Advertisement

Jammu & Kashmir: ಗುಡ್ಡ ಜರಿದು ಟ್ರಕ್ ಮೇಲೆ ಉರುಳಿ ಬಿದ್ದ ಬಂಡೆಕಲ್ಲು: ನಾಲ್ವರು ಮೃತ್ಯು

11:35 AM Sep 12, 2023 | Team Udayavani |

ಕಾಶ್ಮೀರ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಆಳವಾದ ಕಮರಿಗೆ ಉರುಳಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಬನಿಹಾಲ್ ಪ್ರದೇಶದ ಶೇರ್ ಬೀಬಿ ಬಳಿ ಅಪಘಾತ ಸಂಭವಿಸಿದೆ.

Advertisement

ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವೇಳೆ ಬಂಡೆ ಕಲ್ಲು ಜರಿದು ಟ್ರಕ್ ಮೇಲೆ ಬಿದ್ದ ಪರಿಣಾಮ ಟ್ರಕ್ ಕಮರಿಗೆ ಉರುಳಿ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟ್ರಕ್ ಆಳವಾದ ಕಮರಿಗೆ ಬಿದ್ದ ವೇಳೆ ಟ್ರಕ್ ಒಳಗಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಅಷ್ಟುಮಾತ್ರವಲ್ಲದೆ ಟ್ರಕ್ ನಲ್ಲಿದ್ದ ಆರು ಜಾನುವಾರುಗಳು ಸಹ ಅಪಘಾತದಲ್ಲಿ ಸಾವನ್ನಪ್ಪಿವೆ ಎಂದು ಅವರು ಹೇಳಿದರು. ಪೊಲೀಸರು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗುಡ್ಡ ಜರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

Advertisement

ಇದನ್ನೂ ಓದಿ: Red Wine: ರಸ್ತೆಯಲ್ಲಿ ಹೊಳೆಯಂತೆ ಹರಿದ ರೆಡ್ ವೈನ್… ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next