲು ಸ್ಟೈಲಿಶ್ ವಾಚ್ ಆಗಿದ್ದು, ಕಪ್ಪು, ನೀಲಿ ಮತ್ತು ಬೂದು ಬಣ್ಣದಲ್ಲಿ ಲಭ್ಯವಿದೆ. ಕಪ್ಪು ಬಣ್ಣದ್ದಕ್ಕೆ ಸ್ಟೆನ್ ಲೆಸ್ ಸ್ಟೀಲ್ ಸ್ಟ್ರಾಪ್ ಇದ್ದರೆ,ಉಳಿದೆರಡು ಬಣ್ಣಗಳ ವಾಚ್ ಗೆ ಪ್ಲಾಸ್ಟಿಕ್ ಸ್ಟ್ರಾಪ್ ನೀಡಲಾಗಿದೆ.

ಪರದೆ: ಸ್ಟ್ರೈಕರ್ ಪ್ರೊ 1.43 ಇಂಚಿನ ವೃತ್ತಾಕಾರದ AMOLED ಡಿಸ್‌ಪ್ಲೇ ಹೊಂದಿದೆ. ಈ ದರಪಟ್ಟಿಯಲ್ಲಿ ಅಮೋಲೆಡ್ ಪರದೆ ಇರುವುದು ಉತ್ತಮ ಅಂಶ. ಇದರಿಂದಾಗಿ ವಾಚ್ ನ ಪರದೆ ಬಹಳ ಶ್ರೀಮಂತವಾಗಿ ಕಾಣುತ್ತದೆ. 466*466 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 750 Nits ಬ್ರೈಟ್‌ನೆಸ್ ಹೊಂದಿದೆ. ಬಿಸಿಲಿನಲ್ಲೂ ಹೊಳಪಾಗಿ ಡಿಸ್ಪ್ಲೇ ಕಾಣುತ್ತದೆ. 60Hz ರಿಫ್ರೆಶ್ ದರವಿದೆ.

ವಿನ್ಯಾಸ: ಈ ಸ್ಮಾರ್ಟ್ ವಾಚ್ ನೋಡಲು ತುಂಬಾ ಲಕ್ಸುರಿ ವಾಚ್ ನಂತೆ ಕಾಣುವ ವಿನ್ಯಾಸ ಹೊಂದಿದೆ. ಕಪ್ಪು ಬಣ್ಣದ ಸ್ಟೆನ್ಲೆಸ್ ಸ್ಟೀಲ್ ಸ್ಟ್ರಾಪ್ ಮಾದರಿಯಲ್ಲಿ ಸಾಂಪ್ರದಾಯಿಕ ಕೈಗಡಿಯಾದ ಕಟ್ಟಿದ ಅನುಭವ ಉಂಟಾಗುತ್ತದೆ. ವಾಚ್ ನ ಚೈನ್ ಅನ್ನು ಬೇಕಾದ ಅಳತೆಗೆ ಹೊಂದಿಸಿಕೊಳ್ಳಲು ಸಣ್ಣ ಸಾಧನ ನೀಡಲಾಗಿದೆ. ಅದನ್ನು ಬಳಸಲು ಪರಿಣಿತಿ ಬೇಕು. ಅದರ ಬದಲು ವಾಚ್ ರಿಪೇರಿ ಅಂಗಡಿಗೆ ಹೋಗಿ ಚೈನ್ ಅನ್ನು ನಮ್ಮಕೈ ಅಳತೆಗೆ ಹೊಂದಿಸಿಕೊಳ್ಳುವುದು ಸುಲಭವಾದ ಕೆಲಸ.

ಇದರ ಡಯಲ್ ಝಿಂಕ್ ಅಲಾಯ್ ಮೆಟಾಲಿಕ್ ಫ್ರೇಮ್ ಹೊಂದಿದೆ. ಬಲಬದಿಯಲ್ಲಿ ಹಳೆಯ ಸಾಂಪ್ರದಾಯಿಕ ವಾಚ್ ಗಳ ಮಾದರಿಯ ತಿರುಗಣೆ (ಕ್ರೌನ್) ಇದೆ. ಇದರಲ್ಲಿ ವಾಚ್ ಡಯಲ್ ವಿನ್ಯಾಸವನ್ನು ಬದಲಿಸಿಕೊಳ್ಳಬಹುದು. ಆಯ್ಕೆಗಳನ್ನೂ ಮಾಡಬಹುದು. ಅದರ ಕೆಳಗೆ ಇನ್ನೊಂದು ಚಪ್ಪಟೆಯಾಕಾರದ ಸೂಕ್ಷ್ಮ ಬಟನ್ ಇದ್ದು, ಇದು ವ್ಯಾಯಾಮ, ಸೈಕ್ಲಿಂಗ್, ವಾಕಿಂಗ್ ಇತ್ಯಾದಿ ಕಸರತ್ತುಗಳ ಮಾಪನಕ್ಕೆ ನೇರ ಪ್ರವೇಶ ನೀಡುತ್ತದೆ.

