Advertisement
ದೇಶಕ್ಕೆ ಗೆಲುವು ತಂದುಕೊಟ್ಟರೂ ಅಸುನೀಗಿದ ಉಡುಪಿಯ ಕುವರನೂ ಅಜರಾಮರರಲ್ಲಿ ಒಬ್ಬ. ಇವರೇ ಉಡುಪಿ ಕುಂಜಿಬೆಟ್ಟು ಮೂಲದ ವಾಸುದೇವ ಭಂಡಾರ್‌ಕರ್ ಪುತ್ರ ಅಜಿತ್ ವಿ. ಭಂಡಾರ್‌ಕರ್.
Related Articles
Advertisement
ಅಜಿತ್ ಹೆಸರಿನಲ್ಲಿ ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ರಕ್ಷಣ ಇಲಾಖೆ ನಿರ್ವಹಣೆ ಕುರಿತು ನಿವೃತ್ತ ಹಿರಿಯ ಸೇನಾಧಿಕಾರಿಗಳ ಸಹಕಾರದಿಂದ ಪಠ್ಯಪುಸ್ತಕವನ್ನು ರೂಪಿಸಿದ್ದು, ಈ ಕುರಿತು ಕೋರ್ಸ್ ಆರಂಭಿಸುವ ಚಿಂತನೆ ಇದೆ. ಅಜಿತ್ ಅವರು ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದಾರೋ ಅಲ್ಲಿಗೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಸೆರೆಹಿಡಿದ 50 ನಿಮಿಷಗಳ ದಾಖಲೀಕರಣವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಶಾಲೆಗಳಲ್ಲಿ ಪ್ರಚುರಪಡಿಸಲಾಗುತ್ತಿದೆ. ಜು. 23ರ ಬೆಳಗ್ಗೆ 10ಕ್ಕೆ ಮಂಗಳೂರು ಶಕ್ತಿನಗರದ ಶಕ್ತಿ ಇಂಟರ್‌ನೇಶನಲ್ ಸ್ಕೂಲ್‌ನಲ್ಲಿ, ಜು. 25ರಿಂದ 31ರ ವರೆಗೆ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಬೆಂಗಳೂರಿನಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆಯಿಂದ ಜು. 24ರಂದು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ನಡೆಯುವ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣ ಕಾರ್ಯಾಗಾರದಲ್ಲಿ ಅಜಿತ್ ಸ್ಮರಣಾರ್ಥ ಶಕುಂತಳಾ ಅವರನ್ನು ಸಮ್ಮಾನಿಸಲಾಗುತ್ತಿದೆ. ಇಂತಹವರಿಂದಲೇ ದೇಶಕ್ಕೆ ಅಕ್ಷಯವೂ, ಎಲ್ಲರಿಗೆ ನಿರ್ಭಯವೂ ಆಗಬೇಕು.“ನಾವು ನಿಮಗಾಗಿ ಹೆಮ್ಮೆ ಪಡುತ್ತೇವೆ’ಎಂದು ಎಷ್ಟು ಜನರಿಗೆ ರಾಷ್ಟ್ರ (ಪತಿ) ಹೇಳಬಹುದು? ಅಜಿತ್ ಭಂಡಾರ್‌ಕರ್ ಅವರ ಸೇವೆಯನ್ನು ಪರಿಗಣಿಸಿ 2001ರ ಅಕ್ಟೋಬರ್ 12ರಂದು ಅಂದಿನ ರಾಷ್ಟ್ರಪತಿ ಕೆ.ಆರ್. ನಾರಾಯಣ್ ಶೌರ್ಯಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡುವಾಗ ಪತ್ನಿ ಶಕುಂತಳಾ ಅವರನ್ನು ಉದ್ದೇಶಿಸಿ “ವಿ ಆರ್ ಪ್ರೌಡ್ ಆಫ್ ಯು’ ಎಂದು ಉದ್ಗರಿಸಿದರು. ರಾಷ್ಟ್ರಕ್ಕೇ ಆಗಲೀ, ಸಮಾಜಕ್ಕೇ ಆಗಲಿ ಸಮರ್ಪಿತ ಜೀವಗಳಿಗೆ ಮಾತ್ರ ನಾಲ್ಕು ಶ್ಲಾಘನೆಯ ಮಾತು ಸಿಗುತ್ತದೆ, ಇಲ್ಲವಾದರೆ “ಗರ್ಭದಲ್ಲಿ ತಾಯಿಗೆ, ಅನಂತರ ಭೂತಾಯಿಗೆ ಭಾರವಷ್ಟೆ’!
