Advertisement
ಬೇಕಾಗುವ ವಸ್ತು: ತಂಪು ಪಾನೀಯದ ಖಾಲಿ ಪ್ಲಾಸ್ಟಿಕ್ ಬಾಟಲಿ, ಚಾಕು, ಗಮ್‌ಟೇಪ್
ತಯಾರಿ: ಈ ಜಾದೂ ಪ್ರದರ್ಶನಕ್ಕೆ ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯದ ಖಾಲಿ ಬಾಟಲಿಯನ್ನೇ ಬಳಸಬೇಕು. ಯಾಕೆಂದರೆ, ಅಂಥ ಬಾಟಲಿಗಳ ಮೇಲೆ ಕಂಪನಿಯ ಹೆಸರು ಬರೆದಿರುವ ಲೇಬಲ್ ಒಂದನ್ನು ಅಂಟಿಸಿರುತ್ತಾರೆ. ನಮ್ಮ ಜಾದೂವಿಗೆ ಅಗತ್ಯವಾಗಿ ಬೇಕಾಗಿರುವುದೇ ಅದು. ಪ್ರದರ್ಶನಕ್ಕೂ ಮೊದಲು ಆ ಲೇಬಲ್ ಅನ್ನು ಜೋಪಾನವಾಗಿ, ಹರಿಯದಂತೆ ತೆಗೆಯಿರಿ. ನಂತರ ಬಾಟಲಿಯ ಮೇಲೆ ಚಾಕುವಿನಿಂದ ಸ್ವಲ್ಪ ಅಗಲವಾದ ರಂಧ್ರ ಮಾಡಿ. ಆ ರಂಧ್ರದೊಳಗೆ ಬಾಟಲಿಯ ಮುಚ್ಚಳವನ್ನು ಹಾಕಿ, ಗಮ್‌ನ ಸಹಾಯದಿಂದ ಅಂಟಿಸಿ. ನಂತರ ಲೇಬಲ್ ಅನ್ನು ಪುನಃ ಬಾಟಲಿಯ ಮೇಲೆ ಅಂಟಿಸಿ. ಪ್ರೇಕ್ಷಕರಿಗೆ ಲೇಬಲ್ ಒಳಗಿನ ರಹಸ್ಯ ತಿಳಿಯುವುದಿಲ್ಲ. ಆಮೇಲೆ, ಬಾಯಲ್ಲಿ ಮಂತ್ರ ಜಪಿಸಿದಂತೆ ಮಾಡುತ್ತಾ ಜೋರಾಗೊಮ್ಮೆ ಬಾಟಲಿಯ ಮೇಲೆ ಕುಟ್ಟಿ. ಆ ಪೆಟ್ಟಿನ ರಭಸಕ್ಕೆ, ಬಾಟಲಿಗೆ ಅಂಟಿಕೊಂಡಿದ್ದ ಮುಚ್ಚಳ ಕೆಳಕ್ಕೆ ಬೀಳುತ್ತದೆ. ಮುಚ್ಚಳವು ಬಾಟಲಿಯೊಳಗೆ ಬಂದದ್ದು ಹೇಗೆಂದು ನೋಡುಗರು ಅಚ್ಚರಿಪಡುತ್ತಾರೆ. ವಿನ್ಸೆಂಟ್ ಲೋಬೋ