Advertisement

Boult Striker Pro ವಾಚ್ ಇಂಟೆಲಿಜೆಂಟ್ ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ಬೆಂಬಲಿಸುತ್ತದೆ. ಇದನ್ನು ತಿರುಗಣೆ (ಕ್ರೌನ್) ಮೇಲೆ ದೀರ್ಘವಾಗಿ ಒತ್ತುವ ಮೂಲಕ ಸಕ್ರಿಯಗೊಳಿಸಬಹುದು. ಧ್ವನಿ ಆಜ್ಞೆಗಳ ಮೂಲಕ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಸುಲಭವಾಗುತ್ತದೆ.

ಕಾರ್ಯಾಚರಣೆ: ಇದರಲ್ಲಿ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಇದೆ. ಇದು ಮೊಬೈಲ್ ಜೇಬಿನಲ್ಲಿದ್ದಾಗ, ಪ್ರಯಾಣದಲ್ಲಿರುವಾಗ ತ್ವರಿತ ಕರೆಗಳನ್ನು ಸ್ವೀಕರಿಸಲು ಅನುಕೂಲಕರವಾಗಿದೆ. ಬಳಕೆದಾರರು ಒಳಬರುವ ಕರೆಗಳನ್ನು ನಿರ್ವಹಿಸಬಹುದು, ಇತ್ತೀಚಿನ ಸಂಪರ್ಕಗಳನ್ನು ನೋಡಬಹುದು ಮತ್ತು ಕೀಪ್ಯಾಡ್‌ನಿಂದ ನೇರವಾಗಿ ವಾಚ್‌ನಲ್ಲಿ ಡಯಲ್ ಮಾಡಬಹುದು, ಇದು ಬಹಳ ಉಪಯುಕ್ತ ಫೀಚರ್ ಆಗಿದೆ.

ಈ ವಾಚ್ IP67 ವಾಟರ್ ರೆಸಿಸ್ಟೆಂಟ್ ಮತ್ತು ಡಸ್ಟ್ ಪ್ರೂಫ್ ಆಗಿದ್ದು, ನೀರಿನ ಸಿಂಚನ, ತುಂತುರು ಮಳೆ ಹನಿ ವಿರುದ್ಧ ರಕ್ಷಣೆ ನೀಡುತ್ತದೆ.

ಇದು SpO2 ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ ಮಾನಿಟರ್, 24*7 ಹೃದಯ ಬಡಿತ ಮಾನಿಟರ್, ರಕ್ತದೊತ್ತಡ ಮಾನಿಟರ್, ಸ್ತ್ರೀ ಋತುಚಕ್ರದ ಟ್ರ್ಯಾಕಿಂಗ್, ಸ್ಲೀಪ್ ಮಾನಿಟರ್, ಡ್ರಿಂಕ್ ವಾಟರ್ ರಿಮೈಂಡರ್ ಮತ್ತು ಸೆಡೆಂಟರಿ ರಿಮೈಂಡರ್ ಗಳನ್ನು ಹೊಂದಿದೆ. ಮಿನಿ ಗೇಮ್‌ಗಳು ಸಹ ಇವೆ.

150+ ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳು ಮತ್ತು ಕಸ್ಟಮ್ ವಾಚ್ ಫೇಸ್‌ಗಳನ್ನು ಬದಲಿಸಬಹುದು. ಅನಿಮೇಟೆಡ್ ವಾಚ್ ಫೇಸ್‌ಗಳು ಮತ್ತು ಬಹು UI ಶೈಲಿಗಳನ್ನು ಬೆಂಬಲಿಸುತ್ತದೆ 120+ ಸ್ಪೋರ್ಟ್ಸ್ ಮೋಡ್‌ಗಳ ಲಭ್ಯತೆಯು ಫಿಟ್‌ನೆಸ್ ಉತ್ಸಾಹಿಗಳಿಗೆ ವಿವಿಧ ರೀತಿಯ ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಲು ಸಹಾಯಕವಾಗಿದೆ.

ಈ ವಾಚ್ ಬೆಲೆ ಫ್ಲಿಪ್ ಕಾರ್ಟ್ ನಲ್ಲಿ 2,299 ರೂ. ಇದೆ. ಬೌಲ್ಟ್ ಸ್ಟ್ರೈಕರ್ ಪ್ರೊ, ಬಜೆಟ್ ಸ್ನೇಹಿ ಸ್ಮಾರ್ಟ್ ವಾಚ್ ಅನ್ನು ಬಯಸುವ ಗ್ರಾಹಕರು ಪರಿಗಣಿಸಬಹುದಾದ ವಾಚ್ ಎನ್ನಬಹುದು.

-ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next