ಜಮ್ಮು ಕಾಶ್ಮೀರದೊಳಗೆ ಪಾಕಿಸ್ಥಾನದ ಉಗ್ರಗಾಮಿಗಳ ಅಟ್ಟಹಾಸವನ್ನು ಮಣಿಸುವ ಕಾರ್ಯಾಚರಣೆ ಕಾರ್ಗಿಲ್ ಯುದ್ಧ. ಅವರನ್ನು ಸದೆ ಬಡಿಯಲು ವಿಶೇಷ ತರಬೇತಿ ಹೊಂದಿದ ರಾಷ್ಟ್ರೀಯ ರೈಫಲ್ಸ್ (ಆರ್‌ಆರ್)ಗೆ ಸ್ವಯಂ ಇಚ್ಛೆಯಿಂದ ಹೋಗುವವರು ಕಡಿಮೆ. ಹಾಗಿದ್ದರೆ ದೇಶದ ಗಡಿ ಕಾಯುವವರು ಯಾರು ಎಂದು ಪ್ರಶ್ನಿಸಿ ಸ್ವಯಂ ಆಸಕ್ತಿಯಿಂದ ಈ ಹೊಣೆಗಾರಿಕೆಯನ್ನು ಅಜಿತ್ ಸ್ವೀಕರಿಸಿದರು. ಮದುವೆಯಲ್ಲಿ ವಿಶೇಷ ಪೇಟವನ್ನು ಒಲ್ಲೆ ಎಂದು ಗಾಂಧೀಟೋಪಿ ಧರಿಸಿದ್ದ ಅಜಿತ್ ಯುದ್ಧಭೂಮಿಯಲ್ಲಿ ವೀರಾಗ್ರಣಿ. ಪೂಂಛ… ಫೈಜಲಾಬಾದ್‌ನಲ್ಲಿ ಐವರು ಕಟ್ಟಾ ಉಗ್ರಗಾಮಿಗಳು ಅವಿತಿದ್ದಾಗ 25 ಆರ್‌ಆರ್ ತುಕಡಿಯ ಸೆಕಂಡ್ ಇನ್ ಕಮಾಂಡ್ ಆಗಿ ಕಾರ್ಯಾಚರಣೆ ಯಲ್ಲಿ ತಾನೇ ಮುಂದಾಗಿ ನಿಂತರು. ಒಬ್ಬನನ್ನು ಉರುಳಿಸಿದ ಬಳಿಕ ಅವಿತಿದ್ದ ಇನ್ನೊಬ್ಬ ಉಗ್ರಗಾಮಿ ಒಂದೇ ಸಮನೆ ಗುಂಡಿನ ಮಳೆಗೆರೆದ. ಗಾಯಗೊಂಡರೂಮುನ್ನುಗ್ಗಿದ ಅಜಿತ್ ಮತ್ತಿಬ್ಬರನ್ನು ಹೊಡೆದುರುಳಿಸಿದರು. ಗಂಭೀರ ಗಾಯಗೊಂಡ ಅಜಿತ್ 1999ರ ಅಕ್ಟೋಬರ್ 30ರಂದು (ಶನಿವಾರ) ಮರಣವನ್ನಪ್ಪಿದರು, ಇವರ ಕಾರ್ಯ ಇತರ ಸೈನಿಕರನ್ನು ಉಳಿಸಿತು. -ಮಟಪಾಡಿ ಕುಮಾರಸ್ವಾಮಿ