Advertisement
ಈ ಯೋಜನೆಯನ್ನು ಆರಂಭಿಸುವ ತೀರ್ಮಾನ ವನ್ನು ಈ ಹಿಂದೆಯೇ ಕೈಗೊಳ್ಳಲಾಗಿತ್ತು. ಆದರೆ ಅದಕ್ಕೆ ಹೊಂದಿಕೊಂಡು ಸ್ಥಾಪಿಸಬೇಕಾಗಿರುವ ಕುಡಿಯುವ ನೀರಿನ ಜಲಾಶಯ ಮತ್ತು ಅದಕ್ಕೆ ಅಗತ್ಯದ ಸರ್ಟಿಫಿಕೇಟ್ ಲಭಿಸುವ ವಿಚಾರದಲ್ಲಿ ವಿಳಂಬ ಉಂಟಾಗಿತ್ತು. ಆದ್ದರಿಂದ ಸಕಾಲದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ ಎಂದು ಜಲ ಪ್ರಾಧಿಕಾರವು ಹೇಳಿದೆ.
ಇತರ ಬಾಟಲಿ ನೀರಿಗಿಂತ ಕಡಿಮೆ ದರದಲ್ಲಿ ಜಲ ಪ್ರಾಧಿ ಕಾರವು ತನ್ನ ಬಾಟಲಿ ನೀರನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಆ ಮೂಲಕ ನಷ್ಟದ ಹಾದಿಯಲ್ಲಿರುವ ಪ್ರಾಧಿಕಾರಕ್ಕೆ ಆದಾಯ ದೊರಕಿಸುವ ವ್ಯವಸ್ಥೆಗೆ ಸರಕಾರವು ಚಾಲನೆ ನೀಡಿದೆ.
Related Articles
Advertisement
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಮೂಲಗಳ ಶೋಧ
ಬಾಟಲಿ ನೀರಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಾಶಯಗಳನ್ನು ಗುರುತಿಸಲಾಗುವುದು. ಬಳಿಕ ಆ ನೀರನ್ನು ಶುದ್ಧೀಕರಣಗೊಳಿಸಿ ಬಾಟಲಿಗಳಿಗೆ ತುಂಬಿಸಲಾಗುವುದು. ಈ ನಿಟ್ಟಿನಲ್ಲಿ ಜಲಮೂಲಗಳನ್ನು ಹುಡುಕುವ ಕಾರ್ಯ ಮೊದಲಿಗೆ ನಡೆಯಲಿದ್ದು, ಕೆಲವು ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಪೂರ್ತಿ ಯಾಗಿದೆ. ಕಾಸರಗೋಡು ಜಿಲ್ಲೆಯಲ್ಲೂ ಜಲಸಂಪನ್ಮೂಲಗಳ ಆಯ್ಕೆ ವಿಚಾರವು ಪ್ರಗತಿಯಲ್ಲಿದೆ.