Advertisement

ಬಾಟಲಿ ನೀರು ಮಾರಿ ಸಹಾಯಧನ ಸಂಗ್ರಹ

08:02 PM May 12, 2019 | Team Udayavani |

ಬೆಳ್ತಂಗಡಿ: ಬೆಳ್ತಂಗಡಿಯ ಮುಂಡಾಜೆ ಬಳಿಯ ಶ್ರುತಿ ಶೆಟ್ಟಿ ಅವರು ಟ್ರಂಬೊಸೈಟೋಪೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಕುಟುಂಬಕ್ಕೆ ನೆರವಾಗಲು ರಾಜಕೇಸರಿ ತಂಡ ವಿನೂತನ ಪ್ರಯತ್ನ ನಡೆಸಿದೆ.

Advertisement

ಬಡ ಕುಟುಂಬಕ್ಕೆ ಕೈಲಾದ ಸಹಾಯ ಮಾಡುವ ದೃಷ್ಟಿಯಿಂದ ರವಿವಾರ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ರಾಜಕೇಸರಿಯ ಸಂಸ್ಥಾಪಕರಾದ ದೀಪಕ್‌ ಜಿ. ನೇತೃತ್ವದಲ್ಲಿ ಸುಮಾರು 22 ಮಂದಿ ಸದಸ್ಯರು ಜತೆಗೂಡಿ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಾಟಲಿ ನೀರು ಮಾರಿ ಅದರಿಂದ ಬಂದ ಲಾಭದ ಹಣವನ್ನು ಕುಟುಂಬಕ್ಕೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಬೆಳಗ್ಗೆ ಕಾರ್ಯಕ್ರಮಕ್ಕೆ ಶುಭಕೋರಿ ಕಳುಹಿಸಿದ್ದರು. 50 ಸಾವಿರ ರೂ. ಗುರಿಯೊಂದಿಗೆ ಸುಮಾರು 22 ಮಂದಿ ತಂಡವು 10 ರೂ. ಬೆಲೆಯ 3,000 ಸಾವಿರ ಬಿಸ್ಲೇರಿ ನೀರಿನ ಬಾಟಲ್‌ ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಲಾಭಾಂಶದ 15 ಸಾವಿರ ರೂ. ಹಣ ಶ್ರುತಿ ಶೆಟ್ಟಿ ಚಿಕಿತ್ಸೆಗೆ ವಿನಿಯೋಗವಾಗಲಿದೆ.

ಪ್ರಯಾಣಿಕರೂ ಇದಕ್ಕೆ ಸಹಕರಿಸಿದ್ದು, ಹೆಚ್ಚಿನವರು ಹೆಚ್ಚಿನ ದರ ನೀಡಿ ಬಾಟಲಿ ಖರೀದಿಸಿ ಯುವಕರ ಕೆಲಸಕ್ಕೆ ಕೈಜೋಡಿಸಿದ್ದಾರೆ.

ಮಾದರಿ ಸಂಘಟನೆ
ಇಷ್ಟು ಮಾತ್ರವಲ್ಲದೆ ಉಭಯ ಜಿಲ್ಲೆಗಳಲ್ಲಿ ಮೆಡಿಕಲ್‌ ಕ್ಯಾಂಪ್‌, ಶಿಕ್ಷಣಕ್ಕೆ ಸಹಾಯಧನ, ಬಡವರಿಗೆ ಮನೆಕಟ್ಟಲು ನೆರವಾಗುವುದು ಸಹಿತ ಸಂಘದ ಸದಸ್ಯರು ತಿಂಗಳ ಒಂದು ವಾರದ ಸಂಬಳವನ್ನು ಬಡವರ ಸೇವೆಗಾಗಿ ಮೀಸಲಿರಿಸುವ ಮೂಲಕ ಸಮಾಜಕ್ಕೆ ಮಾದರಿ ಸಂಘಟನೆಯಾಗಿದೆ. ಈಗಾಗಲೇ ದ.ಕ. ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತನ್ನ ಶಾಖೆ ಹೊಂದಿದ್ದು, ಸಾವಿರಾರು ಯುವಕರು ಕೈಜೋಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next